Just In
Don't Miss
- Sports
ಆಸಿಸ್ ವಿರುದ್ಧದ ಭಾರತದ ಗೆಲುವಿಗೆ ದ್ರಾವಿಡ್ ಕೊಡುಗೆ ಅಪಾರ: ಇನ್ಜಮಾಮ್ ಉಲ್ ಹಕ್
- News
ಕೊವ್ಯಾಕ್ಸಿನ್ ಬೇಡ, ಕೊವಿಶೀಲ್ಡ್ ಕೊಡಿ ಎನ್ನುತ್ತಿರುವ ವೈದ್ಯಕೀಯ ಸಿಬ್ಬಂದಿ!?
- Automobiles
2021ರ ಅವಧಿಯಲ್ಲಿ ಒಟ್ಟು 25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ
- Movies
ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?
- Finance
ಭಾರತದಲ್ಲಿ ಮತ್ತೊಂದು ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್; ಎಷ್ಟು ದರ?
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ನಿಂದ ಶಾಕಿಂಗ್ ನ್ಯೂಸ್!..ನಿಯಮ ಪಾಲಿಸದಿದ್ದರೆ ವಾಟ್ಸಾಪ್ ಬಂದ್!
ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್ಸಟಂಟ್ ಮೆಸೇಜಿಂಗ್ ಆಪ್ ಆಗಿದೆ. ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್ಗಳನ್ನ ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್ಗಳನ್ನ ಪರಿಚಯಿಸುತ್ತಾ ಬಂದಿದೆ. ಇನ್ನು ಬಳಕೆದಾರರ ಡೇಟಾ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸದ್ಯ ಇದೀಗ ವಾಟ್ಸಾಪ್ ಹೊಸ ಸೇವಾ ನಿಯಮಗಳನ್ನು ಪರಿಚಯಿಸಲು ಮುಂದಾಗಿದ್ದು, ಈ ನಿಯಮಗಳನ್ನ ಪಾಲಿಸದಿದ್ದರೆ, ಬಳಕೆದಾರರು ವಾಟ್ಸಾಪ್ ಪ್ರವೇಶಿಸುವುದಕ್ಕೂ ಕಷ್ಟವಾಗಬಹುದು ಎನ್ನಲಾಗಿದೆ.

ಹೌದು, ವಾಟ್ಸಾಪ್ ಹೊಸ ಸೇವಾ ನಿಯಮ ಪರಿಚಯಿಸಲು ಮುಂದಾಗಿದ್ದು, ಇದನ್ನು ಪಾಲಿಸದಿದ್ದರೆ ನಿಮ್ಮ ವಾಟ್ಸಾಪ್ ಖಾತೆಗೆ ನಿಮಗೆ ಎಂಟ್ರಿ ಸಿಗುವುದು ಕೂಡ ಕಷ್ಟವಾಗಲಿದೆ. ನಿಮ್ಮ ವಾಟ್ಸಾಪ್ ಖಾತೆಯೆ ನಿರುಪಯುಕ್ತವಾಗಲಿದೆ. ಸದ್ಯ ವಾಟ್ಸಾಪ್ 2021ಕ್ಕೆ ತನ್ನ ಸೇವಾ ನಿಯಮಗಳನ್ನು ಅಪ್ಡೇಟ್ ಮಾಡಲಿದೆ ಎಂದು ವರದಿಯಾಗಿದೆ, ಅದು ಫೆಬ್ರವರಿ 8 ರಿಂದ ಜಾರಿಗೆ ಬರಲಿದೆ. ಇನ್ನುಳಿದಂತೆ ವಾಟ್ಸಾಪ್ ಹೊಸ ನಿಯಮದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ವಾಟ್ಸಾಪ್ 2021ಕ್ಕೆ ಹೊಸ ನಿಯಮಗಳನ್ನು ಪರಿಸಯಿಲಿದ್ದು, ಇದು ಬಳಕೆದಾರರ ಗೌಪ್ಯತೆಯ ದೃಷ್ಟಿಯಿಂದ ಮಹತ್ವದಾಗಿದೆ ಎನ್ನಲಾಗಿದೆ. ಇನ್ನು ಬಳಕೆದಾರರು ಹೊಸ ಗೌಪ್ಯತೆ ನಿಯಮಗಳನ್ನು ಒಪ್ಪದಿದ್ದರೆ, ಅವರು ಮೆಸೇಜಿಂಗ್ ಅಪ್ಲಿಕೇಶನ್ಗೆ ಪ್ರವೇಶವನ್ನು ಕಳೆದುಕೊಳ್ಳಬಹುದು. ವಾಟ್ಸಾಪ್ ಬಳಕೆದಾರರು ಹೊಸ ನಿಯಮಗಳನ್ನು ಸ್ವೀಕರಿಸಬಹುದು ಅಥವಾ ಅವರ ಖಾತೆಗಳನ್ನು ‘ಅಳಿಸಬಹುದು' ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಎಲ್ಲಾ ಬಳಕೆದಾರರು ಒಪ್ಪಿಕೊಳ್ಳಬೇಕು ಅಥವಾ ಪ್ರವೇಶವನ್ನು ಕಳೆದುಕೊಳ್ಳಬೇಕು ಎಂದು ಫೇಸ್ಬುಕ್ ಒಡೆತನದ ವಾಟ್ಸಾಪ್ ಪ್ರತ್ಯೇಕವಾಗಿ ದೃಡಪಡಿಸಿದೆ.

ವಾಟ್ಸಾಪ್ ತನ್ನ ವರದಿಯಲ್ಲಿ, ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸಲಾಗುವುದು ಎಂದು ತೋರಿಸಿದ ಸ್ಕ್ರೀನ್ಶಾಟ್ಗಳನ್ನು WABetaInfo ಹಂಚಿಕೊಂಡಿದೆ. ಪ್ರಮುಖ ನವೀಕರಣಗಳು ವಾಟ್ಸಾಪ್ ಸೇವೆಯ ಬಗ್ಗೆ ಮತ್ತು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದು ಅದು ತೋರಿಸಿದೆ. ಚಾಟ್ಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ವ್ಯವಹಾರಗಳು ಫೇಸ್ಬುಕ್ ಹೋಸ್ಟ್ ಮಾಡಿದ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಸಹ ಇದು ಒಳಗೊಂಡಿರುತ್ತದೆ.

ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಜಾರಿಗೆ ಬರಲಿವೆ ಎಂದು ಹೇಳಲಾಗಿದೆ. ಇನ್ನು ಈ disclaimer ಅನ್ನು ಬಳಕೆದಾರರಿಗೆ ಇನ್ನು ಹೆಚ್ಚಿನ ಉತ್ತಮ ಸೇವೆ ನೀಡಲಿದೆ ಎನ್ನಲಾಗಿದೆ. ನೀವು ಹೊಸ ಸೇವಾ ನಿಯಮವನ್ನು ಸ್ವೀಕರಿಸುವ ಅಗತ್ಯವಿದೆ, ಇಲ್ಲದೆ ಓದರೆ ವಾಟ್ಸಾಪ್ ಬಳಕೆಯನ್ನು ಮುಂದುವರಿಸಲು ಅಸಾಧ್ಯವಾಗಲಿದೆ. ಸದ್ಯ ಈ ಸೇವಾ ನಿಯಮಗಳು ಹೇಗಿರಲಿವೆ ಎನ್ನುವ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190