ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಈಗ ವಾಟ್ಸಪ್‌ ಡಾರ್ಕ್ ಮೋಡ್ ಲಭ್ಯ!

|

ವಿಶ್ವದಲ್ಲಿಯೇ ಎರಡು ಬಿಲಿಯನ್ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಇದೀಗ 'ಡಾರ್ಕ್ ಮೋಡ್' ಫೀಚರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಮೊದಲು ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದ್ದ ಡಾರ್ಕ್ ಮೋಡ್ ಸೌಲಭ್ಯವು ಇದೀಗ ಸಾಮಾನ್ಯ ಆವೃತ್ತಿಯಲ್ಲಿಯೂ ಲಭ್ಯ ಮಾಡಿದ್ದು, ಇದರೊಂದಿಗೆ ಐಓಎಸ್‌ ಆಪರೇಟಿಂಗ್ ಸಿಸ್ಟಮ್ ಐಫೋನ್ ಆವೃತ್ತಿಯಲ್ಲಿಯೂ ಡಾರ್ಕ್ ಮೋಡ್ ಪರಿಚಯಿಸಿದೆ.

ವಾಟ್ಸಪ್ ಡಾರ್ಕ್ ಮೋಡ್

ಹೌದು, ಬಹುನಿರೀಕ್ಷಿತ ವಾಟ್ಸಪ್ ಡಾರ್ಕ್ ಮೋಡ್ ಫೀಚರ್ ಇದೀಗ ಆಂಡ್ರಾಯ್ಡ್ ಮತ್ತು ಐಓಎಸ್‌ ಆವೃತ್ತಿಗಳಲ್ಲಿಯೂ ಪರಿಚಯಿಸಿದೆ. ಡಾರ್ಕ್ ಮೋಡ್ ಫೀಚರ್ ವಾಟ್ಸಪ್‌ಗೆ ಫ್ರೇಶ್‌ ಲುಕ್ ನೀಡಲಿದ್ದು, ಡಿಸ್‌ಪ್ಲೇಯ ಪ್ರಖರ ಬೆಳಕಿನಯಿಂದ ಬಳಕೆದಾರರ ಕಣ್ಣಿಗಳಿಗೆ ಉಂಟಾಗುವ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಇನ್ನು ಈ ಆಯ್ಕೆಯು ಸದ್ಯದಲ್ಲಿನ ವಾಟ್ಸಪ್ ನೂತನ ಅಪ್‌ಡೇಟ್ ವರ್ಷನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ವಾಟ್ಸಪ್ ಡಾರ್ಕ್ ಮೋಡ್ ಬಗ್ಗೆ ಕೆಲವು ಸಂಗತಿಗಳನ್ನು ನೀವು ತಿಳಿಯಬೇಕು. ಮುಂದೆ ಓದಿರಿ.

ಇತ್ತೀಚಿಗಿನ ಆವೃತ್ತಿ

ಇತ್ತೀಚಿಗಿನ ಆವೃತ್ತಿ

ವಾಟ್ಸಪ್‌ನಲ್ಲಿ ಡಾರ್ಕ್ ಮೋಡ್ ಆಯ್ಕೆ ಬಳಕೆ ಮಾಡಲು ಬಳಕೆದಾರರು ಇತ್ತೀಚಿನ ನೂತನ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಐಫೋನ್ ಬಳಕೆದಾರರಾಗಿದ್ದರೇ 2.20.30 ಆವೃತ್ತಿಯನ್ನು ಡೌನ್‌ಲೋಡ್/ಅಪ್‌ಡೇಟ್ ಮಾಡಿಕೊಳ್ಳಬೇಕು.

ಆಂಡ್ರಾಯ್ಡ್ 10 ಓಎಸ್

ಆಂಡ್ರಾಯ್ಡ್ 10 ಓಎಸ್

ಆಂಡ್ರಾಯ್ಡ್‌ 10 ಓಎಸ್‌ ಅಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿಯೇ ಡಾರ್ಕ್ ಮೋಡ್ ಆಯ್ಕೆ ಲಭ್ಯವಿದೆ. ಆಂಡ್ರಾಯ್ಡ್ 10 ಓಎಸ್‌ನಲ್ಲಿ ಡಾರ್ಕ್‌ ಮೋಡ್ ಫೀಚರ್‌ ಇನ್‌ಬಿಲ್ಟ್ ಆಗಿ ನೀಡಲಾಗಿದೆ. ಅದಾಗ್ಯೂ ವಾಟ್ಸಪ್‌ ಅಪ್‌ಡೇಟ್ ಮಾಡಿ ಡಾರ್ಕ್ ಮೋಡ್ ಬಳಕೆ ಮಾಡಬಹುದು.

ಆಂಡ್ರಾಯ್ಡ್ 9 ಓಎಸ್

ಆಂಡ್ರಾಯ್ಡ್ 9 ಓಎಸ್

ಆಂಡ್ರಾಯ್ಡ್ 9 ಓಎಸ್‌ ಆವೃತ್ತಿಯ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಪ್‌ನಲ್ಲಿ ಲಭ್ಯವಾಗಿರುವ ಡಾರ್ಕ್ ಮೋಡ್ ಆಯ್ಕೆಯನ್ನು ಬಳಕೆ ಮಾಡಬಹುದು. ಅದಕ್ಕಾಗಿ ಬಳಕೆದಾರರು ಈ ಹಂತಗಳನ್ನು ಅನುಸರಿಸಬೇಕು ವಾಟ್ಸಪ್ ಸೆಟ್ಟಿಂಗ್ಸ್ > ಚಾಟ್ಸ್‌ > ಥೀಮ್‌ > ಡಾರ್ಕ್.

ಹಳೆಯ ಫೋನ್‌ಗಳಿಗೆ ಸಪೋರ್ಟ್‌ ಇಲ್ಲ

ಹಳೆಯ ಫೋನ್‌ಗಳಿಗೆ ಸಪೋರ್ಟ್‌ ಇಲ್ಲ

ಹಳೆಯ ಆಂಡ್ರಾಯ್ಡ್ ಓಎಸ್‌ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತು ಐಓಎಸ್‌ 8 ಮತ್ತು ಅದಕ್ಕಿಂತ ಹಿಂದಿನ ಓಎಸ್‌ ಆವೃತ್ತಿಯ ಐಫೋನ್‌ಗಳಲ್ಲಿಯೂ ಡಾರ್ಕ್ ಮೋಡ್ ಆಯ್ಕೆ ಲಭ್ಯವಾಗುವುದಿಲ್ಲ ಎನ್ನಲಾಗಿದೆ.

ವಾಟ್ಸಪ್‌ ವೆಬ್‌

ವಾಟ್ಸಪ್‌ ವೆಬ್‌

ಆಂಡ್ರಾಯ್ಡ್ ಮತ್ತು ಐಓಎಸ್‌ ಆವೃತ್ತಿಯಲ್ಲಿ ವಾಟ್ಸಪ್‌ ಸಂಸ್ಥೆಯು ಡಾರ್ಕ್ ಮೋಡ್ ಫೀಚರ್‌ ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಆದರೆ ವಾಟ್ಸಪ್ ವೆಬ್ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಫೀಚರ್ ಅನ್ನು ಇನ್ನು ಪರಿಚಯಿಸಿಲ್ಲ. ಸದ್ಯದಲ್ಲಿಯೇ ವಾಟ್ಸಪ್‌ ವೆಬ್‌ನಲ್ಲಿಯು ಡಾರ್ಕ್ ಮೋಡ್ ಆಯ್ಕೆ ಪರಿಚಯಿಸಲಿದೆ.

Most Read Articles
Best Mobiles in India

English summary
WhatsApp has officially rolled out the dark mode feature for its Android and iOS users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X