ವಿ ಟೆಲಿಕಾಂನ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಚಂದಾದಾರರು ಫುಲ್ ಶಾಕ್!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿನ ಮಹತ್ತರ ಬದಲಾವಣೆಗಳು ನಡೆದಿವೆ. ಖಾಸಗಿ ಟೆಲಿಕಾಂಗಳ ನಡುವೆ ಪೈಪೋಟಿ ಸಹ ಅಧಿಕವಾಗಿದೆ. ಆ ಪೈಕಿ ವೊಡಾಫೋನ್-ಐಡಿಯಾ(Vi) ಟೆಲಿಕಾಂ ಸಹ ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಗ್ರಾಹಕರಿಗೆ ಅನುಕೂಲಕರ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಸಹ ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಆದರೆ ಈಗ ದರ ಏರಿಕೆ ಮಾಡಿ ಶಾಕ್ ನೀಡಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ಹಲವು ಆಕರ್ಷಕ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಪರಿಚಯಿಸಿದೆ. ಅವುಗಳಲ್ಲಿ ವಿ 598ರೂ ಹಾಗೂ ವಿ 749ರೂ. ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ. ಆದರೆ ವಿ ಟೆಲಿಕಾಂ ಸಂಸ್ಥೆಯು ಇದೀಗ ಈ ಎರಡು ಜನಪ್ರಿಯ ಯೋಜನೆಗಳ ಬೆಲೆಯಲ್ಲಿ 50ರೂ.ಗಳ ದರ ಏರಿಕೆ ಮಾಡಿದೆ. ಇನ್ನು ಈ ಯೋಜನೆಗಳು ಕಳೆದ ವರ್ಷ ಬಿಡುಗಡೆ ಆಗಿದ್ದವು. ಈ ಎರಡು ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

598ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

598ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ 598ರೂ. ಯೋಜನೆಯ ದರದಲ್ಲಿ 50ರೂ. ಏರಿಕೆ ಆಗಿದ್ದು, ಈಗ 649ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.ಈ ಯೋಜನೆಯಲ್ಲಿ ಒಟ್ಟು 80GB ಡೇಟಾ ಪ್ರಯೋಜನ ದೊರೆಯಲಿದೆ. ಈ ಪ್ಲ್ಯಾನ್‌ ಇಬ್ಬರೂ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 50GB ಮತ್ತು ಸೆಕೆಂಡರಿ ಸದಸ್ಯರಿಗೆ 30GB ಉಚಿತ ಡೇಟಾ ಲಭ್ಯವಾಗಲಿದೆ.

749ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

749ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ 749ರೂ. ಯೋಜನೆಯ ದರದಲ್ಲಿಯೂ ಸಹ 50ರೂ. ಏರಿಕೆ ಆಗಿದ್ದು, ಈಗ 799ರೂ. ಗಳಿಗೆ ಲಭ್ಯ. ಈ ಯೋಜನೆಯಲ್ಲಿ ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಇರಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಒಟ್ಟು 90GB ಡೇಟಾ ಸಿಗಲಿದ್ದು, ಪ್ರಾಥಮಿಕ ಸದಸ್ಯನಿಗೆ 60GB ಮತ್ತು ಸೆಕೆಂಡರಿ ಸದಸ್ಯರಿಬ್ಬರಿಗೂ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

ವಿ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ವಿ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಈ ಪ್ಲ್ಯಾನ್‌ನಲ್ಲಿ ಐದು ಸದಸ್ಯರನ್ನು ಹೊಂದಲು ಅವಕಾಶವಿದ್ದು, ತಿಂಗಳ ಬೆಲೆಯು 999ರೂ. ಆಗಿದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಸಹ ಇರಲಿದೆ. ಹಾಗೆಯೇ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 80GB ಮತ್ತು ಉಳಿದ ನಾಲ್ಕು ಸದಸ್ಯಗೆ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

Most Read Articles
Best Mobiles in India

English summary
Vi has silently hiked the prices of Rs 598 and Rs 749 Family postpaid plans to Rs 649 and Rs 799 respectively.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X