Just In
Don't Miss
- Movies
'ಕೋಟಿಗೊಬ್ಬ 3' ಕಲರ್ ಫುಲ್ ಹಾಡು: ಕಿಚ್ಚನ ಜೊತೆ ಯಂಗ್ ಸ್ಟಾರ್ಸ್
- News
ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 71 ಸೈನಿಕರ ಹತ್ಯೆ
- Automobiles
ಟಾಟಾ ಹ್ಯಾರಿಯರ್ ಎಸ್ಯುವಿಗೆ ಭರ್ಜರಿ ಆಫರ್
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ವಿವೋ 5 ವರ್ಷದ ಸಂಭ್ರಮ : ಹೊಸ ಸ್ಮಾರ್ಟ್ಫೋನ್ಗಳಿಗೆ ಭಾರಿ ಡಿಸ್ಕೌಂಟ್!
ದೇಶಿಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಚೀನಾ ಮೂಲದ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ 'ವಿವೋ' ಕೂಡಾ ಒಂದು. ವಿವೋ ಸಂಸ್ಥೆಯು ಇದೀಗ ಭಾರತದಲ್ಲಿ ಐದು ವರ್ಷಗಳನ್ನು ಪೂರೈಸಿದ್ದು, ಈ ಸಂಭ್ರಮಕ್ಕಾಗಿ ಕಂಪನಿಯು ಸ್ಮಾರ್ಟ್ಫೋನ್ಗಳಿಗೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ವಿವೋ ಹಳೆಯ ಸ್ಮಾರ್ಟ್ಫೋನ್ಗಳ ಜೊತೆಗೆ ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಮಾರ್ಟ್ಫೋನ್ಗಳು ಸಹ ಡಿಸ್ಕೌಂಟ್ ನೀಡಿರುವುದು ವಿಶೇಷ.

ಹೌದು, ವಿವೋ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಐದು ವರ್ಷ ಪೂರೈಸಿದ ಖುಷಿಗಾಗಿ ಸ್ಮಾರ್ಟ್ಫೋನ್ಗಳಿಗೆ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ವಿವೋ ಇ-ಸ್ಟೋರ್, ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳು ಸೇರಿದಂತೆ ಆಫ್ಲೈನ್ ಸ್ಟೋರ್ಗಳಲ್ಲಿಯೂ ಖರೀದಿಸಬಹುದಾಗಿದೆ. ವಿವೋ ಡಿಸ್ಕೌಂಟ್ ಕೊಡುಗೆಯು ಇದೇ ನವೆಂಬರ್ 12ರಿಂದ ಶುರುವಾಗಿದ್ದು, ಇದೇ ನವೆಂಬರ್ 30ರ ವರೆಗೂ ಇರಲಿದೆ.

ಇತ್ತೀಚಿಗೆ ಬಿಡುಗಡೆ ಆಗಿರುವ ವಿವೋ V17 ಪ್ರೊ, ವಿವೋ S1, ವಿವೋ Z1 ಪ್ರೊ, ವಿವೋ ವೈ17, ಮತ್ತು ವಿವೋ Z1 X ಸ್ಮಾರ್ಟ್ಫೋನ್ಗಳು ಬಿಗ್ ಡಿಸ್ಕೌಂಟ್ ಪಡೆದುಕೊಂಡಿವೆ. ಹಾಗೆಯೇ ಹೆಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕ್ಗಳಿಂದ ಶೇ.10 ಪರ್ಸೆಂಟ್ ಡಿಸ್ಕೌಂಟ್ ಸಹ ಪಡೆದುಕೊಳ್ಳಬಹುದಾಗಿದೆ. ಇದರೊಟ್ಟಿಗೆ ನೋ ಕಾಸ್ಟ್ ಇಎಮ್ಐ ಸೌಲಭ್ಯದ ಆಯ್ಕೆಗಳು ಗ್ರಾಹಕರಿಗೆ ಸಿಗಲಿವೆ. ಹಾಗಾದರೇ ವಿವೋ ಸಂಸ್ಥೆಯ ಯಾವೆಲ್ಲಾ ಪ್ರಮುಖ ಸ್ಮಾರ್ಟ್ಫೋನ್ಗಳು ಡಿಸ್ಕೌಂಟ್ ಪಡೆದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಿವೋ Z1 ಪ್ರೊ
ಇತ್ತೀಚಿನ 'ವಿವೋ Z1 ಪ್ರೊ' ಸ್ಮಾರ್ಟ್ಫೋನ್ ಸಹ ಡಿಸ್ಕೌಂಟ್ ಪಡೆದಿದ್ದು, ಆರಂಭಿಕ 4GB + 64GB ವೇರಿಯಂಟ್ ಬೆಲೆಯು 13,990ರೂ.ಗಳಿಗೆ ಲಭ್ಯ ಇದೆ. 6GB + 64GB ವೇರಿಯಂಟ್ 14,990ರೂ.ಗಳಿಗೆ ಸಿಗಲಿದೆ ಮತ್ತು 6GB + 128GB ವೇರಿಯಂಟ್ 15,990ರೂ.ಗಳಿಗೆ ಲಭ್ಯವಾಗಲಿದೆ. ಸ್ನ್ಯಾಪ್ಡ್ರಾಗನ್ 712 ಪ್ರೊಸೆಸರ್ ಜೊತೆಗೆ 5,000mAh ಬ್ಯಾಟರಿ ಬಾಳಿಕೆ ಸಾಮರ್ಥ್ಯ ಪ್ರಮುಖ ಹೈಲೈಟ್ಸ್ಗಳಾಗಿವೆ.

ವಿವೋ Z1 X
ತ್ರಿವಳಿ ಕ್ಯಾಮೆರಾ ಸೆಟ್ಅಪ್ ಪಡೆದಿರುವ 'ವಿವೋ Z1 X' ಸ್ಮಾರ್ಟ್ಫೋನ್ ಮೂರು ವೇರಿಯಂಟ್ಗಳಲ್ಲಿ ಲಭ್ಯವಿದೆ. ಆರಂಭಿಕ 6GB + 64GB ವೇರಿಯಂಟ್ ಬೆಲೆಯು 15,990ರೂ.ಗಳಿಗೆ ಲಭ್ಯ ಇದೆ. ಹಾಗೆಯೇ 4GB + 128GB ವೇರಿಯಂಟ್ ಸಹ 15,990ರೂ.ಗಳಿಗೆ ಸಿಗಲಿದೆ ಮತ್ತು 6GB + 128GB ವೇರಿಯಂಟ್ 17,990ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನಿನಲ್ಲಿ ಸ್ನ್ಯಾಪ್ಡ್ರಾಗನ್ 712 ಪ್ರೊಸೆಸರ್ ಇದೆ.

ವಿವೋ ಯು10
ವಿವೋ ಯು10 ಸ್ಮಾರ್ಟ್ಫೋನ್ 5,000mAh ಬ್ಯಾಟರಿ, ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 665, AI ಬೆಂಬಲಿತ ತ್ರಿವಳಿ ಕ್ಯಾಮೆರಾ ಹಾಗೂ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. 3GB+32GB ವೇರಿಯಂಟ್ 8,990ರೂ.ಗಳಿಗೆ ಲಭ್ಯ ಇದೆ. ಹಾಗೆಯೇ 3GB+64GB ವೇರಿಯಂಟ್ 9,490ರೂ.ಗಳಿಗೆ ಸಿಗಲಿದ್ದು, ಇನ್ನು 4GB+64GB ವೇರಿಯಂಟ್ 9,990ರೂ.ಗಳಿಗೆ ಲಭ್ಯ.

ವಿವೋ S1
ವಿವೋ ಸಂಸ್ಥೆಯ ಇತ್ತೀಚಿನ ವಿವೋ ಎಸ್1 ಸ್ಮಾರ್ಟ್ಫೋನ್ ಸಹ ಡಿಸ್ಕೌಂಟ್ ಲಿಸ್ಟ್ನಲ್ಲಿದೆ. 4GB+128GB ವೇರಿಯಂಟ್ ಬೆಲೆಯು 16,990ರೂ. ಪ್ರೈಸ್ಟ್ಯಾಗ್ನಲ್ಲಿದ್ದು, ಇನ್ನು 6GB+64GB ವೇರಿಯಂಟ್ 17,990ರೂ.ಗಳಿಗೆ ಲಭ್ಯ. ಹಾಗೂ 6GB+128GB ವೇರಿಯಂಟ್ ಫೋನ್ 18.990ರೂ.ಗಳಿಗೆ ದೊರೆಯುತ್ತದೆ.

ಇತರೆ ವಿವೋ ಫೋನ್ಗಳು
6GB+128GB ವೇರಿಯಂಟ್ನ 'ವಿವೋ ವಿ15 ಪ್ರೊ' ಫೋನ್ ಬೆಲೆಯು 21,990ರೂ.ಗಳಾಗಿದ್ದು, 'ವಿವೋ ವೈ91' ಫೋನ್ ಬೆಲೆಯು 6,490ರೂ.ಗಳಿಗೆ ಸಿಗಲಿದೆ. ಇನ್ನು ವಿವೋ ವೈ12 ಫೋನ್ ಆರಂಭಿಕ ಬೆಲೆಯು 9,990ರೂ.ಗಳಿಗೆ ಸಿಗಲಿದ್ದು, ವಿವೋ ವೈ15 ಸ್ಮಾರ್ಟ್ಫೋನ್ 11,990ರೂ.ಗಳಿಗೆ ದೊರೆಯುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090