ಅಗ್ಗದ ಬೆಲೆಯಲ್ಲಿ ವಿವೋ Y20 ಮತ್ತು ವಿವೋ Y20i ಸ್ಮಾರ್ಟ್‌ಫೋನ್‌ ಲಾಂಚ್!

|

ಜನಪ್ರಿಯ ವಿವೋ ಕಂಪೆನಿಯು ಹಲವು ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ವಿವೋ ಇದೀಗ ಮತ್ತೆ ಹೊಸದಾಗಿ ವಿವೋ Y20 ಮತ್ತು ವಿವೋ Y20i ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಫೀಚರ್ಸ್‌ಗಳಿಂದ ಗಮನ ಸೆಳೆದಿವೆ.

ವಿವೋ

ಹೌದು, ವಿವೋ ಕಂಪನಿಯು ಇದೀಗ ಭಾರತದಲ್ಲಿ ವಿವೋ Y20 ಮತ್ತು ವಿವೋ Y20i ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೋನ್‌ಗಳು ಬಜೆಟ್‌ ಸ್ನೇಹಿ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿವೆ. ವಿವೋ Y20 ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 12,990ರೂ.ಗಳು ಆಗಿದೆ. ಹಾಗೆಯೇ ವಿವೋ Y20i ಸ್ಮಾರ್ಟ್‌ಫೋನ್ 3GB + 64GB ಸ್ಟೋರೇಜ್ ವೇರಿಯಂಟ್ ದರವು 11,490 ರೂ ಆಗಿದೆ. ಹಾಗಾದರೇ ವಿವೋ Y20 ಮತ್ತು ವಿವೋ Y20i ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿವೋ Y20 ಸ್ಮಾರ್ಟ್‌ಫೋನ್

ವಿವೋ Y20 ಸ್ಮಾರ್ಟ್‌ಫೋನ್

ವಿವೋ ಸಂಸ್ಥೆಯ ಹೊಸ ವಿವೋ Y20 ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.51 ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ಸ್ಟೈಲ್‌ ಮಾದರಿಯಲ್ಲಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. 4GB + 64GB ವೇರಿಯಂಟ್ ಆಯ್ಕೆ ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 460 ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಜೊತೆಗೆ ಮೈಕ್ರೋ-ಯುಎಸ್‌ಬಿ ಪೋರ್ಟ್, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, ಯುಎಸ್‌ಬಿ ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಇತರೆ ಸೌಲಭ್ಯಗಳು ಸೇರಿವೆ.

ವಿವೋ Y20i ಸ್ಮಾರ್ಟ್‌ಫೋನ್‌

ವಿವೋ Y20i ಸ್ಮಾರ್ಟ್‌ಫೋನ್‌

ವಿವೋ ಸಂಸ್ಥೆಯ ಹೊಸ ವಿವೋ Y20i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.51 ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ಸ್ಟೈಲ್‌ ಮಾದರಿಯಲ್ಲಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. 3GB + 64GB ವೇರಿಯಂಟ್ ಆಯ್ಕೆ ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 460 ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಜೊತೆಗೆ ಮೈಕ್ರೋ-ಯುಎಸ್‌ಬಿ ಪೋರ್ಟ್, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, ಯುಎಸ್‌ಬಿ ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಇತರೆ ಸೌಲಭ್ಯಗಳು ಸೇರಿವೆ.

ಲಭ್ಯತೆ ಮತ್ತು ಬೆಲೆ ಎಷ್ಟು?

ಲಭ್ಯತೆ ಮತ್ತು ಬೆಲೆ ಎಷ್ಟು?

ವಿವೋ ಕಂಪನಿಯು ವಿವೋ Y20 ಮತ್ತು ವಿವೋ Y20i ಬಜೆಟ್‌ ದರದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ವಿವೋ Y20 ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 12,990ರೂ.ಗಳು ಆಗಿದೆ. ಹಾಗೆಯೇ ವಿವೋ Y20i ಸ್ಮಾರ್ಟ್‌ಫೋನ್ 3GB + 64GB ಸ್ಟೋರೇಜ್ ವೇರಿಯಂಟ್ ದರವು 11,490 ರೂ ಆಗಿದೆ. ವಿವೋ Y20 ಫೋನ್ ಇದೇ ಆಗಷ್ಟ್ 28 ರಿಂದ ಸೇಲ್ ಆರಂಭಿಸಲಿದೆ. ಇನ್ನು ವಿವೋ Y20i ಫೋನ್ ಇದೇ ಸೆಪ್ಟೆಂಬರ್ 3ರಿಂದ ಮಾರಾಟ ಶುರುಮಾಡಲಿದೆ.

Most Read Articles
Best Mobiles in India

English summary
Vivo Y20 and Vivo Y20i phones are powered by the Qualcomm Snapdragon 460 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X