ವಾಟ್ಸಾಪ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಇದೀಗ ವಿಂಡೋಸ್‌ ಸ್ಟೋರ್‌ನಲ್ಲಿ ಲಭ್ಯ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್‌ ವಿಂಡೋಸ್ ಆಧಾರಿತ ಲ್ಯಾಪ್‌ಟಾಪ್‌ಗಳಿಗಾಗಿ ಹೊಸ ಡೆಸ್ಕ್‌ಟಾಪ್ ಅಪ್ಲಿಕೇಶನ್‌ ಪರಿಚಯಿಸಿದೆ. ಸದ್ಯ ಈ ಹೊಸ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಇದನ್ನು ಮೈಕ್ರೋಸಾಫ್ಟ್ ವಿಂಡೋಸ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ WhatsApp ವೆಬ್‌ಗೆ ಪರ್ಯಾಯವಾದ ಅಪ್ಲಿಕೇಶನ್‌ ಆಗಿರಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಇದುವರೆಗೆ ಬಹಳಷ್ಟು ವಿಂಡೋಸ್ ಬಳಕೆದಾರರು ತಮ್ಮ ಡೆಸ್ಕ್‌ಟಾಪ್‌ನಲ್ಲಿ ಬೇಕಾದಾಗ ಮಾತ್ರ ವಾಟ್ಸಾಪ್‌ ಅನ್ನು ಬಳಸುತ್ತಿದ್ದರು. ಆದರೆ ಇನ್ಮುಂದೆ ವಾಟ್ಸಾಪ್‌ ವೆಬ್‌ ಅನ್ನು ತೆರೆಯಲು ಗೂಗಲ್‌ ಕ್ರೋಮ್‌, ಮೈಕ್ರೋಸಾಫ್ಟ್‌ ಎಡ್ಜ್‌ ಬ್ರೌಸರ್‌ ಅನ್ನು ಅವಲಂಬಿಸುವ ಅವಶ್ಯಕತೆಯಿಲ್ಲ. ಆದರೆ ವಾಟ್ಸಾಪ್‌ ವೆಬ್‌ ಅಪ್ಲಿಕೇಶನ್‌ ಅನ್ನು ಬಳಸುವುದಕ್ಕೆ ನಿಮ್ಮ ಸಿಸ್ಟಂ ವಿಡೋಸ್‌ 10 ಹೊಂದಿರಬೇಕಾಗುತ್ತದೆ. ಹಾಗಾದ್ರೆ ವಿಂಡೋಸ್‌ ನಲ್ಲಿ ವಾಟ್ಸಾಪ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಅನ್ನು ಲ್ಯಾಪ್‌ಟಾಪ್‌ನಲ್ಲಿ ಬಳಸಬೇಕಾದರೆ ವಾಟ್ಸಾಪ್‌‌ ವೆಬ್‌ ತೆರೆಯಬೇಕಾದ ಅಗತ್ಯವಿತ್ತು. ಇದಕ್ಕಾಗಿ ಹೆಚ್ಚಿನ ಜನರು ಗೂಗಲ್‌ ಕ್ರೋಮ್‌, ಮೈಕ್ರೋಸಾಫ್ಟ್‌ ಎಡ್ಜ್‌ ಮೂಲಕ ಸರ್ಚ್‌ ಮಾಡಬೇಕಿತ್ತು. ಆದರೆ ಇನ್ಮುಂದೆ ಗೂಗಲ್‌ಕ್ರೋಮ್‌ ಬಳಸುವುದನ್ನು ಈ ಹೊಸ ಅಪ್ಲಿಕೇಶನ್‌ ನಿವಾರಿಸಲಿದೆ. ಈ ಹೊಸ ಅಪ್ಲಿಕೇಶನ್ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕಾರ್ಯನಿರ್ವಹಿಸಬೇಕಾದ್ರೆ x64 ಆರ್ಕಿಟೆಕ್ಚರ್-ಆಧಾರಿತ CPU ಮತ್ತು Windows 10 ಆವೃತ್ತಿ 14316.0 ಅಥವಾ ಇದಕ್ಕಿಂತ ಹೆಚ್ಚಿನ ವಿಂಡೋಸ್‌ ಅವಶ್ಯಕತೆ ಇದೆ. ನೀವು ಕೂಡ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್‌ ಅನ್ನು ಡೌನ್‌ಲೋಡ್‌ ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸಿರಿಸಿ.

ವಿಂಡೋಸ್‌ನಲ್ಲಿ ವಾಟ್ಸಾಪ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ವಿಂಡೋಸ್‌ನಲ್ಲಿ ವಾಟ್ಸಾಪ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಮೈಕ್ರೋಸಾಫ್ಟ್ ವಿಂಡೋಸ್ ಸ್ಟೋರ್‌ಗೆ ಹೋಗಿ.
ಹಂತ:2 ವಾಟ್ಸಾಪ್‌ ಡೆಸ್ಕ್‌ಟಾಪ್‌ ಅನ್ನು ಸರ್ಚ್‌ ಮಾಡಿ.
ಹಂತ:3 ನಂತರ ವಾಟ್ಸಾಪ್‌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು 'ಗೆಟ್' ಬಟನ್ ಕ್ಲಿಕ್ ಮಾಡಿ.
ಹಂತ:4 ಇದಾದ ನಂತರ ವಾಟ್ಸಾಪ್‌ ಡೆಸ್ಕ್‌ಟಾಪ್ ಅನ್ನು ಸೆಟ್‌ ಮಾಡುವ ಮೂಲಕ ಬಳಸಬಹುದಾಗಿದೆ.

ವಾಟ್ಸಾಪ್ ಡೆಸ್ಕ್‌ಟಾಪ್ ಬಗ್ಗೆ ನೀವು ತಿಳಿಯಬೇಕಾದ ವಿಚಾರಗಳು!

ವಾಟ್ಸಾಪ್ ಡೆಸ್ಕ್‌ಟಾಪ್ ಬಗ್ಗೆ ನೀವು ತಿಳಿಯಬೇಕಾದ ವಿಚಾರಗಳು!

ಇನ್ನು ವಾಟ್ಸಾಪ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್ ಇನ್ನೂ ಬೀಟಾದಲ್ಲಿರುವುದರಿಂದ, ಪ್ರಸ್ತುತ ಹಂತದಲ್ಲಿ ಕೆಲವು ಸಮಸ್ಯೆಗಳು ಮತ್ತು ದೋಷಗಳನ್ನು ನಿರೀಕ್ಷಿಸಬಹುದು. ಇದಲ್ಲದೆ ವಿಂಡೋಸ್ 11 ನಲ್ಲಿ WhatsApp ಡೆಸ್ಕ್‌ಟಾಪ್ ಕ್ರ್ಯಾಶ್ ಆಗುತ್ತದೆ ಎಂದು ಹೇಳಲಾಗಿದೆ. WhatsApp ಡೆಸ್ಕ್‌ಟಾಪ್ ಸಹ ಈಗಿನಂತೆ, ಹೆಚ್ಚಾಗಿ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಬಳಸುವುದರ ಮೇಲೆ ಅವಲಂಬಿತವಾಗಿದ್ದು, ಇದು ಸ್ವತಂತ್ರವಾಗಿಲ್ಲ. ಆದ್ದರಿಂದ ನೀವು ಫೋನ್ ಇಲ್ಲದೆಯೇ ನಿಮ್ಮ PC ಯಲ್ಲಿ ವಾಟ್ಸಾಪ್‌‌ ಬಳಸಬೇಕಾದರೆ ಮಲ್ಟಿ-ಡಿವೈಸ್‌ ಅನ್ನು ಲಿಂಕ್ ಮಾಡುವ ಮೂಲಕ ಬಳಸುವುದು ನಿಮ್ಮ ಏಕೈಕ ಆಯ್ಕೆಯಾಗಿರಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸುವುದರಲ್ಲಿ ನಿರತವಾಗಿದೆ. ಇದರಲ್ಲಿ ಕೆಲವು ಫೀಚರ್ಸ್‌ಗಳು ಅಭಿವೃದ್ದಿ ಹಂತದಲ್ಲಿದ್ದರೆ, ಇನ್ನು ಕೆಲವು ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಇದರಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ವಾಟ್ಸಾಪ್ ಬಳಸುವ ಆಯ್ಕೆ ಕೂಡ ಸೇರಿದೆ. ಇತ್ತೀಚೆಗೆ, ವಾಟ್ಸಾಪ್ ವೇದಿಕೆಯು ಎಲ್ಲಾ ಬೀಟಾ ಬಳಕೆದಾರರಿಗೆ ಬಹು ಸಾಧನ ವೈಶಿಷ್ಟ್ಯವನ್ನು ಸೇರಿಸಿದೆ. ಮುಖ್ಯ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಸಂಪರ್ಕ ಇಲ್ಲದಿದ್ದರೂ ಸಹ ಬಹು ಸಾಧನಗಳಲ್ಲಿ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಈ ವೈಶಿಷ್ಟ್ಯವು ಬಳಕೆದಾರರನ್ನು ಅನುಮತಿಸುತ್ತದೆ. ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನು ಇನ್ನೂ ನಾಲ್ಕು ಸಾಧನಗಳೊಂದಿಗೆ ಲಿಂಕ್ ಮಾಡಬಹುದು.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ಮೇಸೆಜ್ ಕಳುಹಿಸುವ ಮುನ್ನ ವಾಯ್ಸ್‌ ಮೇಸೆಜ್ ಕೇಳುವ ಹೊಸ ಆಯ್ಕೆಯನ್ನು ಪರಿಚಯಿಸಲಿದೆ. ಇದರಲ್ಲಿ ಬಳಕೆದಾರರು ರೆಕಾರ್ಡ್ ಮಾಡಿದ ಧ್ವನಿ ಸಂದೇಶಗಳನ್ನು ಕಳುಹಿಸುವ ಮೊದಲು ಕೇಳಬಹುದು. ಕಂಪನಿಯು ಸ್ಟಾಪ್ ಬಟನ್ ಅನ್ನು ಸೇರಿಸುತ್ತಿದೆ ಮತ್ತು ಬಳಕೆದಾರರು ಧ್ವನಿ ಸಂದೇಶವನ್ನು ತ್ವರಿತವಾಗಿ ಆಲಿಸಬಹುದು. ಅವರು ರೆಕಾರ್ಡ್ ಮಾಡಿದ ಧ್ವನಿ ಸಂದೇಶವನ್ನು ಇಷ್ಟಪಡದಿದ್ದರೆ, ಅವರು ಅದನ್ನು ಅಳಿಸಬಹುದು. ಹಾಗೆಯೇ ವಾಟ್ಸಾಪ್‌ ಸಂದೇಶ ಪ್ರತಿಕ್ರಿಯೆಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಬಳಕೆದಾರರು ಅವುಗಳನ್ನು ಹೇಗೆ ನೋಡುತ್ತಾರೆ. ಹಂಚಿದ ಪ್ರತಿಕ್ರಿಯೆ/ಎಮೋಜಿಯು ಚಾಟ್‌ನಲ್ಲಿ ತೆರೆಯದಿದ್ದರೆ, ವಾಟ್ಸಾಪ್ ಆವೃತ್ತಿ ಚಾಲನೆಯಲ್ಲಿರುವ ಪ್ರತಿಕ್ರಿಯೆಗಳನ್ನು ಸ್ವೀಕರಿಸುವುದನ್ನು ಬೆಂಬಲಿಸುವುದಿಲ್ಲ ಎಂದು ವಾಟ್ಸಾಪ್ ಬಳಕೆದಾರರಿಗೆ ತಿಳಿಸುತ್ತದೆ.

Best Mobiles in India

English summary
WhatsApp Desktop app available to download from Windows app store.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X