ವಾಟ್ಸಾಪ್‌ನಿಂದ ಐಒಎಸ್‌ ಬಳಕೆದಾರರ ಬಹು ನಿರೀಕ್ಷಿತ ಫೀಚರ್ಸ್‌ ಸೇರ್ಪಡೆ!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ತನ್ನ ಜನಪ್ರಿಯ ಫೀಚರ್ಸ್‌ಗಳಿಂದಾಗಿ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಇದೀಗ ಐಒಎಸ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸಿದ್ದ ಉಪಯುಕ್ತ ಫೀಚರ್ಸ್‌ ಒಂದನ್ನು ತನ್ನ ಐಒಎಸ್‌ ಬಳಕೆದಾರರಿಗೆ ಪರಿಚಯಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸಿದ್ದ ಮ್ಯೂಟ್‌ ವೀಡಿಯೋಸ್‌ ಫೀಚರ್ಸ್‌ ಅನ್ನು ಐಒಎಸ್ ಬಳಕೆದಾರರಿಗೆ ಪರಿಚಯಿಸಿದೆ. ಸದ್ಯದ ಮಾಹಿತಿ ಪ್ರಕಾರ ವೀಡಿಯೊಗಳನ್ನು ಮ್ಯೂಟ್ ಮಾಡುವ ಸಾಮರ್ಥ್ಯವನ್ನು ಐಒಎಸ್ ಬೀಟಾ ಬಳಕೆದಾರರಿಗೆ ಪರಿಚಯಿಸಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಾದ ಸುಮಾರು ಏಳು ತಿಂಗಳ ನಂತರ ಐಒಎಸ್‌‌ಗೆ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಹಾಗಾದ್ರೆ ಈ ಮ್ಯೂಟ್‌ ವೀಡಿಯೋಸ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೋಸ್‌

ಮ್ಯೂಟ್‌ ವೀಡಿಯೋಸ್‌ ಫೀಚರ್ಸ್‌ ಆಂಡ್ರಾಯ್ಡ್‌ನಲ್ಲಿ ಈಗಾಗಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್‌ಗೆ ಈ ಫೀಚರ್ಸ್‌ ಸೇರಿ ಏಳು ತಿಂಗಳುಗಳ ನಂತರ ಐಒಎಸ್‌ ಬಳಕೆದಾರರಿಗೆ ಪರಿಚಯಿಸುವ ಮನಸ್ಸು ವಾಟ್ಸಾಪ್‌ ಮಾಡಿದೆ. 7 ತಿಂಗಳ ಹಿಂದೆ ಆಂಡ್ರಾಯ್ಡ್ 2.21.3.13 ಗಾಗಿ ವಾಟ್ಸಾಪ್ ಬೀಟಾದಲ್ಲಿ ವೀಡಿಯೊಗಳನ್ನು ಮ್ಯೂಟ್ ಮಾಡಲು ಈ ಫೀಚರ್ಸ್‌ ಪರಿಚಯಿಸಲಾಗಿತ್ತು. ಸದ್ಯ ಐಒಎಸ್‌ನ ವಾಟ್ಸಾಪ್‌ ಖಾತೆಗೆ ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿದೆಯೇ ಎಂದು ಪರಿಶೀಲಿಸಲು, ವಾಟ್ಸಾಪ್ ಸಂಪರ್ಕಕ್ಕೆ ವೀಡಿಯೊ ಕಳುಹಿಸಲು ಪ್ರಯತ್ನಿಸಿ. ನೀವು ಒಂದೇ ರೀತಿಯದನ್ನು ನೋಡಿದರೆ ಈ ವೈಶಿಷ್ಟ್ಯವು ನಿಮಗೆ ಲಭ್ಯವಿದೆ ಎಂದು ಭಾವಿಸಬಹುದು.

ಈಗಾಗಲೇ

ಇನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಲೀಕ್‌ ಆಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಬಳಕೆದಾರರು ಅಂತಿಮವಾಗಿ ಮ್ಯೂಟ್ ವೀಡಿಯೋ ಆಯ್ಕೆಯನ್ನು ಮರುವಿನ್ಯಾಸಗೊಳಿಸಿದ ಟಾಗಲ್‌ನಲ್ಲಿ ಜಿಫ್‌ಗೆ ಪರಿವರ್ತಿಸುವ ಆಯ್ಕೆಯಲ್ಲಿ ಕಾಣಬಹುದಾಗಿದೆ. ಪ್ರತಿ ಬಾರಿ ನೀವು ವೀಡಿಯೊವನ್ನು ಎಡಿಟ್ ಮಾಡಲು ಪ್ರಯತ್ನಿಸಿದಾಗ, ಅದರ ಗಾತ್ರವನ್ನು ತಕ್ಷಣವೇ ಅಪ್‌ಡೇಟ್ ಮಾಡಲಾಗುತ್ತದೆ. ಐಒಎಸ್ ಬೀಟಾ ಪರೀಕ್ಷಕರಿಗೆ ಈ ಫೀಚರ್ಸ್‌ ಇಂದಿನಿಂದಲೇ ಲಭ್ಯವಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಈಗ ಬಳಕೆದಾರರು ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಫೀಚರ್ಸ್‌ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಸಹ ಹೇಳಲಾಗಿದೆ. ಇದನ್ನು ವಾಟ್ಸಾಪ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ವಾಟ್ಸಾಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಫೀಚರ್ಸ್‌ ನಲ್ಲಿ ಬಳಕೆದಾರರು ತಾವು ಕಳುಹಿಸಿದ ಚಿತ್ರವು ಸ್ಟಿಕರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇರಲಿದೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು 2.2137.3 ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್‌ ಬಳಕೆಗೆ ಬಂದರೆ ಯಾವುದೇ ಥರ್ಡ್-ಪಾರ್ಟಿ ಆಪ್ ಬಳಸದೆ, ನಿಮ್ಮ ಫೋಟೋಗಳನ್ನು ನೀವೇ ಸ್ಟಿಕ್ಕರ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ.

ಬೀಟಾ

ಇದರ ಜೊತೆಗೆ, ಕಳೆದ ತಿಂಗಳು ವಾಟ್ಸಾಪ್ ಡೆಸ್ಕ್‌ಟಾಪ್‌ಗಾಗಿ ಬೀಟಾ ಪ್ರೋಗ್ರಾಂ ಅನ್ನು ಪ್ರಾರಂಭಿಸಿತು, ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಬೀಟಾ ಆವೃತ್ತಿಯನ್ನು ವಿಂಡೋಸ್ ಮತ್ತು ಮ್ಯಾಕೋಸ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇನ್ನು ಇತ್ತೀಚಿಗೆ ವಾಟ್ಸಾಪ್‌ ಹೊಸದಾಗಿ ಚಾಟ್‌ ಬ್ಯಾಕಪ್‌ಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಪರಿಚಯಿಸಿದೆ. ಇದು ಯಾವುದೇ ಮೂರನೇ ವ್ಯಕ್ತಿ ಚಾಟ್‌ ಬ್ಯಾಕಪ್‌ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲದಂತೆ ಮಾಡಲಿದೆ. ಇಲ್ಲಿಯವರೆಗೆ, ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ, ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಬೇರೆಯವರ ಕೈಗೆ ಸಿಗುವುದು ಸುಲಭವಾಗಿತ್ತು. ಇದೀಗ ಚಾಟ್‌ ಬ್ಯಾಕಪ್‌ ಕೂಡ ಎನ್‌ಕ್ರಿಪ್ಶನ್‌ ಸೇರಿಸಿರುವುದರಿಂದ ಚಾಟ್‌ಬ್ಯಾಕಪ್‌ ಕೂಡ ಸೆಕ್ಯುರ್‌ ಆಗಿರಲಿದೆ.

Most Read Articles
Best Mobiles in India

English summary
WhatsApp is finally rolling out the mute videos feature to iOS users months after rolling it out for Android users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X