ವೊಡಾಫೋನಿನ ಈ ಪ್ಲ್ಯಾನ್‌ಗಳಲ್ಲಿ 5GB ವರೆಗೆ ಹೆಚ್ಚುವರಿ ಡೇಟಾ ಲಭ್ಯ!

|

ದೇಶದ ಟೆಲಿಕಾಂ ವಲಯದಲ್ಲಿ ವೊಡಾಫೋನ್ ತನ್ನ ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಅಧಿಕ ಡೇಟಾ ಕೊಡುಗೆಗಳನ್ನು ಸಹ ನೀಡಿತ್ತು. ಅಲ್ಲದೇ ವೊಡಾಫೋನ್ ತನ್ನ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಡಬಲ್ ಡೇಟಾ ಕೊಡುಗೆ ಘೋಷಿಸಿ ಡೇಟಾ ಪ್ರಿಯ ಗ್ರಾಹಕರಿಗೆ ಖುಷಿತಂದಿದೆ. ಅದರ ಬೇನ್ನಲೇ ಈಗ ಮತ್ತೆ ಕೆಲವು ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಸೌಲಬ್ಯ ಘೋಷಿಸಿದೆ.

ವೊಡಾಫೋನ್

ಹೌದು, ವೊಡಾಫೋನ್ ಟೆಲಿಕಾಂ ವೊಡಾಫೋನ್ ಐಡಿಯಾದ ಹೊಸ ಅಪ್ಲಿಕೇಶನ್ / ವೆಬ್ ಎಕ್ಸ್‌ಕ್ಲೂಸಿವ್ ಕೊಡುಗೆ ತಿಳಿಸಿದೆ. ಆಯ್ದ ಕೆಲವು ಪ್ರೀಪೇಯ್ಡ್‌ ಯೋಜನೆಗಳಿಗೆ ಹೆಚ್ಚುವರಿಯಾಗಿ 5GB ವರೆಗೂ ಡೇಟಾ ಸೌಲಭ್ಯವನ್ನು ನೀಡುತ್ತದೆ. ಇನ್ನು ಈ ಕೊಡುಗೆಯು ಎಲ್ಲ ಟೆಲಿಕಾಂ ಸರ್ಕಲ್‌ಗಳ ವ್ಯಾಪ್ತಿಯಲ್ಲಿಯೂ ಲಭ್ಯ. ಈ ಆಫರ್‌ನಲ್ಲಿ ಹೆಚ್ಚುವರಿ ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾದರೇ ವೊಡಾಫೋನ್ ಯಾವ ಯೋಜನೆಗಳಿಗೆ ಈ ಕೊಡುಗೆಯ ಲಭ್ಯ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 149ರೂ. ಪ್ಲ್ಯಾನ್

ವೊಡಾಫೋನ್ 149ರೂ. ಪ್ಲ್ಯಾನ್

ವೊಡಾಫೋನ್ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಸದ್ಯ ಈ ಯೋಜನೆಯಲ್ಲಿ ಒಟ್ಟು 2GB ಡೇಟಾ ಪ್ರಯೋಜನ ಲಭ್ಯ ಇದ್ದು, ಈಗ ವೆಬ್ ಎಕ್ಸ್‌ಕ್ಲೂಸಿವ್ ಆಫರ್‌ನಿಂದಾಗಿ ಹೆಚ್ಚುವರಿಯಾಗಿ 1GB ಡೇಟಾ ಸೇರಿ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 3GB ಡೇಟಾ ದೊರೆಯಲಿದೆ. ವಾಯಿಸ್ ಕರೆ ಸೌಲಭ್ಯವು ಇದೆ.

ವೊಡಾಫೋನ್ 219ರೂ. ಪ್ಲ್ಯಾನ್

ವೊಡಾಫೋನ್ 219ರೂ. ಪ್ಲ್ಯಾನ್

ವೊಡಾಫೋನ್ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಪ್ರಯೋಜನ ಲಭ್ಯ ಇದ್ದು, ಈಗ ವೆಬ್ ಎಕ್ಸ್‌ಕ್ಲೂಸಿವ್ ಆಫರ್‌ನಿಂದಾಗಿ ಹೆಚ್ಚುವರಿಯಾಗಿ 2GB ಡೇಟಾ ಸಿಗಲಿದೆ. ಈ ಯೋಜನೆಯ ನಿಗದಿತ ಡೇಟಾ ಮುಗಿದ ಬಳಿಕ ಹೆಚ್ಚುವರಿ ಡೇಟಾ ಬಳಕೆ ಆಗಲಿದೆ. ವಾಯಿಸ್ ಕರೆ ಸೌಲಭ್ಯವು ಇದೆ.

ವೊಡಾಫೋನ್ 249ರೂ. ಪ್ಲ್ಯಾನ್

ವೊಡಾಫೋನ್ 249ರೂ. ಪ್ಲ್ಯಾನ್

ವೊಡಾಫೋನ್ ಈ ಯೋಜನೆಯು ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದೆ. ಆದ್ರೆ ಈಗ ವೆಬ್ ಎಕ್ಸ್‌ಕ್ಲೂಸಿವ್ ಆಫರ್‌ನಿಂದಾಗಿ ಹೆಚ್ಚುವರಿಯಾಗಿ 5GB ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ ಲಭ್ಯ ಇರುವ ನಿಗದಿತ ಡೇಟಾ ಮುಗಿದ ಬಳಿಕ ಹೆಚ್ಚುವರಿ ಡೇಟಾ ಬಳಕೆ ಆಗಲಿದೆ. ವಾಯಿಸ್ ಕರೆ ಸೌಲಭ್ಯವು ಇದೆ.

ಇತರೆ ಪ್ಲ್ಯಾನ್

ಇತರೆ ಪ್ಲ್ಯಾನ್

ವೊಡಾಫೋನಿನ ಆಲ್‌ರೌಂಡ್‌ ಪ್ಲ್ಯಾನ್‌ಗಳಾದ 49ರೂ. ಮತ್ತು 79ರೂ.ಗಳಿಗೂ ವೊಡಾಫೋನ್ ವೆಬ್ ಎಕ್ಸ್‌ಕ್ಲೂಸಿವ್ ಕೊಡುಗೆ ಲಭ್ಯವಾಗಲಿದೆ. ಹೆಚ್ಚುವರಿ ಡೇಟಾ ಸೌಲಭ್ಯ ದೊರೆಯುತ್ತದೆ.

Most Read Articles
Best Mobiles in India

English summary
Vodafone Idea has availed its customers with the benefit of ‘App/Web Exclusive Offer’ which is providing extra data on top of original plan's data benefit.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X