ವಾಟ್ಸಾಪ್‌ನ ಬಹು ನಿರೀಕ್ಷಿತ ಫೀಚರ್ಸ್‌ ಇದೀಗ ಬೀಟಾ ವರ್ಷನ್‌ನಲ್ಲಿ ಲಭ್ಯ!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇತ್ತೀಚಿಗಷ್ಟೇ ವಾಟ್ಸಾಪ್‌ ಕ್ಲೌಡ್ ಬ್ಯಾಕ್-ಅಪ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸುವುದಾಗಿ ಹೇಳಿತ್ತು. ಇದೀಗ ತನ್ನ ಬೀಟಾ ವರ್ಷನ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಕ್ಲೌಡ್‌ ಬ್ಯಾಕ್‌ ಆಪ್‌ನಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್ ಗೂಗಲ್ ಡ್ರೈವ್ ಮತ್ತು ಐಕ್ಲೌಡ್‌ನಲ್ಲಿ ಬ್ಯಾಕಪ್ ಆಗಿರುವ ಚಾಟ್‌ಗಳನ್ನು ಪ್ರೊಟೆಕ್ಟ್‌ ಮಾಡಲು ಮುಂದಾಗಿದೆ. ಈಗಾಗಲೇ ಐಒಎಸ್ ಮತ್ತು ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹಾಗಾದ್ರೆ ವಾಟ್ಸಾಪ್‌ ಪ್ರಸ್ತುತ ಚಾಟ್‌ಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಈಗಾಗಲೇ ತನ್ನ ಚಾಟ್‌ಗಳನ್ನು ಪ್ರೊಟೆಕ್ಟ್‌ ಮಾಡುವುದಕ್ಕಾಗಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಫೀಚರ್ಸ್‌ ಹೊಂದಿದೆ. ಇದೀಗ ವಾಟ್ಸಾಪ್‌ ತನ್ನ ಬ್ಯಾಕಪ್ ಚಾಟ್‌ ಅನ್ನು ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮಾಡುವುದಕ್ಕೆ ಮುಂದಾಗಿದೆ. ಈಗಾಗಲೇ ಚಾಟ್‌ ಬ್ಯಾಕಪ್‌ ಎನ್‌ಕ್ರಿಪ್ಶನ್‌ ಫೀಚರ್ಸ್‌ ಅನ್ನು ಬೀಟಾ ವರ್ಷನ್‌ನಲ್ಲಿ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಇದನ್ನು ನೀವು ಒಂದು ಬಾರಿ ಆಕ್ಟಿವ್‌ ಮಾಡಿದರೆ ಸಾಕು ನಿಮ್ಮ ಬ್ಯಾಕಪ್‌ನಲ್ಲಿಯೂ ಕೂಡ ನಿಮ್ಮ ಚಾಟ್‌ಗಳನ್ನು ಬೇರೆಯವರು ನೋಡಲು ಸಾದ್ಯವಾಗುವುದಿಲ್ಲ.

ವಾಟ್ಸಾಪ್

ವಾಟ್ಸಾಪ್ ಚಾಟ್ ಬ್ಯಾಕಪ್‌ಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಫೀಚರ್ ಅನ್ನು ತಾತ್ಕಾಲಿಕವಾಗಿ ಅದರ ಆಂಡ್ರಾಯ್ಡ್ ಬೀಟಾ ಆಪ್‌ನಲ್ಲಿ ಸಕ್ರಿಯಗೊಳಿಸಿದೆ. ನಂತರ ಅದನ್ನು ಆಂಡ್ರಾಯ್ಡ್ ಆವೃತ್ತಿ .21.15.7 ಗಾಗಿ ವಾಟ್ಸಾಪ್‌ ಬೀಟಾದಲ್ಲಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ವಾಟ್ಸಾಪ್‌ ತನ್ನ ಆಂಡ್ರಾಯ್ಡ್ ಬೀಟಾ ಆಪ್‌ನಲ್ಲಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ನಿಮ್ಮ ಬ್ಯಾಕಪ್ ಅನ್ನು ಪ್ರೊಟೆಕ್ಟ್‌ ಮಾಡಲು, ನೀವು ವೈಯಕ್ತಿಕ ಪಾಸ್‌ವರ್ಡ್ ಅಥವಾ 64-ಬಿಟ್ ಎನ್‌ಕ್ರಿಪ್ಶನ್ ಕೀಯನ್ನು ಆಯ್ಕೆ ಮಾಡಬಹುದು ಎಂದು ವಾಟ್ಸಾಪ್‌ ಹೇಳಿಕೊಂಡಿದೆ.

ವಾಟ್ಸಾಪ್‌

ಆದರೆ ನೀವು ವಾಟ್ಸಾಪ್‌ನ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವ ಮೊದಲು ಎಚ್ಚರಿಕೆ ವಹಿಸುವುದು ಕೂಡ ಅಗತ್ಯ. ಏಕೆಂದರೆ ಒಂದು ಬಾರಿ ನೀವು ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಪಾಸ್‌ವರ್ಡ್‌ ಮರೆತು ಹೋದರೆ ವಾಟ್ಸಾಪ್‌ ಮೂಲಕ ರಿಸ್ಟೋರ್‌ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. 64-ಅಂಕಿಯ ಎನ್‌ಕ್ರಿಪ್ಶನ್‌ ಕೀ ಅಥವಾ ಬಳಕೆದಾರರು ಸೆಟ್‌ ಮಾಡಿದ ಪಾಸ್‌ವರ್ಡ್ ಮೂಲಕ ಮಾತ್ರ ಚಾಟ್ ಬ್ಯಾಕಪ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.

ಐಒಎಸ್

ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಪ್ಟ್-ಇನ್ ಫೀಚರ್ ಲಬ್ಯವಾಗಲಿದೆ. ಇನ್ನು ನೀವು ನಿಮ್ಮ ಚಾಟ್ ಬ್ಯಾಕಪ್‌ಗಳನ್ನು ರಕ್ಷಿಸಲು ಈ ಫೀಚರ್ಸ್‌ ಅನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬೇಕಾಗುತ್ತದೆ. ಇದನ್ನು ಸಕ್ರಿಯಗೊಳಿಸಲು, ನೀವು ವಾಟ್ಸಾಪ್‌ ಸೆಟ್ಟಿಂಗ್‌ಗಳು> ಚಾಟ್ಸ್> ಚಾಟ್ ಬ್ಯಾಕಪ್> ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗೆ ಹೋಗಬಹುದು. ವಾಟ್ಸಾಪ್ ಪ್ರಸ್ತುತ ಆಯ್ದ ಬಳಕೆದಾರರಿಗೆ ಮಾತ್ರ ಈ ಫೀಚರ್ಸ್‌ ಅನ್ನು ಹೊರತರುತ್ತಿದೆ. ನೀವು ಬೀಟಾ ಪರೀಕ್ಷಕರಾಗಿದ್ದರೆ ಭವಿಷ್ಯದ ಅಪ್‌ಡೇಟ್‌ಗಳಲ್ಲಿ ನೀವು ಅದನ್ನು ಪಡೆಯಬಹುದಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಮುಂದಿನ ದಿನಗಳಲ್ಲಿ, ಲಾಸ್ಟ್‌ ಸೀನ್‌ ಅನ್ನು ಹೈಡ್‌ ಮಾಡುವುದಕ್ಕೆ ಹೊಸ ಫೀಚರ್ಸ್‌ ಸೇರಿಸಲಿದೆ. ಈಗಾಗಲೇ ಈ ಫೀಚರ್ಸ್‌ ಅನ್ನು WaBetaInfo ಗುರುತಿಸಿದೆ. ಇದು ಶೀಘ್ರದಲ್ಲೇ ಸ್ಥಿರ ಆವೃತ್ತಿಗೆ ಬರುವ ನಿರೀಕ್ಷೆಯಿದೆ. ಈ ಹೊಸ ಆಯ್ಕೆಯು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಈ ಫೀಚರ್ಸ್‌ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ "My contacts except" ಆಯ್ಕೆಯನ್ನು ಸೇರಿಸಲು ಸೆಟ್‌ ಮಾಡಲಾಗಿದೆ. ಇದು ಬಳಕೆದಾರರಿಗೆ ನಿರ್ದಿಷ್ಟ ಸಂಪರ್ಕಗಳಿಗಾಗಿ ಕೊನೆಯದಾಗಿ ನೋಡುವುದನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌

ಹಾಗೆಯೇ ವಾಟ್ಸಾಪ್‌ ಶೀಘ್ರದಲ್ಲೇ ಬಳಕೆದಾರರ ಇಮೇಜ್‌ಗಳನ್ನು ಸ್ಟಿಕ್ಕರ್‌ಗಳಾಗಿ ಕನ್ವರ್ಟ್‌ ಮಾಡಬಲ್ಲ ಫೀಚರ್ಸ್‌ ಪರಿಚಯಿಸಲು ಪ್ಲಾನ್‌ ರೂಪಿಸಿದೆ. ಇದರಿಂದ ಬಳಕೆದಾರರು ಇನ್ಮುಂದೆ ತಮ್ಮದೇ ಇಮೇಜ್‌ಗಳನ್ನು ಸ್ಟಿಕ್ಕರ್‌ ರೂಪದಲ್ಲಿ ಸೆಂಡ್‌ ಮಾಡಬಹುದಾಗಿದೆ. ನಿಮ್ಮದೇ ಇಮೇಜ್‌ ಅನ್ನು ಸ್ಟಿಕ್ಕರ್‌ ರೂಪದಲ್ಲಿ ಕಳುಹಿಸಲು ಇನ್ಮುಂದೆ ಯಾವುದೇ ರೀತಿಯ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಅಗತ್ಯವಿಲ್ಲ ಎನ್ನಲಾಗಿದೆ.

Most Read Articles
Best Mobiles in India

English summary
WhatsApp currently provides end-to-end encryption for chats that means nobody apart from the sender and receiver can access the chats, not even WhatsApp and Facebook.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X