Just In
Don't Miss
- Movies
'ಮನೆ ಮಾರಾಟಕ್ಕಿಟ್ಟ' ನಿರ್ದೇಶಕನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಸಿನಿಮಾ.!
- News
ಉಪ ಚುನಾವಣೆ ಸೋಲಿನ ಬಳಿಕ ಜೆಡಿಎಸ್ ಹುದ್ದೆ ತೊರೆದ ಶಾಸಕನ ಪುತ್ರ
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ವೊಡಾಫೋನ್ ಆಫರ್ : ಅಧಿಕ ಡೇಟಾಗೆ ಇದಕ್ಕಿಂತ ಉತ್ತಮ ಪ್ಲ್ಯಾನ್ ಬೇಕೆ?
ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಪೈಪೋಟಿ ಜೋರಾಗಿದ್ದು, ಈ ನಡುವೆ ವೊಡಾಫೋನ್ ಸಂಸ್ಥೆಯು ಸಹ ಆಕರ್ಷಕ ಪ್ರೀಪೇಡ್ ಪ್ಲ್ಯಾನ್ಗಳಿಂದ ಗುರುತಿಸಿಕೊಂಡಿದೆ. ಗ್ರಾಹಕರಿಗೆ ಭಿನ್ನ ಭಿನ್ನ ಪ್ರೀಪೇಡ್ ಪ್ಲ್ಯಾನ್ಗಳ ಆಯ್ಕೆಯನ್ನು ಪರಿಚಯಿಸಿರುವ ವೊಡಾಫೋನ್ ಇದೀಗ ವ್ಯಾಲಿಡಿಟಿ ಮತ್ತು ಹೆಚ್ಚಿನ ಡೇಟಾ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನಪ್ರಿಯ ಪ್ಲ್ಯಾನ್ವೊಂದರಲ್ಲಿ ಒಟ್ಟು 252GB ಡೇಟಾ ಪ್ರಯೋಜನ ನೀಡಲಿದೆ.

ಹೌದು, ಜನಪ್ರಿಯ ವೊಡಾಫೋನ್ ಸಂಸ್ಥೆಯು ತನ್ನ 569ರೂ. ಪ್ರೀಪೇಡ್ ಪ್ಲ್ಯಾನಿನಲ್ಲಿ ಪ್ರತಿದಿನ ಒಟ್ಟು 3GB ಡೇಟಾ ಸೌಲಭ್ಯವನ್ನು ನೀಡಲಿದೆ. ಈ ಪ್ಲ್ಯಾನಿನ ವ್ಯಾಲಿಡಿಟಿ ಅವಧಿಯು 84 ದಿನಗಳಾಗಿದ್ದು, ಈ ಪೂರ್ಣ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 252GB ಡೇಟಾ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಕರೆಗಳ, ಎಸ್ಎಮ್ಎಸ್ ಸೌಲಭ್ಯಗಳು ಸಹ ಲಭ್ಯ ಇರಲಿವೆ. ಹಾಗಾದರೇ ವೊಡಾಫೋನ್ 569ರೂ.ಪ್ಲ್ಯಾನ್ ಇತರೆ ಪ್ರಯೋಜನಗಳೆನು ಮತ್ತು ಈ ಪ್ರೈಸ್ಟ್ಯಾಗ್ನಲ್ಲಿ ಇತರೆ ಟೆಲಿಕಾಂಗಳ ಪ್ಲ್ಯಾನ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವೊಡಾಫೋನ್ 569ರೂ.ಪ್ಲ್ಯಾನ್
ವೊಡಾಫೋನಿನ 569ರೂ. ಪ್ರೀಪೇಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ಸಹ ಇರಲಿದೆ. ಹಾಗೆಯೇ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳು ಹಾಗೂ ಉಚಿತ ಎಸ್ಎಮ್ಎಸ್ ಪ್ರಯೋಜನಗಳು ಸಹ ದೊರೆಯಲಿವೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 252GB ಡೇಟಾ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ವೊಡಾಫೋನ್ ಪ್ಲೇ, ಸೇರಿದಂತೆ ಇತರೆ ಪ್ರಯೋಜನಗಳು ಲಭ್ಯ.

ಏರ್ಟೆಲ್ 558ರೂ. ಪ್ಲ್ಯಾನ್
ಏರ್ಟೆಲ್ನ 558ರೂ. ಪ್ಲ್ಯಾನ್ ಸಹ ವೊಡಾಫೋನಿನ 569ರೂ. ಪ್ಲ್ಯಾನ್ಗೆ ಹೋಲಿಕೆ ಇದ್ದು, ಆದರೆ ಏರ್ಟೆಲ್ ಒಟ್ಟು 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳು, ಪ್ರತಿದಿನ 3GB ಡೇಟಾ, ಉಚಿತ ಎಸ್ಎಮ್ಎಸ್ಗಳ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ವ್ಯಾಲಿಡಿಟಿ ಅವಧಿಗೆ ಒಟ್ಟು 246GB ಡೇಟಾ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಏರ್ಟೆಲ್ ಆಪ್ಸ್ ಸೇವೆಗಳು ಸಿಗಲಿವೆ.

ಜಿಯೋ 555ರೂ.ಪ್ಲ್ಯಾನ್
ಜಿಯೋ ಇತ್ತೀಚಿಗೆ ಪರಿಚಯಿಸಿರುವ ಆಲ್-ಇನ್-ಒನ್ ಪ್ಲ್ಯಾನ್ನಲ್ಲಿ 555ರೂ.ಪ್ರೀಪೇಡ್ ಪ್ಲ್ಯಾನ್ ಸೇರಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 84ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಹಾಗೆಯೇ ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಹಾಗೂ ಜಿಯೋ ಟು ಜಿಯೋ ಅನಿಯಮಿತ ಉಚಿತ ಕರೆ ಪ್ರಯೋಜನೆ ಇದೆ. ಇನ್ನು ಇತರೆ ಟೆಲಿಕಾಂ ಕರೆಗಳಿಗೆ 3,000 ನಿಮಿಷಗಳನ್ನು ಸೌಲಭ್ಯವನ್ನು ನೀಡಿದೆ. ಇದರೊಂದಿಗೆ ಜಿಯೋ ಆಪ್ಸ್ ಪ್ರಯೋಜನಗಳು ಇವೆ.

ಪ್ರಮುಖ ವ್ಯತ್ಯಾಸಗಳು
ವೊಡಾಫೋನ್, ಏರ್ಟೆಲ್ ಮತ್ತು ಜಿಯೋ ಈ ಪ್ರಮುಖ ಟೆಲಿಕಾಂ ಸಂಸ್ಥೆಗಳು ಬಿಗ್ ಪ್ರೀಪೇಡ್ ಪ್ಲ್ಯಾನ್ಗಳ ಮೊತ್ತಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಪ್ರಯೋಜನಗಳಲ್ಲಿ ಭಿನ್ನತೆಗಳಿವೆ. ಏರ್ಟೆಲ್ ಮತ್ತು ವೊಡಾಫೋನ್ 3GB ಡೇಟಾ ನೀಡಿದ್ದು, ವ್ಯಾಲಿಡಿಟಿಯಲ್ಲಿ ಎರಡು ದಿನಗಳ ವ್ಯಾತ್ಯಾಸ ವಿದೆ. ಇನ್ನು ಜಿಯೋ ಇತರೆ ಟೆಲಿಕಾಂಗಳಿಗೆ ಕೇವಲ 3,000 ನಿಮಿಷಗಳನ್ನು ಮಾತ್ರ ನೀಡಿದ್ದು, ಬಹುತೇಕ ಬಳಕೆದಾರರಿಗೆ ಇದು ಕಡಿಮೆ ಎನಿಸಲಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090