ಟೆಕ್ ಲೋಕದ ಬಿಗ್ ಹಿಟ್ ವೈಯು ಯುಫೋರಿಯಾ
ನಮ್ಮ ವೆಬ್ಸೈಟ್ಗೆ ಭೇಟಿ ಕೊಡುವುದು ನಿಮಗೆ ಅಸಾಧ್ಯ ಎಂಬ ಪಕ್ಷದಲ್ಲಿ ಈ ವಾರ ಟೆಕ್ ಲೋಕದಲ್ಲಿ ನಡೆದ ಅತ್ಯದ್ಭುತ ಸಂಗತಿಗಳ ಸವಿಸ್ತಾರ ಮಾಹಿತಿಯನ್ನು ವಿಶೇಷವಾಗಿ ಈ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ.ಈ ಸಂಗತಿಗಳು ಅಸಾಮಾನ್ಯವಾಗಿದ್ದು ನಿಮ್ಮಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸುವುದು ಸತ್ಯ.

ವೈಯು ಯುಫೋರಿಯಾ
ವೈಯು ಯುರೇಕಾದ ಸಕ್ಸೆಸರ್ ವೈಯು ಯುಫೋರಿಯಾ, ಶ್ಯೋಮಿ ರೆಡ್ಮೀ 2 ನ ನೇರ ಪ್ರತಿಸ್ಪರ್ಧಿ ಎಂದೆನಿಸಿದೆ. ಫೋನ್ ಬೆಲೆ ರೂ 6,999 ಆಗಿದೆ.

ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು
ಈ ಬೇಸಿಗೆಯಲ್ಲಿ ಗೂಗಲ್ನ ಸೆಲ್ಫ್ ಡ್ರೈವಿಂಗ್ ಕಾರು ರೋಡಿಗಿಳಿಯಲಿದೆ. ಕ್ಯಾಲಿಫೋರ್ನಿಯಾದಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಟ್ಟಿರುವ ಈ ಕಾರು ಭಾರತೀಯ ರಸ್ತೆಗಳಲ್ಲಿ ಕಮಾಲನ್ನು ಮಾಡಲಿರುವುದು ದಿಟವಾಗಿದೆ.

ಸ್ನೇಕ್ ರಿವೈಂಡ್ ಗೇಮ್ ಅಪ್ಲಿಕೇಶನ್
ಹೆಚ್ಚು ಸುಧಾರಿತ ಗ್ರಾಫಿಕ್ಸ್ ಮತ್ತು ಟ್ವೀಟ್ಗಳೊಂದಿಗೆ ಬಂದಿದೆ. ಗೂಗಲ್ ಪ್ಲೇ, ಐಟ್ಯೂನ್ಸ್ ಅಪ್ಲಿಕೇಶನ್ ಸ್ಟೋರ್, ಗೂಗಲ್ ಪ್ಲೇ ಮತ್ತು ವಿಂಡೋಸ್ ಫೋನ್ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಮೋಟೋರೋಲಾ ಮೋಟೋ ಜಿ
ಈ ಡಿವೈಸ್ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಆದರೆ ಫೋನ್ ಅಬ್ಬರದ ಅಲೆಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 5.2 ಇಂಚಿನ ಡಿಸ್ಪ್ಲೇ, 1080x1920 ರೆಸಲ್ಯೂಶನ್, 1.7GHZ ಸ್ನ್ಯಾಪ್ಡ್ರಾಗನ್ 610 ಪ್ರೊಸೆಸರ್, 2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ಆಪಲ್ ಮ್ಯೂಸಿಕ್
ಆಪಲ್ನ ಹೆಚ್ಚು ನಿರೀಕ್ಷಿತ ಮ್ಯೂಸಿಕ್ ಸೇವೆ ಜೂನ್ನಲ್ಲಿ ಬಿಡುಗಡೆಯಾಗುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ಸ್ಯಾಮ್ಸಂಗ್ ವೃತ್ತಾಕಾರದ ಸ್ಮಾರ್ಟ್ವಾಚ್
ಸ್ಯಾಮ್ಸಂಗ್ನ ಗೇರ್ ಎ ಅಕಾ ಆರ್ಬಿಸ್ ವಾಚ್ ಬಿಡುಗಡೆಗೊಳ್ಳಲಿದ್ದು ಅತಿ ವಿಭಿನ್ನವಾಗಿ ಬಳಕೆದಾರರ ಮನಸೂರೆಗೊಳ್ಳಲಿದೆ. ಚಿತ್ರವನ್ನು ಜೂಮ್ ಇನ್ ಮಾಡುವುದು ಜೂಮ್ ಔಟ್ ಮಾಡುವುದು, ವಾಲ್ಯೂಮ್ ಬಟನ್ ಹೀಗೆ ಅತಿ ವಿಶೇಷತೆಗಳಿಂದ ಇದು ಮನಸೂರೆಗೊಳ್ಳಲಿದೆ.

ಮೈಕ್ರೋಸಾಫ್ಟ್ ಲೂಮಿಯಾ 540
ಭಾರತದಲ್ಲಿ ಲೂಮಿಯಾ 540 ಅನ್ನು ರೂ 10,199 ಕ್ಕೆ ಲಾಂಚ್ ಮಾಡಲಾಗಿದೆ. ವಿಂಡೋಸ್ ಫೋನ್ 8.1 ಪವರ್ ಉಳ್ಳ ಈ ಡಿವೈಸ್ ಲೂಮಿಯಾ 535 ನ ಸಕ್ಸೆಸರ್ ಎಂದೆನಿಸಿದೆ.

ಕ್ಸೋಲೋ ನೆಕ್ಸಿಯನ್ ಕ್ರೋಮ್ಬುಕ್ ಗೂಗಲ್ನಿಂದ
ಹೆಚ್ಚಿನ ದೇಶಗಳಿಗೆ ಕ್ರೋಮ್ಬುಕ್ ಅನ್ನು ಒದಗಿಸುವ ನಿಟ್ಟಿನಲ್ಲಿ ಗೂಗಲ್ ಇದ್ದು ಕ್ಸೋಲೋ ಮತ್ತು ನೆಕ್ಸಿಯನ್ ಎಂಬ ಎರಡು ಕಂಪೆನಿಗಳೊಂದಿಗೆ ಸೇರಿ ಕ್ರೋಮ್ಬುಕ್ ಅನ್ನು ಗೂಗಲ್ ಲಾಂಚ್ ಮಾಡಲಿದೆ. ಬೆಲೆ ರೂ 12,999 ಆಗಿದೆ.


Click it and Unblock the Notifications