Just In
- 6 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 8 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 9 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 11 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಕೊರೊನಾ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ವಲಯದ ಪಾತ್ರ?
ಕಳೆದ ವರ್ಷದ ಅಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಇಡೀ ಜಗತ್ತನ್ನೇ ಭಾದಿಸಿದೆ. ಅಷ್ಟೇ ಅಲ್ಲ ಇಂದಿಗೂ ಕೊರೊನಾ ವೈರಸ್ ಎಂಬ ಮಹಾಮಾರಿಯ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಇನ್ನು ಕೊರೊನಾ ಮಹಾಮಾರಿ ಶುರುವಾದ ಸಂದರ್ಭದಲ್ಲಿ ಜನರಿಗೆ ಸಹಾಯಕ್ಕೆ ಬಂದಿದ್ದು ಟೆಕ್ನಾಲಜಿ ಆಧಾರಿತ ವ್ಯವಸ್ಥೆ. ಕೊರೊನಾ ವೈರಸ್ ಎಲ್ಲೆಡೆ ಹಬ್ಬುವಾಗ ಜನರಿಗೆ ಅಗತ್ಯ ಮಾಹಿತಿ, ಕೊರೊನಾ ಕಂಟೊನ್ಮೇಟ್ ಜೋನ್ಗಳ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಯೋದಕ್ಕೆ ಟೆಕ್ನಾಲಜಿ ಆಧಾರಿತ ಆಪ್ಗಳು ಸಹಾಯ ಮಾಡಿವೆ.

ಹೌದು, ಕೊರೊನಾ ಎಂಬ ಮಹಾಮಾರಿ ಭಾರತಕ್ಕೂ ಕಾಲಿಟ್ಟಾಗ ಮೊದಲಿಗೆ ಜನರಿಗೆ ಅಗತ್ಯ ಎಚ್ಚರಿಕೆ, ಕೊರೊನಾ ವೈರಸ್ ಹೆಚ್ಚಿರುವ ಕಂಟೊನ್ಮೆಂಟ್ ಜೋನ್ಗಳ ಬಗ್ಗೆ ಮಾಹಿತಿ ಎಲ್ಲವನ್ನೂ ನೀಡುವುದಕ್ಕೆ ಟೆಕ್ನಾಲಜಿ ಸಾಕಷ್ಟು ಸಹಾಯ ಮಾಡಿದೆ. ಅದರಲ್ಲು ಭಾರತ ಸರ್ಕಾರ ಕೊರೊನಾ ಮಾಹಿತಿಗಾಗಿಯೇ ಆರೋಗ್ಯ ಸೇತು ಆಪ್ ಪರಿಚಯಿಸಿತ್ತು. ಅಲ್ಲದೆ ಎಲ್ಲರೂ ಇದನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಿತ್ತು. ಇನ್ನು ಕರ್ನಾಟಕದಲ್ಲಿಯೂ ಆಪ್ತಮಿತ್ರ ಆಪ್ ಕೂಡ ಪರಿಚಯಿಸಲಾಗಿತ್ತು. ಇನ್ನುಳಿದಂತೆ ಕೊರೊನಾ ಸಮಯದಲ್ಲಿ ಟೆಕ್ ವಲಯದಿಂದಾದ ಸಹಾಯವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಟೆಕ್ ವಲಯವೆಂದರೆ ಕೇವಲ ಬ್ಯುಸಿನೆಸ್ ಎಂದು ಹೇಳುವವರ ನಡುವೆಯು ಕೊರೊನಾ ಸಂದರ್ಭದಲ್ಲಿ ಟೆಕ್ ವಲಯದ ಸಮಾಜಮುಖಿ ಕಾರ್ಯಗಳಿಗೂ ಉಪಯುಕ್ತವಾದವು. ಕೊರೊನಾ ವೈರಸ್ ದೇಶದೆಲ್ಲೆಡೆ ಹರಡಿ ಸಂಕಷ್ಟಕ್ಕೆ ದೂಡುತ್ತಿರುವ ಈ ಸಮಯದಲ್ಲಿ ಎಲ್ಲಾ ವಲಯಗಳ ಸೇವೆ ಅತ್ಯಗತ್ಯ. ಅದರಲ್ಲೂ ಟೆಲಿಕಾಂ ವಲಯ ಟೆಕ್ ಕಂಪೆನಿಗಳಿಗಿಂತ ಸಾರ್ವಜನಿಕರ ಜೊತೆ ಹೆಚ್ಚು ಕನೆಕ್ಟಿವಿಟಿಯನ್ನ ಹೊಂದಿವೆ. ಇದೇ ಕಾರಣಕ್ಕೆ ಕೊರೊನಾ ವೈರಸ್ ಭಾರತಕ್ಕೆ ಎಂಟ್ರಿ ಕೊಡ್ತಿದ್ದ ಹಾಗೇ ಎಲ್ಲರೂ ಕರೆ ಮಾಡಿದ ಸಂದರ್ಭದಲ್ಲಿ ಕೊರೊನಾ ಕುರಿತ ಎಚ್ಚರಿಕೆ ಟ್ಯೂನ್ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸುವುದಕ್ಕೆ ಮುಂದಾಯ್ತು.

ಇನ್ನು ಕೊರೊನಾ ಸಮಯದಲ್ಲಿ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಾದ್ಯವಾಗಿದೆ. ಅಲ್ಲದೆ ಭಾರತ ಸರ್ಕಾರದ ಆರೋಗ್ಯ ಸೇತು, ಕರ್ನಾಟಕ ಸರ್ಕಾರದ ಆಪ್ತಮಿತ್ರಾ ಆಪ್, ಕಂಟೋನ್ಮೆಂಟ್ ವಾಚ್ ಆಪ್, ಕ್ವಾರಂಟೈನ್ ವಾಚ್ ಮೊಬೈಲ್ ಆಪ್, KSP ಕ್ಲಿಯರ್ ಪಾಸ್ ಮೊಬೈಲ್ ಆಪ್, ಕಂಟ್ಯಾಕ್ಟ್ ಟ್ರಾಕಿಂಗ್ ಆಪ್ ಗಳು ಸಾಕಷ್ಟು ಉಪಯುಕ್ತ ಸೇವೆಯನ್ನು ನೀಡಿದ್ದಲ್ಲದೆ. ಜನರಿಗೆ ಕೊರೊನಾ ಹಾವಳಿಯಿಂದ ಎಚ್ಚರಿಕೆಯಿಂದಿರಲೂ ಸಹಾಯ ಮಾಡಿವೆ.

ಇದಲ್ಲದೆ ಕೊರೊನಾ ವೈರಸ್ ಕಾರಣದಿಂದಾಗಿ ಶಾಲಾ, ಕಾಲೇಜುಗಳೆಲ್ಲಾ ಬಂದ್ ಆಗಿ ಹೋದಾಗ ಆನ್ಲೈನ್ ಶಿಕ್ಷಣದ ಮೂಲಕ ಮತ್ತೇ ವಿಧ್ಯಾರ್ಥಿಗಳಿಗೆ ಪಾಠ ಕೇಳುವ ಅವಕಾಶವನ್ನು ಕಲ್ಪಿಸಿದ್ದು ಕೂಡ ಇದೇ ಟೆಕ್ ವಲಯ. ಅಷ್ಟೇ ಅಲ್ಲ ದೇಶವೇ ಲಾಕ್ಡೌನ್ ಆಗಿದ್ದಾಗ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗಿದ್ದು ಕೂಡ ಆಪ್ಗಳಿಂದಲೇ. ಹೀಗೆ ಕೊರೊನಾ ಸಂದರ್ಭದಲ್ಲಿ ಜನರ ಅಗತ್ಯ ಸೇವೆಗಳಿಗೆ ಬೆನ್ನೆಲುಬಾಇ ನಿಂತಿದ್ದು, ಟೆಕ್ ವಲಯ ಎಂದೇ ಹೇಳಬಹುದಾಗಿದೆ. ಟೆಕ್ನಾಲಜಿ ಎಂದರೆ ಮೂಗು ಮುರಿಯುತ್ತಿದ್ದ ಜನ ಕೂಡ ಟೆಕ್ನಾಲಜಿಯ ಉಪಯೋಗವನ್ನ ಈ ಕೊರೊನಾ ಕಾಲದಲ್ಲಿ ಪಡೆದುಕೊಂಡಿದ್ದಾರೆ ಎಂದರೆ ಅಚ್ಚರಿಯೇನಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086