ಫ್ಲಿಪ್‌ಕಾರ್ಟ್‌ ಪ್ಲಸ್‌ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಹೀಗೆ ಮಾಡಿ?

|

ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ತನ್ನ ಗ್ರಾಹಕರಿಗೆ ವಿಶೇಷ ಸೇಲ್‌ಗಳನ್ನು ಆಯೋಜಿಸುವ ಮೂಲಕ ಫ್ಲಿಪ್‌ಕಾರ್ಟ್‌ ಶಾಪಿಂಗ್‌ ಪ್ರಿಯರ ಮನಗೆದ್ದಿದೆ. ಇನ್ನು ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಸೇವೆ ನೀಡುತ್ತಿರೋದು ನಿಮಗೆಲ್ಲಾ ತಿಳಿದೆ ಇದೆ. ಅಮೆಜಾನ್‌ ಪ್ರೈಮ್‌ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಪ್ಲಸ್‌ ಕೂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯತ್ವ ಪಡೆಯುವುದಕ್ಕಾಗಿ ಹೆಚ್ಚಿನ ಹಣ ಪಾವತಿಸುವ ಅಗತ್ಯವಿಲ್ಲ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಪ್ಲಸ್‌ ಸೇವೆ ನಿಮಗೆ ಸಾಕಷ್ಟು ಅನುಕೂಲಕರ ಸೇವೆಗಳನ್ನು ನೀಡಲಿದೆ. ಪ್ಲಸ್‌ ಸದಸ್ಯರು ಯಾವುದೇ ವಿಶೇಷ ಸೇಲ್‌ಗಳಿಗೆ ಮೊದಲೇ ಪ್ರವೇಶ ಪಡೆಯುವ ಅವಕಾಶವಿರುತ್ತದೆ. ನಖೀವು ಧರಿಸುವ ಬಟ್ಟೆ, ಸ್ಮಾರ್ಟ್‌ಫೋನ್‌ ಗ್ಯಾಜೆಟ್ ಸೇರಿದಂತೆ ಎಲ್ಲಾ ಪ್ರಾಡಕ್ಟ್‌ಗಳ ಮೇಲೂ ವಿಶೇಷ ಡಿಸ್ಕೌಂಟ್‌ ಸಿಗಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯತ್ವವನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್‌ ಪ್ಲಸ್‌ ಎಂದರೇನು?

ಫ್ಲಿಪ್‌ಕಾರ್ಟ್‌ ಪ್ಲಸ್‌ ಎಂದರೇನು?

ವಿಶೇಷ ಡೀಲ್‌ ಮತ್ತು ಆಫರ್‌, ಇತರ ಹೆಚ್ಚುವರಿ ಪ್ರಯೋಜನಗಳನ್ನು ನೀಡುವುದಕ್ಕಾಗಿ ಫ್ಲಿಪ್‌ಕಾರ್ಟ್‌ ಪ್ಲಸ್‌ ಸೇವೆ ಪರಿಚಯಿಸಿದೆ. ಫ್ಲಿಪ್‌ಕಾರ್ಟ್ 2018 ರಲ್ಲಿ ಫ್ಲಿಪ್‌ಕಾರ್ಟ್ ಪ್ಲಸ್ ಪ್ರೋಗ್ರಾಂ ಅನ್ನು ಪರಿಚಯಿಸಿದ್ದು, ಇದು ಅಮೆಜಾನ್ ಪ್ರೈಮ್‌ ಮಾದರಿಯ ಪ್ರಯೋಜನಗಳನ್ನು ನೀಡುತ್ತದೆ. ಇನ್ನು ನೀವು ಕೂಡ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಾದರೆ ಯಾವುದೇ ವಿಶೇಷ ಡೀಲ್‌ಗಳಿಗೆ ನೇರ ಪ್ರವೇಶ ಸಿಗಲಿದೆ. ಜೊತೆಗೆ ಫ್ರೀ ಡೆಲಿವರಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವದ ಪ್ರಯೋಜನಗಳೇನು?

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವದ ಪ್ರಯೋಜನಗಳೇನು?

ಫ್ಲಿಪ್‌ಕಾರ್ಟ್ ಪ್ಲಸ್‌ ಸದಸ್ಯರಾಗಿದ್ದರೆ, ನೀವು ಎಫ್-ಅಶ್ಯೂರ್ಡ್ ಉತ್ಪನ್ನಗಳ ಡೆಲಿವರಿ ಚಾರ್ಜ್‌ ಪಾವತಿಸುವ ಅಗತ್ಯವಿಲ್ಲ. ಅಲ್ಲದೆ ಇ-ಕಾಮರ್ಸ್‌ ಸೈಟ್‌ನಲ್ಲಿ ನಿಮ್ಮ ಪ್ರತಿ ಖರೀದಿಯ ಮೇಲೆ ಸೂಪರ್ ನಾಣ್ಯಗಳನ್ನು ನಿವು ಗಳಿಸಬಹುದು. ಅಲ್ಲದೆ ವಿಶೇಷ ಸೇಲ್‌ಗಳು, ಬಿಗ್ ಬಿಲಿಯನ್ ಡೇಸ್ ನಂತಹ ಸೇಲ್‌ ಸಮಯದಲ್ಲಿ ಸೇಲ್‌ ಆರಂಭಕ್ಕೂ ಮುನ್ನವೇ ಪ್ರವೇಶವನ್ನು ಪಡೆಯಬಹುದು. ಅಲ್ಲದೆ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ವಿಶೇಷವಾದ ಫ್ಲಿಪ್‌ಕಾರ್ಟ್ ಪೇ ಲೇಟರ್ ಆಯ್ಕೆಗಳನ್ನು ಸಹ ಪಡೆದುಕೊಳ್ಳಬಹುದು. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವವನ್ನು ಪಡೆಯಬೇಕಾದರೆ ಮೊದಲಿಗೆ ನಿಮ್ಮ ಬಳಿ ಫ್ಲಿಪ್‌ಕಾರ್ಟ್ ಸೂಪರ್ ನಾಣ್ಯಗಳು ಹೊಂದಿರಬೇಕು. Flipkart Plus ಗೆ ಒಂದು ವರ್ಷದ ಚಂದಾದಾರಿಕೆಗಾಗಿ ನೀವು 200 ಸೂಪರ್ ನಾಣ್ಯಗಳನ್ನು ಸಂಗ್ರಹಿಸಬೇಕಾಗುತ್ತದೆ.

ಫ್ಲಿಪ್‌ಕಾರ್ಟ್ ಸೂಪರ್ ನಾಣ್ಯಗಳನ್ನು ಸಂಗ್ರಹಿಸುವುದು ಹೇಗೆ?

ಫ್ಲಿಪ್‌ಕಾರ್ಟ್ ಸೂಪರ್ ನಾಣ್ಯಗಳನ್ನು ಸಂಗ್ರಹಿಸುವುದು ಹೇಗೆ?

ಸೂಪರ್ ನಾಣ್ಯಗಳನ್ನು ಗಳಿಸಬೇಕಾದರೆ ಮೊದಲಿಗೆ ನೀವು ಫ್ಲಿಪ್‌ಕಾರ್ಟ್‌ ನಿಯಮಿತವಾಗಿ ಶಾಪಿಂಗ್ ಮಾಡಬೇಕಾಗುತ್ತದೆ. ನೂರು ರೂ.ಗಳ ಖರೀದಿಯಲ್ಲಿ ನೀವು ಎರಡು ಸೂಪರ್ ನಾಣ್ಯಗಳನ್ನು ಗಳಿಸಬಹುದು. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ 500ರೂ,ವೆರೆಗಿನ ಖರೀದಿ ಮಾಡಿದರೆ 10 ಸೂಪರ್ ನಾಣ್ಯಗಳನ್ನು ಸಂಗ್ರಹಿಸಬಹುದು. ಒಂದೇ ಕ್ರಮದಲ್ಲಿ ಒಬ್ಬರು ಗರಿಷ್ಠ 50 ನಾಣ್ಯಗಳನ್ನು ಗಳಿಸಬಹುದು. ಒಟ್ಟಾರೆ ನೀವು 200 ಸೂಪರ್ ನಾಣ್ಯಗಳನ್ನು ಸಂಗ್ರಹಿಸಿದರೆ, ನೀವು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಪುಟಕ್ಕೆ ಹೋಗುವ ಮೂಲಕ 'ಜಾಯಿನ್‌' ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ನಂತರ ನಿಮ್ಮ Flipkart Plus ಸದಸ್ಯತ್ವವನ್ನು ಸಕ್ರಿಯಗೊಳಿಸಲಾಗುತ್ತದೆ.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವವನ್ನು ನವೀಕರಿಸುವುದು ಹೇಗೆ?

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವವನ್ನು ನವೀಕರಿಸುವುದು ಹೇಗೆ?

ಇನ್ನು ನಿಮಗೆಲ್ಲಾ ತಿಳಿದಿರುವಂತೆ ಫ್ಲಿಪ್‌ಕಾರ್ಟ್‌ ಪ್ಲಸ್ ಸದಸ್ಯತ್ವ ಒಮದು ವರ್ಷದ ಚಂದಾದಾರಿಕೆಯನ್ನು ಹೊಂದಿರುತ್ತದೆ. ಒಮದು ವರ್ಷದ ನಂತರ ಮತ್ತೊಮ್ಮೆ ನಿಮ್ಮ ಚಂದಾದಾರಿಕೆಯನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಮತ್ತೊಮ್ಮೆ 200 ಸೂಪರ್ ಕಾಯಿನ್‌ಗಳನ್ನು ಹೊಂದಬೇಕಾಗುತ್ತದೆ. ಇದಕ್ಕಾಗಿ ನೀವು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಫ್ಲಿಪ್‌ಕಾರ್ಟ್ ಎಲ್ಲಾ ಪ್ಲಸ್ ಸದಸ್ಯರಿಗೆ 100 ರೂ.ಗಳ ಖರೀದಿಯ ಮೇಲೆ ನಾಲ್ಕು ಸೂಪರ್ ನಾಣ್ಯಗಳನ್ನು ಒದಗಿಸುತ್ತದೆ. ಅಲ್ಲದೆ ಪ್ಲಸ್ ಸದಸ್ಯರು ಒಂದೇ ಆರ್ಡರ್‌ನಲ್ಲಿ ಗರಿಷ್ಠ 100 ಸೂಪರ್ ಕಾಯಿನ್‌ಗಳನ್ನು ಗಳಿಸಬಹುದು. ಒಮ್ಮೆ ನೀವು 200 ಸೂಪರ್ ನಾಣ್ಯಗಳನ್ನು ಹೊಂದಿದ್ದರೆ ನಿಮ್ಮ ಫ್ಲಿಪ್‌ಕಾರ್ಟ್ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರಿಕೆಯು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಆದರೆ ಇದಕ್ಕಾಗಿ ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ಲಾಗ್ ಇನ್ ಮಾಡಿ ಮತ್ತು ಸದಸ್ಯತ್ವವನ್ನು ಪಡೆಯಲು ಶಾಲಾ ಅಥವಾ ಕಾಲೇಜು ಐಡಿ ಕಾರ್ಡ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

Best Mobiles in India

English summary
Flipkart Plus program offers similar benefits like Amazon Prime.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X