ವೋಡಾಫೋನ್‌-ಐಡಿಯಾದ ಫ್ಯಾಮಿಲಿ ಫೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಬೆಲೆ ಹೆಚ್ಚಳ!

|

ಇತ್ತೀಚಿನ ದಿನಗಳಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ವೊಡಾಫೋನ್‌-ಐಡಿಯಾ ಸಂಸ್ಥೆಯು ಜಿಯೋ ಹಾಗೂ ಏರ್‌ಟೆಲ್‌ಗಳಿಗೆ ನೇರ ಸ್ಪರ್ಧೆ ನೀಡುತ್ತಿದೆ. ತನ್ನ ಗ್ರಾಹಕರಿಗೆ ಹಲವು ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಸಿದೆ. ಪ್ರತಿದಿನ 2GB ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯಗಳ ಯೋಜನೆಗಳನ್ನು ಹೊಂದಿದ್ದು, ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡಬಲ್‌ ಡೇಟಾ ಯೋಜನೆಯ ಕೊಡುಗೆಗಳನ್ನು ನೀಡಿದೆ. ಸದ್ಯ ಇದೀಗ ವೊಡಾಫೋನ್ ಐಡಿಯಾ (ವಿ) ತನ್ನ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬೆಲೆಗಳನ್ನು ಹೆಚ್ಚಿಸಿದೆ.

ವೊಡಾಫೋನ್‌ ಐಡಿಯಾ

ಹೌದು, ವೊಡಾಫೋನ್‌ ಐಡಿಯಾ ತನ್ನ ಫ್ಯಾಮಿಲಿ ಪ್ಲ್ಯಾನ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇದರಲ್ಲಿ 598 ರೂ. ಪ್ಲ್ಯಾನ್‌ಗೆ ಈಗ ನಿಮಗೆ 649 ರೂ. ವೆಚ್ಚವಾಗಲಿದೆ. ಇನ್ನು 699 ರೂ ಪ್ಲ್ಯಾಮಿಲಿ ಪ್ಲ್ಯಾನ್‌ ಬೆಲೆ ಇದೀಗ 799 ರೂ. ಗೆ ಹೆಚ್ಚಳವಾಗಿದೆ. ಇನ್ನುಈ ಪ್ಲ್ಯಾನ್‌ಗಳ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹಾಗಾದ್ರೆ ಈ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

649 ರೂ. ವಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

649 ರೂ. ವಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

598 ರೂ.ಗೆ ಲಭ್ಯವಿದ್ದ ಈ ಪ್ಲ್ಯಾನ್‌ ಇದೀಗ 649 ರೂ.ಗಳಿಗೆ ಲಭ್ಯವಾಗಲಿದೆ. ಈ ಫ್ಯಾಮಿಲಿ ಪೊಸ್ಟ್‌ಪೇಯ್ಸ್‌ ಪ್ಲ್ಯಾನ್‌ನಲ್ಲಿ ನೀವು 80GB ಡೇಟಾ, 100 SMS ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದು ಎರಡು ಸಂಪರ್ಕಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಪ್ರೈಮರಿ ಮೆಂಬರ್ಸ್‌‌ 50GB ಡೇಟಾವನ್ನು ಬಳಸಬಹುದು ಮತ್ತು ದ್ವಿತೀಯ ಬಳಕೆದಾರರು 30GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾವನ್ನು ಪಡೆಯಲು ಒಬ್ಬರು ಯಾವಾಗಲೂ ರೀಚಾರ್ಜ್ ಮಾಡಬಹುದು. ಈ ಯೋಜನೆಯು 200GB ಡೇಟಾ ರೋಲ್‌ಓವರ್ ಸೌಲಭ್ಯದೊಂದಿಗೆ ಬರುತ್ತದೆ. ಅಲ್ಲದೆ ಅಮೆಜಾನ್ ಪ್ರೈಮ್, Zee5, ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಗೆ ಉಚಿತ ವಾರ್ಷಿಕ ಚಂದಾದಾರಿಕೆಯನ್ನು ಒಳಗೊಂಡಿದೆ. ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಒಂದು ವರ್ಷದವರೆಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

799 ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

799 ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಈ ಹಿಂದೆ 749 ರೂಗಳಿಗೆ ಲಭ್ಯವಿದ್ದ 799 ರೂ ಪ್ಲ್ಯಾನ್‌ ಮೂರು ಸಂಪರ್ಕಗಳನ್ನು ಬೆಂಬಲಿಸುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯು 120GB ಡೇಟಾವನ್ನು ನೀಡುತ್ತದೆ. ಅಲ್ಲದೆ 200GB ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದಲ್ಲದೆ ಪ್ರಾಥಮಿಕ ಬಳಕೆದಾರರು 60GB ಡೇಟಾವನ್ನು ಬಳಸಬಹುದು ಮತ್ತು ದ್ವಿತೀಯ ಸದಸ್ಯ 30GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಉಳಿದ ಡೇಟಾವನ್ನು ಮೂರನೇ ಸದಸ್ಯರಿಂದ ಬಳಸಬಹುದು. ಇದಲ್ಲದೆ ವೊಡಾಫೋನ್ ಐಡಿಯಾ ಉಚಿತ 100 ಎಸ್‌ಎಂಎಸ್ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಅಮೆಜಾನ್ ಪ್ರೈಮ್, Zee5, ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಇತರ ವಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು

ಇತರ ವಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು

ಇನ್ನು ಈಗಾಗಲೇ ಲಭ್ಯವಿರುವ 999 ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ನಲ್ಲಿ ಯಾವುದೇ ಬೆಲೆ ಏರಿಕೆ ಆಗಿಲ್ಲ. ಈ ಪ್ಲ್ಯಾನ್‌ 200GB ಡೇಟಾ ಲಾಭವನ್ನು ನೀಡಲಿದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರಿಗೆ 80GB ಡೇಟಾ ಮತ್ತು ದ್ವಿತೀಯ ಸದಸ್ಯರಿಗೆ 30GB ದೊರೆಯಲಿದೆ. ಅಲ್ಲದೆ ಇದು ಒಂದು ಪ್ರಾಥಮಿಕ ಮತ್ತು ನಾಲ್ಕು ದ್ವಿತೀಯ ಬಳಕೆದಾರರನ್ನು ಒಳಗೊಂಡಂತೆ 5 ಸಂಪರ್ಕಗಳನ್ನು ಬೆಂಬಲಿಸುತ್ತದೆ. ಇದಲ್ಲದೆ 1,348 ರೂ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಕೂಡ ಲಭ್ಯವಿದೆ. ಇದರಲ್ಲಿ ಪ್ರಾಥಮಿಕ ಸಂಪರ್ಕವು ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆಯುತ್ತದೆ ಮತ್ತು ದ್ವಿತೀಯಕ ಸಂಪರ್ಕವು 30GB ಡೇಟಾವನ್ನು ಪಡೆಯುತ್ತದೆ. ಇತರ ಯೋಜನೆಗಳಿಗಿಂತ ಭಿನ್ನವಾಗಿ, ಇದು ಒಂದು ವರ್ಷದವರೆಗೆ ನೆಟ್‌ಫ್ಲಿಕ್ಸ್ ಮೂಲ ಯೋಜನೆಗೆ ಉಚಿತ ಪ್ರವೇಶವನ್ನು ಮತ್ತು ವಿಮಾನ ನಿಲ್ದಾಣಗಳಲ್ಲಿ ಉಚಿತ ಲೌಂಜ್ ಪ್ರವೇಶವನ್ನು ಸಹ ನೀಡುತ್ತದೆ.

Most Read Articles
Best Mobiles in India

English summary
Vodafone Idea (Vi) increased the prices of its Family postpaid plans.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X