ವಿಜಯ್‌ ಸೇಲ್‌ ಆಪಲ್‌ ಡೇಸ್‌: ಐಫೋನ್‌ ಖರೀದಿಗೆ ಭರ್ಜರಿ ಡಿಸ್ಕೌಂಟ್‌!

|

ರಿಯಾಯಿತಿ ದರದಲ್ಲಿ ಆಪಲ್‌ ಐಫೋನ್‌ ಅನ್ನು ಖರೀದಿಸಬೇಕು ಎಂದು ಕೊಂಡವರಿಗೆ ಇದು ಶುಭ ಸುದ್ದಿ. ಏಕೆಂದರೆ ವಿಜಯ್‌ ಸೇಲ್‌ ಭಾರತಲ್ಲಿ ತನ್ನ ರಿಟೇಲ್‌ ಸ್ಟೋರ್‌‌ಗಳಲ್ಲಿ ವಿಶೇಷ ಆಪಲ್‌ ಸೇಲ್‌ ಡೇಸ್‌ ಅನ್ನು ಪ್ರಕಟಿಸಿದೆ. ಈ ಸೇಲ್‌ ಈಗಾಗಲೇ ಶುರುವಾಗಿದ್ದು, ಇದು ಮಾರ್ಚ್ 31 ರವರೆಗೆ ಮುಂದುವರಿಯುತ್ತದೆ. ಇನ್ನು ಈ ಸೇಲ್‌ ಕಂಪನಿಯ 107 ರಿಟೇಲ್‌ ಸೇಲ್‌ ಸ್ಟೋರ್‌ ಮತ್ತು ವಿಜಯ್‌ಸೇಲ್ಸ್.ಕಾಂನಲ್ಲಿ ಲಭ್ಯವಿರುತ್ತದೆ.

ಐಫೋನ್‌

ಹೌದು, ಪಾಲ್‌ ಐಫೋನ್‌ ಖರೀದಿಸಬೇಕೆಂದು ಕೊಂಡಿದ್ದರೆ ಈಗಲೇ ವಿಜಯ್‌ ಸೇಲ್ಸ್‌.ಕಾಮ್‌ಗೆ ಬೇಟಿ ನೀಡುವುದು ಉತ್ತಮ. ವಿಜಯ್‌ ಸೇಲ್‌ ಭಾರತದಲ್ಲಿ ಇದೀಗ ಆಫಲ್‌ ಡೇಸ್‌ ಸೇಲ್‌ ಅನ್ನು ಆಯೋಜಿಸಿದೆ. ಇನ್ನು ಈ ಸೇಲ್‌ ಸಮಯದಲ್ಲಿ, ರಿಟೇಲ್‌ ಐಫೋನ್‌ಗಳು, ಮ್ಯಾಕ್‌ಬುಕ್, ಐಪ್ಯಾಡ್, ಕೈಗಡಿಯಾರಗಳು, ಏರ್‌ಪಾಡ್‌ಗಳು, ಹೋಮ್ ಪಾಡ್‌ಗಳು ಮತ್ತು ಆಪಲ್ ಕೇರ್ + ಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಜಯ್‌ ಸೇಲ್

ವಿಜಯ್‌ ಸೇಲ್‌ನಲ್ಲಿ ಆರಂಭಿಕರಿಗಾಗಿ, ರಿಟೇಲ್‌ ಸೇಲ್‌ನಲ್ಲಿ ಐಫೋನ್ 11 ಅನ್ನು 51,999 ರ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 5,000 ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಅಂತೆಯೇ, ಐಫೋನ್ 12 ಅನ್ನು ಹಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 6000 ವರೆಗಿನ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಜೊತೆಗೆ 77, 490 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಐಫೋನ್

ಇದಲ್ಲದೆ ಐಫೋನ್ 12 ಮಿನಿ 65,499 ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 6,000 ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಐಫೋನ್ SE ಅನ್ನು ಆರಂಭಿಕ ಬೆಲೆಯಲ್ಲಿ 37, 499 ರೂ.ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 4,000 ರೂ.ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಐಪ್ಯಾಡ್

ಇನ್ನು ಐಪ್ಯಾಡ್ ಮಾದರಿಗಳಿಗೆ ಸಂಬಂಧಿಸಿದಂತೆ, 7 ನೇ ಜನ್ ಐಪ್ಯಾಡ್ ಅನ್ನು 24,500 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 3,000 ರೂ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಪಡೆದುಕೊಳ್ಳಬಹುದಾಗಿದೆ. ಅಂತೆಯೇ 8 ನೇ-ಜನ್ ಐಪ್ಯಾಡ್ 8 ಅನ್ನು 28,990ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಹೆಚ್ಚುವರಿ ಕ್ಯಾಶ್‌ಬ್ಯಾಕ್ 3,000 ರೂ.ವರೆಗೆ ಪಡೆದುಕೊಳ್ಳಬಹುದಾಗಿದೆ.

ಐಪ್ಯಾಡ್

ಅಲ್ಲದೆ ಈ ಸೇಲ್‌ನಲ್ಲಿ ಐಪ್ಯಾಡ್ ಏರ್ ಅನ್ನು 52, 490 ರೂ.ಆರಂಭಿಕ ಬೆಲೆಯಲ್ಲಿ ಲಭ್ಯ ಖರೀದಿಸಬಹುದಾಗಿದೆ. ಹಾಗೆಯೇ ಐಪ್ಯಾಡ್ ಪ್ರೊ 69,490 ರೂ.ಆರಂಭಿಕ ಬೆಲೆಯನ್ನು ಹೊದಿದೆ. ಇದಲ್ಲದೆ ಐಪ್ಯಾಡ್ ಡಿವೈಸ್‌ಗಳೊಂದಿಗೆ ಯಾವುದೇ ಆಪಲ್ ಕೇರ್ + ಅನ್ನು ಖರೀದಿಸುವಾಗ ಗ್ರಾಹಕರು 15% ರಿಯಾಯಿತಿ ಪಡೆಯಬಹುದು. ಇನ್ನು ಲ್ಯಾಪ್‌ಟಾಪ್‌ಗಳಿಗೆ ಸಂಬಂಧಿಸಿದಂತೆ, ಈ ಸೇಲ್‌ನ ಸಮಯದಲ್ಲಿ, ಎಂ 1 ಚಿಪ್‌ನೊಂದಿಗಿನ ಮ್ಯಾಕ್‌ಬುಕ್ ಪ್ರೊ ಆರಂಭಿಕ ಬೆಲೆಯಲ್ಲಿ 1,15,900 ರೂ.ಗೆ ಲಭ್ಯವಿರುತ್ತದೆ. ಅಲ್ಲದೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 7,000 ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಇರುತ್ತದೆ.

ಆಪಲ್

ಇನ್ನು ಆಪಲ್ ವಾಚ್ ಸರಣಿ 6 38,990 ರೂ. ಆರಂಭಿಕ ಬೆಲೆಯಲ್ಲಿ ದೊರೆಯಲಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 3,000ರೂ. ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಆಪಲ್ ವಾಚ್ SE 28,490 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದಕ್ಕೂ ಕೂಡ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಖರೀದಿಸಿದರೆ 2,000 ವರೆಗಿನ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಪಡೆದುಕೊಳ್ಳಬಹುದಾಗಿದೆ.

Most Read Articles
Best Mobiles in India

Read more about:
English summary
Vijay Sales Special Apple Days sale: Offers on iphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X