ವೇಗದ ನೆಟ್‌ವರ್ಕ್‌ನಲ್ಲಿ ಜಿಯೋ, ಏರ್‌ಟೆಲ್‌ಗೆ ಸೈಡ್‌ ಹೊಡೆದ ವಿ ಟೆಲಿಕಾಂ!

|

ಭಾರತದ ಟೆಲಿಕಾಂ ವಲಯದಲ್ಲಿ ವೊಡಾಫೋನ್‌ ಐಡಿಯಾ ಸಾಕಷ್ಟು ಅಡೆತಡೆಗಳನ್ನು ಎದುರಿಸಿದರೂ ಕೂಡ ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಏರ್‌ಟೆಲ್‌ ಮತ್ತು ಜಿಯೋ ನಡುವೆ ಪೈಪೋಟಿ ನಡೆಸುತ್ತಿರುವ ವಿ ಟೆಲಿಕಾಂ 2021 ರ ಮೊದಲ ತ್ರೈಮಾಸಿಕದಲ್ಲಿ ಹೊಸ ದಾಖಲೆ ಬರೆದಿದೆ. 2021 ರ ಮೊದಲ ತ್ರೈಮಾಸಿಕದಲ್ಲಿ ಅತ್ಯಧಿಕ ಮೊಬೈಲ್ ನೆಟ್‌ವರ್ಕ್ ವೇಗವನ್ನು ದಾಖಲಿಸುವ ಮೂಲಕ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗೆ ಸೆಡ್ಡು ಹೊಡೆದಿದೆ.

Ookla

ಹೌದು, ವಿ ಟೆಲಿಕಾಂ ಭಾರತದಲ್ಲಿ Ookla ಹಂಚಿಕೊಂಡ ಮಾಹಿತಿಯ ಪ್ರಕಾರ, 2021 ರ ಮೊದಲ ತ್ರೈಮಾಸಿಕದಲ್ಲಿ ಅತ್ಯದಿಕ ಮೊಬೈಲ್‌ ನೆಟ್‌ವರ್ಕ್‌ ವೇಗವನ್ನು ದಾಖಲಿಸಿದೆ. ಒಕ್ಲಾ ಪ್ರಕಾರ Vi ಟೆಲಿಕಾಂ ಮೊದಲ ತ್ರೈಮಾಸಿಕದಲ್ಲಿ 16.10 Mbps ವೇಗವನ್ನು ಪಡೆದುಕೊಂಡಿದೆ. ಆದರೆ ಜಿಯೋ 13.98 Mbps ಸ್ಪೀಡ್‌ಗೆ ಸುಸ್ತಾಗಿದ್ದರೆ, ಏರ್‌ಟೆಲ್ 13.86 Mbps ವೇಗವನ್ನು ಪಡೆದುಕೊಂಡಿದೆ. ಹಾಗಾದ್ರೆ ವೋಡಾಫೋನ್‌ ಐಡಿಯಾದ ಈ ವೇಗಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಒಕ್ಲಾ ನೀಡಿರುವ ವರದಿ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಐಫೋನ್‌ 11, ರೆಡ್‌ಮಿ ನೋಟ್‌5 ಪ್ರೊ, ರೆಡ್ಮಿ ನೋಟ್‌ 8 ಪ್ರೊ ಮತ್ತು ರೆಡ್‌ಮಿ ನೋಟ್‌ 7 ಪ್ರೊ ಮತ್ತು ಐಫೋನ್‌ XR ಅನ್ನು ಒಳಗೊಂಡಿರುವ 34,87,870 ಡಿವೈಸ್‌ಗಳ ಡೇಟಾವನ್ನು ದಾಖಲಿಸಲಾಗಿದೆ. ಈ ಡಿವೈಸ್‌ಗಳಲ್ಲಿ ದಾಖಲಾದ ಡೇಟಾದ ಒಟ್ಟಾರೆ ಸರಾಸರಿ ಡೌನ್‌ಲೋಡ್ ವೇಗವು 9.6 Mbps ಆಗಿದೆ. ಇದರಲ್ಲಿ ವಿ ಟೆಲಿಕಾಂ 11.34 Mbps ನ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದ್ದು, ಏರ್‌ಟೆಲ್ 10.10 Mbps ಡೌನ್‌ಲೋಡ್ ವೇಗವನ್ನು ದಾಖಲಿಸಿದೆ. ಹಾಗೆಯೇ ಜಿಯೋ ಟೆಲಿಕಾಂ 8.23 ​​Mbps ಮೀಡಿಯಾ ಡೌನ್‌ಲೋಡ್ ವೇಗವನ್ನು ದಾಖಲಿಸಿದೆ.

ವಿ ಟೆಲಿಕಾಂ

ಇನ್ನು ಈ ಮೊದಲ ತ್ರೈಮಾಸಿಕದಲ್ಲಿ ದಾಖಲಾದ ಸರಾಸರಿ ಅಪ್‌ಲೋಡ್ ವೇಗವು 3.19 Mbps ಆಗಿದೆ. ಇದರಲ್ಲಿ ವಿ ಟೆಲಿಕಾಂ 4.91 Mbps ವೇಗವನ್ನು ದಾಖಲಿಸಿದೆ, ಏರ್‌ಟೆಲ್ 3.16 Mbps ಸರಾಸರಿ ಅಪ್‌ಲೋಡ್ ವೇಗವನ್ನು ದಾಖಲಿಸಿದೆ ಮತ್ತು ಜಿಯೋ 2.54 Mbps ಸರಾಸರಿ ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಇದರಲ್ಲಿ ದಾಖಲಾದ ಒಟ್ಟಾರೆ ಸರಾಸರಿ ಲೇಟೆನ್ಸಿ 38 ms. ಹೊಂದಿದ್ದು, ಇದರಲ್ಲಿ ವಿ ಟೆಲಿಕಾಂ 36 ms ಸರಾಸರಿ ಲೇಟೆನ್ಸಿಯನ್ನು ದಾಖಲಿಸಿದೆ, ಏರ್‌ಟೆಲ್ 35 ms ನ ಸರಾಸರಿ ಲೆಟೆನ್ಸಿ ದಾಖಲಿಸಿದೆ ಮತ್ತು Jio 40 ms ನ ಸರಾಸರಿ ಲೇಟೆನ್ಸಿಯನ್ನು ದಾಖಲಿಸಿದೆ.

ನೆಟ್‌ವರ್ಕ್‌

ಈ ಬಾರಿ ಒಕ್ಲಾ ವೇಗದ ನೆಟ್‌ವರ್ಕ್‌ ವೇಗದ ಪರೀಕ್ಷೆಯನ್ನು ಮುಂಬೈ, ಅಹಮದಾಬಾದ್ ಮತ್ತು ದೆಹಲಿ ನಗರಗಳಲ್ಲಿ ನಡೆಸಿದೆ. ಇದರಲ್ಲಿ ವೊಡಾಫೋನ್ ಐಡಿಯಾ ಮುಂಬೈನಲ್ಲಿ 12.95 Mbps ಡೌನ್‌ಲೋಡ್ ವೇಗ ಮತ್ತು 4.45 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಆದರೆ ಏರ್‌ಟೆಲ್ 9.29 Mbps ಡೌನ್‌ಲೋಡ್ ವೇಗ ಮತ್ತು 3.05 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಇನ್ನು ಜಿಯೋ 8.74 Mbps ಡೌನ್‌ಲೋಡ್ ವೇಗ ಮತ್ತು 3.03 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಹಾಗೆಯೇ ಅಹಮದಾಬಾದ್‌ನಲ್ಲಿ, ವಿ 12.81 Mbps ಡೌನ್‌ಲೋಡ್ ವೇಗ ಮತ್ತು 5.67 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ.

ಏರ್‌ಟೆಲ್

ಇನ್ನು ಏರ್‌ಟೆಲ್ 9.99 Mbps ಡೌನ್‌ಲೋಡ್ ವೇಗ ಮತ್ತು 4.34 Mbps ಅಪ್‌ಲೋಡ್ ವೇಗ ಪಡದಿದ್ದರೆ, ಜಿಯೋ 7.83 Mbps ಡೌನ್‌ಲೋಡ್ ವೇಗ ಮತ್ತು 2.35 Mbps ಡೌನ್‌ಲೋಡ್ ವೇಗವನ್ನು ದಾಖಲಿಸಿದೆ. ಇದಲ್ಲದೆ ದೆಹಲಿಯಲ್ಲಿ Vi 12.53 Mbps ಡೌನ್‌ಲೋಡ್ ವೇಗ ಮತ್ತು 3.7 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಏರ್‌ಟೆಲ್ ಕೂಡ 10.71 Mbps ಅಪ್‌ಲೋಡ್‌ ಮತ್ತು 1.91 Mbps ಡೌನ್‌ಲೋಡ್ ವೇಗವನ್ನು ದಾಖಲಿಸಿದೆ. ಜಿಯೋ ಟೆಲಿಕಾಂ 8.80 Mbps ಡೌನ್‌ಲೋಡ್ ವೇಗ ಮತ್ತು 2.53 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ.

ಸರಾಸರಿ

ಇನ್ನುಳಿದಂತೆ ಈ ಬಾರಿ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ ಹಿಂದಿನ ತ್ರೈಮಾಸಿಕಕ್ಕಿಂತ 138.4ರೂ.ಗಳಿಂದ 143.6ರೂ.ಗಳಿಗೆ ಏರಿಕೆಯಾಗಿದೆ. ಇದು ಚಂದಾದಾರರ ತೊಡಗಿಸಿಕೊಳ್ಳುವಿಕೆಯ ಮಟ್ಟವನ್ನು ಹೆಚ್ಚಿಸಿದೆ ಎಂದು ET ವರದಿ ಮಾಡಿದೆ. ಹೆಚ್ಚಿನ ಡೇಟಾ ಮತ್ತು ಧ್ವನಿ ಬಳಕೆಯಿಂದಾಗಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷಕ್ಕೆ 23.5 ಶೇಕಡಾ ಏರಿಕೆಯಾಗಿದೆ ಎಂದು ಒಕ್ಲಾ ವರದಿಯಲ್ಲಿ ತಿಳಿಸಲಾಗಿದೆ.

Most Read Articles
Best Mobiles in India

English summary
VI Telecom Recorded The Highest Mobile Network Speed In The First Quarter Of 2021.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X