ಇಂದು 'ವಿವೋ Z1x' ಫೋನಿನ ಫಸ್ಟ್‌ ಸೇಲ್!..ಬೆಲೆ ಎಷ್ಟು?..ಆಫರ್ ಏನು?

|

ಚೀನಾ ಮೂಲದ ವಿವೋ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ವಿಶೇಷ ಗುರುತನ್ನು ಮೂಡಿಸಿದೆ. ಕಂಪನಿಯು ಇತ್ತೀಚಿಗೆ ಹೊಸದಾಗಿ 'ವಿವೋ Z1x' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಆ ಗುರುತಿಗೆ ಈಗ ಮತ್ತೊಂದು ಅಚ್ಚನ್ನು ಒತ್ತಿದೆ. 48ಎಂಪಿ ಕ್ಯಾಮೆರಾ ವೈಶಿಷ್ಟತೆಯಿಂದ ಗ್ರಾಹಕರನ್ನು ಆಕರ್ಷಿಸಿರುವ 'ವಿವೋ Z1x' ಸ್ಮಾರ್ಟ್‌ಫೋನಿನ ಮೊದಲ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ (ಸೆ.23) ಇಂದು ಆರಂಭವಾಗಲಿದೆ.

ಸ್ಮಾರ್ಟ್‌ಫೋನ್

ಹೌದು, ವಿವೋ ಕಂಪನಿಯು ತನ್ನ ಬಹುನಿರೀಕ್ಷಿತ 'ವಿವೋ Z1x' ಸ್ಮಾರ್ಟ್‌ಫೋನ್ ಫಸ್ಟ್‌ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12ರಿಂದ ಶುರುವಾಗಲಿದೆ. ಬಿಗ್ ಬ್ಯಾಟರಿ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 SoC ಪ್ರೊಸೆಸರ್‌ ಮತ್ತು ತ್ರಿವಳಿ ಕ್ಯಾಮೆರಾ ಫೀಚರ್ಸ್‌ಗಳು ಈ ಫೋನಿನ ಪ್ರಮುಖ ಆಕರ್ಷಣೆಯಾಗಿವೆ. ಹಾಗಾದರೇ 'ವಿವೋ Z1x' ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ವಿವೋ Z1x' ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.38 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್‌ AMOLED ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ವಾಟರ್‌ ಡ್ರಾಪ್‌ ಸ್ಟೈಲ್‌ನ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇ ಸುತ್ತಲೂ ಕರ್ವ್‌ ಆಕಾರದ ಡಿಸೈನ್‌ ನೀಡಲಾಗಿದ್ದು, ಫೋನಿನ ಬಾಹ್ಯ ಸೌಂದರ್ಯ ಹೆಚ್ಚಿಸಿದೆ. ವಿಶಾಲ ಡಿಸ್‌ಪ್ಲೇಯು ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅನುಕೂಲಕರವಾಗಿದೆ.

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ವಿವೋ Z1x' ಸ್ಮಾರ್ಟ್‌ಫೋನ್ ಆಕ್ಟಾ ಕೋರ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಪಡೆದಿದೆ. ಒಟ್ಟು ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM + 64GB ಸ್ಟೋರೇಜ್‌ ಮತ್ತು 6GB RAM +128GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಫೋನ್‌ ಹಿಂಬದಿಯಲ್ಲಿ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್‌ ನೀಡಿದ್ದು, ಮುಖ್ಯ ಕ್ಯಾಮೆರಾವು f/1.79 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದ್ದು, ಮೂರುನೇ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 32ಎಂಪಿ ಸೆನ್ಸಾರ್‌ ಪಡೆದಿದೆ ಮತ್ತು ಪಾಪ್‌ಅಪ್‌ ಮಾದರಿಯಲ್ಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ವಿವೋ Z1x' ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಇದರೊಂದಿಗೆ 22.5W ಸಾಮರ್ಥ್ಯ ಫ್ಲಾಶ್‌ಚಾರ್ಜರ್‌ ಅನ್ನು ಹೊಂದಿದೆ. ಉಳಿದಂತೆ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, 3.5ಎಂಎಂ ಹೆಡ್‌ಫೋನ್ ಜಾಕ್, ವೈಫೈ, ಬ್ಲೂಟೂತ್ ಸೇರಿದಂತೆ ಗೇಮಿಂಗ್‌ಗಾಗಿ ಮಲ್ಟಿಟರ್ಬೋ ಮತ್ತು ಅಲ್ಟ್ರಾ ಗೇಮ್ ಮೋಡ್‌ ಆಯ್ಕೆಗಳನ್ನು ಪರಿಚಯಿಸಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ Z1x' ಸ್ಮಾರ್ಟ್‌ಫೋನ್ ಇಂದು (ಸೆಪ್ಟಂಬರ್ 13) ಮೊದಲ ಸೇಲ್ ಆರಂಭಿಸಲಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್‌ ಮತ್ತು ಅಧಿಕೃತ ವಿವೋ ವೆಬ್‌ತಾಣದಲ್ಲಿ ಖರೀದಿಸಬಹುದಾಗಿದೆ. 6GB RAM + 64GB ವೇರಿಯಂಟ್ ಬೆಲೆಯು 16,990ರೂ.ಗಳಾಗಿದೆ ಮತ್ತು 6GB RAM +128GB ವೇರಿಯಂಟ್ ಬೆಲೆಯು 18,990ರೂ.ಗಳಾಗಿದೆ. ಫ್ಯೂಶನ್ ಬ್ಲೂ ಮತ್ತು ಫ್ಯಾಂಟೋಮ್ ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Vivo Z1x phone sale will open at 12pm and will be conducted via Flipkart and the official Vivo India e-shop. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X