Just In
- 20 hrs ago
ಕಳೆದು ಹೋದ ಸ್ಮಾರ್ಟ್ಫೋನ್ನಲ್ಲಿನ ನಿಮ್ಮ ವಾಟ್ಸಾಪ್ ಅಕೌಂಟ್ ಮತ್ತೆ ಪಡೆಯುವುದು ಹೇಗೆ?
- 23 hrs ago
ರಿಯಲ್ಮಿ C25 ಫಸ್ಟ್ ಲುಕ್: ಬಜೆಟ್ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್!
- 1 day ago
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್ ಮಾಡುವುದು ಹೇಗೆ?
- 1 day ago
ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!
Don't Miss
- News
ನಿಘಂಟು ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ
- Lifestyle
ಸೋಮವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Movies
ಮೂರು ಕತೆ, ಮೂರು ನಿರ್ದೇಶಕರು 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎನ್ನುತ್ತಿರುವುದೇಕೆ?
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ವಿವೋ x60 ಸ್ಮಾರ್ಟ್ಫೋನ್ ಸರಣಿ!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ ಕಂಪೆನಿ ತನ್ನ ಬಿನ್ನ ಮಾದರಿಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಅನೇಕ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿರುವ ವಿವೋ ತನ್ನ X ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಪರಿಚಯಿಸಲು ಸಿದ್ಧತೆ ನಡೆಸಿದೆ.ಇತ್ತೀಚೆಗೆ ತನ್ನ ಪ್ರಮುಖ, X60 ಸರಣಿಯ ಸ್ಮಾರ್ಟ್ಫೋನ್ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿರುವ ವಿವೋ ಈ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿಕೊಂಡಿದೆ.

ಹೌದು, ವಿವೋ ತನ್ನ X60 ಸರಣಿಯ ಸ್ಮಾರ್ಟ್ಫೋನ್ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಸರಣಿಯ ಸ್ಮಾರ್ಟ್ಫೋನ್ಗಳು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಭಾರತಕ್ಕೆ ಲಗ್ಗೆ ಇಡಲಿವೆ ಎಂದು ಹೇಳಲಾಗಿದೆ. ವಿಶೇಷವೆಂದರೆ, ಭಾರತದಲ್ಲಿ ವಿವೊ X60 ಮತ್ತು X60 ಪ್ರೊ ಮಾತ್ರವಲ್ಲ, X60 ಪ್ರೊ + ಕೂಡ ಬಿಡುಗಡೆ ಆಗಲಿದೆ. ಹಾಗಾದ್ರೆ ವಿವೊ X60 ಪ್ರೊ + ಸ್ಮಾರ್ಟ್ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಪ್ಲೇ
ವಿವೊ X60 ಸರಣಿಯಲ್ಲಿ ವಿವೋ X60 ಪ್ರೊ + ಸ್ಮಾರ್ಟ್ಫೋನ್ 1080x2376 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇದರ ಸ್ಕ್ರೀನ್ ಹೆಚ್ಡಿಆರ್ 10 + ನಂತಹ ಫೀಚರ್ಸ್ಗಳಿಗೆ ಬೆಂಬಲವನ್ನು ನೀಡುತ್ತದೆ.

ಪ್ರೊಸೆಸರ್
ಇದು ಸ್ನಾಪ್ಡ್ರಾಗನ್ 888GPU ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಹಿಂದಿನ ಉತ್ಪಾದನೆಗಿಂತ ಶೇಕಡಾ 35 ರಷ್ಟು ವೇಗವಾಗಿದೆ ಮತ್ತು ಶೇಕಡಾ 20 ರಷ್ಟು ಹೆಚ್ಚು ವಿದ್ಯುತ್-ಸಮರ್ಥವಾಗಿದೆ. ಹಾಗೆಯೇ 8GB RAM+128GB ಇಂಟರ್ ಸ್ಟೋರೇಜ್ ಅನ್ನು ಸಹ ಹೊಂದಿದೆ.

ಕ್ಯಾಮೆರಾ
ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಐಸೊಸೆಲ್ GN1 ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಅಲ್ಟ್ರಾವೈಡ್ ಮಾಡ್ಯೂಲ್ ಕ್ಯಾಮೆರಾ, ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾಗಳನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಇದು 4,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್ಬಿ-ಸಿ ಪೋರ್ಟ್ ಮೂಲಕ 55W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ 4G,5G, ಹಾಟ್ಸ್ಪಾಟ್, ವೈಫೈ, ಬ್ಲೂಟೂತ್ v5.2 ಅನ್ನು ಬೆಂಬಲಿಸಲಿದೆ. ಇದರ ಬೆಲೆ ಹಾಗೂ ಲಭ್ಯತೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999