ಯಾವುದಕ್ಕೂ ಮೊಬೈಲ್‌ನಲ್ಲಿ mAadhaar ಆಪ್‌ ಇರಲಿ; ಪ್ರಯೋಜನಗಳೆನು?

|

ಆಧಾರ್‌ ಕಾರ್ಡ್‌ ದೇಶದ ನಾಗರೀಕರ ಪ್ರಮುಖ ಗುರುತಿನ ಪುರಾವೆ ಆಗಿದೆ. ಆಧಾರ್‌ ಕಾರ್ಡ್ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹಾಗೂ ಇನ್ನಿತರೆ ಕೆಲಸಗಳಿಗೆ ಆಧಾರವಾಗಿದೆ. ಆಧಾರ್‌ ಕಾರ್ಡ್ ನಕಲು ಪ್ರತಿ ಅಥವಾ ಆಧಾರ್ ಕಾರ್ಡ್‌ ನಂಬರ್ ಬೇಕಿರುತ್ತದೆ. ಪ್ರತಿ ಬಾರಿ ಜೊತೆಗೆ ಇಟ್ಟುಕೊಳ್ಳುವ ಬದಲು ಬಹುತೇಕರು ಆಧಾರ್ ಪಿಡಿಎಫ್‌ ಪ್ರತಿ ಫೋನಿನಲ್ಲಿ ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ಫೋಟೊ ತೆಗೆದು ಗ್ಯಾಲರಿಯಲ್ಲಿ ಸೇವ್ ಮಾಡಿರುತ್ತಾರೆ. ಫೋನಿನಲ್ಲಿ mAadhaar ಆಪ್‌ ಇದ್ದರೇ ಆಧಾರ್ ಕಾರ್ಡ್ ಸಮಸ್ಯೆ ಬರಲ್ಲ.

UIDAI

ಹೌದು, ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಪಡೆಯಲು ಆಧಾರ ಕಡ್ಡಾಯ ಆಗಿದೆ. ಪ್ರಸ್ತುತ ಆಧಾರ ಕಾರ್ಡ್‌ ಅನ್ನು ಸಾಫ್ಟ್‌ಕಾಫಿ ರೂಪದಲ್ಲಿಯೂ ಸ್ವೀಕರಿಸಲಾಗುತ್ತಿದೆ. ಅದಕ್ಕಾಗಿ UIDAI ಸಂಸ್ಥೆಯ 'ಎಮ್‌ಆಧಾರ್‌ ಆಪ್- mAadhaar ಆಪ್‌ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಬಹಳ ಉಪಯುಕ್ತ ಎನಿಸಲಿದೆ. ಈ ಒಂದೇ ಅಪ್ಲಿಕೇಶನ್‌ನಲ್ಲಿ 35 ಕ್ಕೂ ಹೆಚ್ಚು ಆಧಾರ್ ಆನ್‌ಲೈನ್ ಸೇವೆಗಳನ್ನು ನೀಡುತ್ತದೆ. ಹಾಗಾದರೆ mAadhaar ಆಪ್‌ನ ಅಗತ್ಯ ಪ್ರಯೋಜನೆಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ ಮತ್ತು ಐಓಎಸ್‌

ಆಂಡ್ರಾಯ್ಡ್‌ ಮತ್ತು ಐಓಎಸ್‌

ಆಂಡ್ರಾಯ್ಡ್‌ ಮತ್ತು ಐಓಎಸ್‌ ಓಎಸ್‌ ಆಪ್‌ ಸ್ಟೋರ್‌ಗಳಲ್ಲಿ mAadhaar ಆಪ್ ಲಭ್ಯ ಇದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಹಾಗೂ ಐಫೋನ್ ಬಳಕೆದಾರರಿಬ್ಬರೂ ಸಹ mAadhaar ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಟ್ಟು 13 ಭಾಷೆಗಳ ಸಪೋರ್ಟ್‌

ಒಟ್ಟು 13 ಭಾಷೆಗಳ ಸಪೋರ್ಟ್‌

UIDAI ಸಂಸ್ಥೆಯ ಪರಿಚಯಿಸಿರುವ mAadhaar ಆಪ್‌ನಲ್ಲಿ ಒಟ್ಟು 13 ಭಾಷೆಗಳ ಆಯ್ಕೆ ಇವೆ. ಅವುಗಳೆಂದರೇ ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಮರಾಠಿ, ತಮಿಳ, ತೆಲಗು, ಪಂಜಾಬಿ, ಓಡಿಯಾ, ಬೆಂಗಾಲಿ, ಗುಜರಾತಿ, ಅಸ್ಸಾಂ, ಮಲಯಾಳಂ ಭಾಷೆಗಳ ಆಯ್ಕೆ ಇದೆ. ಮೆನು ಆಯ್ಕೆಯಲ್ಲಿ ಅಗತ್ಯ ಭಾಷೆ ಸೆಟ್ ಮಾಡಿಕೊಳ್ಳಬಹುದು.

mAadhaar ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ರಚನೆ

mAadhaar ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ರಚನೆ

ಆಧಾರ್ ಕಾರ್ಡ್ ಅನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ ವ್ಯಕ್ತಿಯು mAadhaar ಅಪ್ಲಿಕೇಶನ್‌ನಲ್ಲಿ ಆಧಾರ್ ಪ್ರೊಫೈಲ್ ಅನ್ನು ರಚಿಸಬಹುದು. ಅಂತಹ ವ್ಯಕ್ತಿಗಳು ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಸ್ಥಾಪಿಸಲಾದ ಅಪ್ಲಿಕೇಶನ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ನೋಂದಾಯಿಸಿಕೊಳ್ಳಬಹುದು.

ಗುರುತಿನ ಪುರಾವೆಯಾಗಿ mAadhaar

ಗುರುತಿನ ಪುರಾವೆಯಾಗಿ mAadhaar

ನಿಮ್ಮ ಸ್ಮಾರ್ಟ್‌ಫೋನನಲ್ಲಿ mAadhaar ಆಪ್ ಇದ್ದರೇ, ನೀವು ರೈಲ್ವೆ ಪ್ರಯಾಣ ಮಾಡುವಾಗ ಗುರುತಿನ ಪುರಾವೆಗೆ ಇ-ಆಧಾರ ಕಾರ್ಡ್‌ ಅನ್ನೇ ತೋರಿಸಬಹುದು. ಹೀಗಾಗಿ ಆಧಾರ ಕಾರ್ಡ್ ಹಾರ್ಡ್‌ಕಾಪಿ ಜೊತೆಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಏರ್‌ಪೋರ್ಟ್‌ನಲ್ಲಿಯೂ ಸಹ ಗುರುತಿನ ಪುರಾವೆಗೆ ಆಪ್‌ನಲ್ಲಿನ ಆಧಾರ ಕಾರ್ಡ್ ತೋರಿಸಬಹುದಾಗಿದೆ.

ಆಪ್ ಡೌನ್‌ಲೋಡ್

ಆಪ್ ಡೌನ್‌ಲೋಡ್

mAadhaar ಆಪ್‌ನಲ್ಲಿ ಆಧಾರ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವು ಸಹ ಇದೆ. ಹಾಗೆಯೇ ಅಗತ್ಯ ಸಂದರ್ಭಗಳಲ್ಲಿ ಆಧಾರ ಕಾರ್ಡ್‌ ಅನ್ನು ಲಾಕ್ ಮಾಡುವ ಸೌಲಭ್ಯವು ಸಹ ಈ ಆಪ್‌ನಲ್ಲಿ ಇದೆ.

mAadhaar ಆಪ್‌ನ ಇತರೆ ಪ್ರಯೋಜನಗಳು

mAadhaar ಆಪ್‌ನ ಇತರೆ ಪ್ರಯೋಜನಗಳು

* mAadhaarನಲ್ಲಿ ಸಮೀಷದ ಆಧಾರ ಕೇಂದ್ರಗಳನ್ನು ಹುಡುಕಬಹುದು. ತಿದ್ದುಪಡಿ, ವಿಳಾಸ ಬದಲಾವಣೆಯ ಸ್ಟೇಟಸ್‌ ಮಾಹಿತಿಯನ್ನು ಈ ಆಪ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.
* ಈ ಆಪ್ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ದೃಢಿಕರಣ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.
* ಕಳೆದುಹೋದ ಆಧಾರ ಎನ್‌ರೋಲ್‌ಮೆಂಟ್ ಐಡಿಯ ನಂಬರ್‌ ಅನ್ನ ಈ ಆಪ್‌ ನಲ್ಲಿ ಹಿಂಪಡೆಯಬಹುದಾಗಿದೆ.
* ಈ ಆಪ್ ಮೂಲಕ ಆನ್‌ಲೈನ್ ವಿಳಾಸ ಬದಲಾವಣೆ ಕೋರಿಕೆ ಸಲ್ಲಿಸಬಹುದಾಗಿದೆ.

Most Read Articles
Best Mobiles in India

English summary
What Are The Benefits of mAadhaar Application.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X