Just In
Don't Miss
- Movies
ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
- Finance
ಬೆಂಗಳೂರಿನಲ್ಲಿ ಕೇಜಿ ಈರುಳ್ಳಿಗೆ 200 ರುಪಾಯಿ; ಸೇಬು, ದಾಳಿಂಬೆಗಿಂತ ದುಬಾರಿ
- News
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ 'ಹೌದು ಹುಲಿಯಾ', ಇಲ್ಲಾಂದ್ರೆ!
- Automobiles
ಸಿಎನ್ಜಿ ಬಸ್ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ
- Sports
ಕ್ರಿಕೆಟ್, ಸೆಕ್ಸ್ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್ಗಳು ವೈರಲ್!
- Lifestyle
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ವಿವೋ U20' ಸ್ಮಾರ್ಟ್ಫೋನ್ ಬಿಡುಗಡೆ!..ಬೆಲೆ ಎಷ್ಟು?..ಫೀಚರ್ಸ್ಗಳೆನು?
ವಿವೋ ಸಂಸ್ಥೆಯ ಬಹುನಿರೀಕ್ಷಿತ 'ವಿವೋ U20' ಸ್ಮಾರ್ಟ್ಫೋನ್ ಇಂದು(ನವೆಂಬರ್ 22) ಬಿಡುಗಡೆ ಆಗಿದೆ. ದೇಶಿಯ ಮಾರುಕಟ್ಟೆಗೆ ಎಂಟ್ರಿ ಆಗಿರುವ ಈ ಸ್ಮಾರ್ಟ್ಫೋನ್ ಸ್ನ್ಯಾಪ್ಡ್ರಾಗನ್ 675 ಪ್ರೊಸೆಸರ್, 5,000mAh ಬ್ಯಾಟರಿ ಮತ್ತು ತ್ರಿವಳಿ ಕ್ಯಾಮೆರಾ ಫೀಚರ್ಸ್ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಕಂಪನಿಗಳ ಬಜೆಟ್ ಸ್ಮಾರ್ಟ್ಫೋನ್ಗಳಿಗೆ ಪೈಪೋಟಿ ನೀಡುವ ಸೂಚನೆಗಳನ್ನು ಹೊರಹಾಕಿದೆ.

ಹೌದು, ವಿವೋ ಸಂಸ್ಥೆಯ 'ವಿವೋ U20' ಸ್ಮಾರ್ಟ್ಫೋನ್ ಇಂದು (ನವೆಂಬರ್ 22) ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ವೇರಿಯಂಟ್ ಹಾಗೂ 6GB RAM ಮತ್ತು 64GB ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಆರಂಭಿಕ ಬೆಲೆಯು 10,990ರೂ.ಗಳಾಗಿದೆ. ಅಮೆಜಾನ್ ಮತ್ತು ವಿವೋ ವೆಬ್ ತಾಣಗಳ ಮೂಲಕ ಇದೇ ನವೆಂಬರ್ 28ರಂದು ಮೊದಲ ಸೇಲ್ ಶುರುಮಾಡಲಿದೆ. ಹಾಗಾದರೇ ವಿವೋ U20 ಸ್ಮಾರ್ಟ್ಫೋನ್ ಇತರೆ ಯಾವೆಲ್ಲಾ ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ಮತ್ತು ಡಿಸೈನ್
'ವಿವೋ U20' ಸ್ಮಾರ್ಟ್ಫೋನ್ 6.53 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ರೆಸಲ್ಯೂಶನನ್ನು ಡಿಸ್ಪ್ಲೇ ಹೊಂದಿದೆ. ಹಾಗೆಯೇ ಡಿಸ್ಪ್ಲೇ ಪಿಲ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 1080 x 2340 ಆಗಿರಲಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿಯ ಅಡುವಿನ ಅನುಪಾತ ಶೇ.90.3% ಆಗಿದೆ. ಡಿಸ್ಪ್ಲೇಯು ವಾಟರ್ಡ್ರಾಪ್ ನಾಚ್ ಮಾದರಿಯಲ್ಲಿರಲಿದ್ದು, ಡಿಸ್ಪ್ಲೇಯ ಪ್ರಖರತೆಯು ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಅನುಕೂಲಕರವಾಗಿದೆ.

ಪ್ರೊಸೆಸರ್ ಸಾಮರ್ಥ್ಯ
'ವಿವೋ U20' ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 675 ಪ್ರೊಸೆಸರ್ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಫನ್ಟಚ್ OS 9 ಬೆಂಬಲಿತ ಅಂಡ್ರಾಯ್ಡ್ 9 ಪೈ ಓಎಸ್ ಅನ್ನು ಪಡೆದಿದೆ. ಇದರೊಂದಿಗೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಎಸ್ಡಿ ಕಾರ್ಡ್ ಮೂಲಕ 256GB ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್ 10 ಓಎಸ್ ಅಪ್ಡೇಟ್ ಆಯ್ಕೆ ಇದೆ.

ಸ್ಪೆಷಲ್ ಕ್ಯಾಮೆರಾ
ವಿವೋ U20' ಸ್ಮಾರ್ಟ್ಫೋನ್ ತ್ರಿವಳಿ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್ ಹಾಗೂ ನೈಟ್ ಮೋಡ್ ಆಯ್ಕೆಯನ್ನು ಹೊಂದಿದೆ. ಇನ್ನು ಸೆಕೆಂಡ್ ಕ್ಯಾಮೆರಾವು 8ಎಂಪಿ ಸೆನ್ಸಾರ್ನ ವೈಡ್ ಆಂಗಲ್ ಲೆನ್ಸ್ನಲ್ಲಿದೆ. ತೃತೀಯ ಕ್ಯಾಮೆರಾವು 2ಎಂಪಿ ಮೈಕ್ರೋ ಸೆನ್ಸಾರ್ ಹೊಂದಿರಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಪಡೆದುಕೊಂಡಿದೆ ಜತೆಗೆ ಅಗತ್ಯ ಎಡಿಟಿಂಗ್ ಫೀಚರ್ಸ್ಗಳು ಇವೆ.

ಬ್ಯಾಟರಿ ಪವರ್
ವಿವೋ U20' ಸ್ಮಾರ್ಟ್ಫೋನಿನಲ್ಲಿ 5,000mAh ಬ್ಯಾಟರಿ ಸಾಮರ್ಥ್ಯವನ್ನು ನೀಡಲಾಗಿದೆ ಹಾಗೆಯೇ ಇದಕ್ಕೆ ಬೆಂಬಲವಾಗಿ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ 273 ಗಂಟೆಗಳ ಸ್ಟ್ಯಾಂಡ್ಬೈ ಬ್ಯಾಕ್ಅಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೇ 11 ಗಂಟೆಗಳ ಫೇಸ್ಬುಕ್ ಮತ್ತು ಯೂಟ್ಯೂಬ್ ಬಳಕೆ ಬ್ಯಾಕ್ಅಪ್ ನೀಡಲಿದೆ.

ಬೆಲೆ ಮತ್ತು ಲಭ್ಯತೆ
ವಿವೋ U20' ಸ್ಮಾರ್ಟ್ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಆರಂಭಿಕ 4GB RAM ಮತ್ತು 64GB ವೇರಿಯಂಟ್ ಬೆಲೆಯು 10,990ರೂ.ಗಳಾಗಿದೆ. ಅದೇ ರೀತಿ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 11,990ರೂ.ಗಳಾಗಿದೆ. ರೇಸಿಂಗ್ ಬ್ಲ್ಯಾಕ್ ಮತ್ತು ಬ್ಲೆಜ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಅಮೆಜಾನ್ ಮತ್ತು ವಿವೋ ತಾಣಗಳಲ್ಲಿ ಇದೇ ನವೆಂಬರ್ 28ರಂದು ಫಸ್ಟ್ ಸೇಲ್ ನಡೆಯಲಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090