4G ಇಂಟರ್ನೆಟ್‌ನಲ್ಲಿ ಯಾವ ಟೆಲಿಕಾಂ ನಂಬರ್‌ ಒನ್‌ ಗೊತ್ತಾ?

|

ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ Vi ಇಂಡಿಯಾ (ವೊಡಾಫೋನ್-ಐಡಿಯಾ) ಭಾರತದ ಅತಿ ವೇಗದ 4G ಆಪರೇಟರ್ ಎಂದು ಬುಧವಾರ ಸ್ಪೀಡ್‌ಟೆಸ್ಟ್ ಪ್ಲಾಟ್‌ಫಾರ್ಮ್‌ ಕಂಪನಿಯಾದ ಓಕ್ಲಾ ಹೇಳಿದೆ. ಆದರೆ ದೇಶದಲ್ಲಿ ಅತಿ ಹೆಚ್ಚು 4G ನೆಟವರ್ಕ್‌ ಲಭ್ಯತೆ ಇರುವ ಟೆಲಿಕಾಂ ರಿಲಾಯನ್ಸ್‌ ಜಿಯೋ ಗುರುತಿಸಿಕೊಂಡಿದೆ.

4G ಇಂಟರ್ನೆಟ್‌ನಲ್ಲಿ ಯಾವ ಟೆಲಿಕಾಂ ನಂಬರ್‌ ಒನ್‌ ಗೊತ್ತಾ?

2020 ರ ಮೂರನೇ ತ್ರೈಮಾಸಿಕದಲ್ಲಿ Vi ಇಂಡಿಯಾ ಸರಾಸರಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಕ್ರಮವಾಗಿ 13.74 Mbps ಮತ್ತು 6.19 Mbps ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ. ಏರ್‌ಟೆಲ್ ಸರಾಸರಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಕ್ರಮವಾಗಿ 13.58 Mbps ಮತ್ತು 4.15 Mbps ಎಂದು ನೋಂದಾಯಿಸಿದೆ ಎಂದು ಓಕ್ಲಾ ಮಾಹಿತಿ ನೀಡಿದೆ. ಭಾರತದ ಅತಿದೊಡ್ಡ ವೈರ್‌ಲೆಸ್ ಆಪರೇಟರ್ ಜಿಯೋ 9.71 Mbps ಮತ್ತು 3.41 Mbps ಅನ್ನು ಕ್ರಮವಾಗಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೋಂದಾಯಿಸಿದೆ ಎಂದು ಹೇಳಲಾಗಿದೆ.

4G ಇಂಟರ್ನೆಟ್‌ನಲ್ಲಿ ಯಾವ ಟೆಲಿಕಾಂ ನಂಬರ್‌ ಒನ್‌ ಗೊತ್ತಾ?

ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಯೋ ಪರೀಕ್ಷಿಸಿದ 99.7% ಸ್ಥಳಗಳಲ್ಲಿ ಲಭ್ಯವಿದೆ ಎಂದು ಓಕ್ಲಾ ತಿಳಿಸಿದೆ. ಹೇಳಿದ್ದಾರೆ. ಇದಲ್ಲದೆ, ಏರ್ಟೆಲ್ ಮತ್ತು ವಿ ಇಂಡಿಯಾ ಇದೇ ಅವಧಿಯಲ್ಲಿ ಪರೀಕ್ಷಿತ ಸ್ಥಳಗಳಲ್ಲಿ ಕ್ರಮವಾಗಿ 98.7% ಮತ್ತು 91.1% ರಲ್ಲಿ 4G ಉಪಸ್ಥಿತಿಯನ್ನು ಹೊಂದಿವೆ ಎಂದು ಕಂಪನಿ ತಿಳಿಸಿದೆ.

4G ಇಂಟರ್ನೆಟ್‌ನಲ್ಲಿ ಯಾವ ಟೆಲಿಕಾಂ ನಂಬರ್‌ ಒನ್‌ ಗೊತ್ತಾ?

ಹಾಗೆಯೇ ಓಕ್ಲಾ ಸಂಸ್ಥೆಯು 2020 ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ 15 ನಗರಗಳಲ್ಲಿ ಮೊಬೈಲ್ ಇಂಟರ್ನೆಟ್ ವೇಗದ ಮಾಹಿತಿ ಬಿಡುಗಡೆ ಮಾಡಿದೆ. ಈ ವರದಿಯು ಹೈದರಾಬಾದ್ ಅತ್ಯಂತ ವೇಗದ ನಗರವಾಗಿ ಹೊರಹೊಮ್ಮಿದ್ದು, 2020 ರ ಮೂರನೇ ತ್ರೈಮಾಸಿಕದಲ್ಲಿ ಹೈದರಾಬಾದ್ ಕ್ರಮವಾಗಿ 14.35 Mbps ಮತ್ತು 4.42 Mbps ವೇಗದ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ದಾಖಲಿಸಿದೆ ಎಂದು ಓಕ್ಲಾ ಹೇಳಿದ್ದಾರೆ.

ಮೊದಲ ಸ್ಥಾನದಲ್ಲಿ ಹೈದ್ರಾಬಾದ ಕಾಣಿಸಿಕೊಂಡಿದ್ದು, ಎರಡನೇ ಸ್ಥಾನದಲ್ಲಿ ಮುಂಬೈ ನಗರ ಕಾಣಿಸಿಕೊಂಡಿದೆ. ಹಾಗೆಯೇ ವಿಶಾಖಪಟ್ಟಣಂ ಮೂರನೇ ಸ್ಥಾನದಲ್ಲಿದ್ದು, ಇನ್ನು ಬೆಂಗಳೂರು ನಗರ ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬೆಂಗಳೂರಿನಲ್ಲಿ ಡೌನ್‌ಲೋಡ್ ವೇಗವು 14.35 Mbps ಮತ್ತು ಅಪ್‌ಲೋಡ್ ವೇಗ 4.42 Mbps ದಾಖಲಿಸಿದೆ ಎಂದು ಓಕ್ಲಾ ವರದಿ ಮಾಡಿದೆ.

Most Read Articles
Best Mobiles in India

English summary
Hyderabad, Mumbai, Visakhapatnam, Chennai and Kolkata are the fastest 4G cities in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X