Just In
Don't Miss
- News
ಮೈಸೂರು, ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಇಬ್ಬರು ಸಾವು
- Automobiles
ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ ಮೆಗಾಸ್ಟಾರ್ ಮಮ್ಮುಟ್ಟಿ
- Sports
RR vs CSK: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಮೂವರು ಆಟಗಾರರಿವರು
- Lifestyle
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
- Movies
ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ 'ಪದ್ಮಶ್ರೀ' ಜೋಗತಿ ಮಂಜಮ್ಮ, ಮಕ್ಕಳ ಅಭಿನಯಕ್ಕೆ ಫಿದಾ
- Education
IOCL Recruitment 2022 : 43 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿತ ಮಾಡುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ವಿವೋ 'Y' ಸರಣಿಯ ಹೊಸ ಸ್ಮಾರ್ಟ್ಫೋನ್!
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ವಿವೋ ಕಂಪೆನಿ ತನ್ನ ಬಿನ್ನ ಮಾದರಿಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ತನ್ನ ಜನಪ್ರಿಯ ವಿವೋ 'Y' ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಅನ್ನು ವಿವೋ Y55 5G ಎಂದು ಹೆಸರಿಸಲಾಗಿದೆ. ಇದು ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಹೌದು, ವಿವೋ ಕಂಪೆನಿ ಭಾರತದಲ್ಲಿ 'Y' ಸರಣಿಯಲ್ಲಿ ಹೊಸ ವಿವೋ Y55 5G ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕದ ಬಗ್ಗೆ ವಿವೋ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಆನ್ಲೈನ್ನಲ್ಲಿ ವಿವೋ Y55 5G ಸ್ಮಾರ್ಟ್ಫೋನ್ ಭಾರತದಲ್ಲಿ ಲಾಂಚ್ ಆಗುವುದರ ಬಗ್ಗೆ ಮಾಹಿತಿ ಲೀಕ್ ಆಗಿದೆ. ಲಭ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಆಧಾರಿತ ಫನ್ಟಚ್OS UI ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ಆನ್ಲೈನ್ ಮಾಹಿತಿ ಸೋರಿಕೆಯ ಪ್ರಕಾರ ಈ ಸ್ಮಾರ್ಟ್ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ Y55 5G ಸ್ಮಾರ್ಟ್ಫೋನ್ 2408×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ HD + LCD ಡಿಸ್ಪ್ಲೇ ಹೊಂದಿರಲಿದೆ. ಇನ್ನು ಈ ಡಿಸ್ಪ್ಲೇ 20:9ರಚನೆಯ ಅನುಪಾತ ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಡಿಸ್ಪ್ಲೇ 84.5% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್ ಯಾವುದು?
ಇನ್ನು ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಬಲವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 12 ಆಧಾರಿತ ಫನ್ಟಚ್OS UI ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಹಾಗೆಯೇ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮೈಕ್ರೊ-SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಹೇಗಿದೆ?
ವಿವೋ Y55 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.1, GPS, BEIDOU, GLONASS, GALILEO, QZSS, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರ ಬೆಲೆ ಹಾಗೂ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದಲ್ಲದೆ ಕೆಲ ದಿನಗಳ ಹಿಂದೆಯಷ್ಟೇ ವಿವೋ ಕಂಪೆನಿ ಭಾರತದಲ್ಲಿ ಹೊಸ ವಿವೋ Y33T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ 58-ಇಂಚಿನ ಫುಲ್ HD+ ಡಿಸ್ಪ್ಲೇ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ವಿವೋ Y21T ಮಿಡ್ ಡೇ ಡ್ರೀಮ್ ಮತ್ತು ಮಿರರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ಫೋನ್ 18,990ರೂ ಬೆಲೆಯನ್ನು ಹೊಂದಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999