ಬಳಕೆದಾರರಿಗೆ ವಾಯ್ಸ್‌ ಆನಿಮೇಷನ್‌ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಫೀಚರ್ಸ್‌ಗಳ ಮೂಲಕವೇ ಬಳಕೆದಾರರ ಸ್ನೇಹಿಯಾಗಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಐಒಎಸ್‌ನಲ್ಲಿ ವಾಟ್ಸಾಪ್ ಮೆಸೆಂಜರ್ ಅನ್ನು ಅಪ್ಡೇಟ್‌ ಮಾಡಲಾಗಿದ್ದು, ವಾಯ್ಸ್‌ ಮೆಸೇಜ್‌ಗಳಿಗಾಗಿ ಹೊಸ ಅನಿಮೇಷನ್ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ರೀಡಿಂಗ್‌ ರೆಸಿಪ್ಟ್ಸ್‌ ಸೆಟ್ಟಿಂಗ್ ಅನ್ನು ಅವಲಂಬಿಸಿ ಅವರಿಗೆ ರೆಸಿಪ್ಟ್ಸ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಐಒಎಸ್‌ನಲ್ಲಿ ತನ್ನ ಹೊಸ ಆವೃತ್ತಿ 2.21.40 ಗೆ ಅಪ್ಡೇಟ್‌ ಮಾಡಿದೆ. ಹೊಸ ಅಪ್‌ಡೇಟ್‌ ಆಪ್ ಸ್ಟೋರ್‌ನಲ್ಲಿ ಲೈವ್ ಆಗಿದೆ. ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿಲಾಗಿದೆ. ಅಲ್ಲದೆ ಕಳೆದ ವರ್ಷ ನವೆಂಬರ್‌ನಲ್ಲಿ, ಪರಿಚಯಿಸಲಾಗಿದ್ದ ವಾಟ್ಸಾಪ್ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಐಒಎಸ್‌ಗೆ ಸೇರಿಸಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪ್

ಹೊಸ ಆವೃತ್ತಿ 2.21.30 ರಿಂದ ಆಪ್ ಸ್ಟೋರ್ ಅನ್ನು ಇತ್ತೀಚಿನ ಚೇಂಜ್‌ಲಾಗ್‌ನೊಂದಿಗೆ ನವೀಕರಿಸಲಾಗಿಲ್ಲ. ಆದರೂ ವಾಯ್ಸ್‌ ಮೆಸೇಜ್‌ಗಳಿಗಾಗಿ ಹೊಸ ಪ್ರೋಗ್ರೆಸ್ ಬಾರ್ ಅನಿಮೇಷನ್ ಇದೆ. ವಾಯ್ಸ್‌ ಮೆಸೇಜ್‌ ಪ್ರಗತಿಯ ಪಟ್ಟಿಯು ಎಂಡ್‌ ಆದ ನಂತರ ಅದು ಮತ್ತೆ ಸ್ಟಾರ್ಟಿಂಗ್‌ಗೆ ಜಿಗಿಯುತ್ತದೆ. ಈ ಅನಿಮೇಷನ್ ಐಒಎಸ್ 13 ಮತ್ತು ಅದಕ್ಕೂ ಮೀರಿ ಮಾತ್ರ ಲಭ್ಯವಿದೆ ಎಂದು ವರದಿ ಗಮನಸೆಳೆದಿದೆ. ಇನ್ನು ಈ ನವೀಕರಣವು ವಾಯ್ಸ್‌ ಮೆಸೇಜ್‌ಗಳಿಗಾಗಿ ರೀಡ್ ರಶೀದಿ ವ್ಯವಸ್ಥೆಯನ್ನು ಟ್ವಿಕ್ಸ್‌ ಮಾಡಲಿದೆ.

ವಾಟ್ಸಾಪ್

ಇದಲ್ಲದೆ ಐಒಎಸ್‌ನಲ್ಲಿನ ವಾಟ್ಸಾಪ್ ಬಳಕೆದಾರರು ರೀಡ್‌ ರೆಸಿಪ್ಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರೆ, ಬಳಕೆದಾರರು ಅದನ್ನು ಆಲಿಸಿದಾಗ ಧ್ವನಿ ಸಂದೇಶವನ್ನು ಕಳುಹಿಸಿದ ಸಂಪರ್ಕವನ್ನು ತಿಳಿಸಲಾಗುವುದಿಲ್ಲ. ವಾಟ್ಸಾಪ್ ಸೆಟ್ಟಿಂಗ್‌ಗಳು> ಖಾತೆ> ಗೌಪ್ಯತೆಗೆ ಹೋಗಿ ರೀಡ್‌ ರೆಸಿಪ್ಟ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಈ ಫೀಚರ್ಸ್‌ ಇನ್ನೂ ಆಂಡ್ರಾಯ್ಡ್‌ಗೆ ದಾರಿ ಮಾಡಿಲ್ಲ ಎಂದು ವರದಿ ಹೇಳಿದೆ. ಆದ್ದರಿಂದ ವಾಟ್ಸಾಪ್ ಇದನ್ನು ಆಂಡ್ರಾಯ್ಡ್‌ ಮಾದರಿಯಲ್ಲಿ ಪರಿಚಯಿಸಲಾಗುತ್ತದೆಯೆ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ವಾಟ್ಸಾಪ್‌

ಇನ್ನು ಇತ್ತೀಚಿಗಷ್ಟೇ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ನೂತನವಾಗಿ ಮ್ಯೂಟ್ ವಿಡಿಯೋ ಫೀಚರ್ ಅನಾವರಣ ಮಾಡಿದೆ. ಬಳಕೆದಾರರು ವಾಟ್ಸಾಪ್‌ನಲ್ಲಿ ವಿಡಿಯೊ ಕಳುಹಿಸುವಾಗ ವಿಡಿಯೊದ ಆಡಿಯೋವನ್ನು ಮ್ಯೂಟ್ ಮಾಡಲು ಈ ಫೀಚರ್ ನೆರವಾಗಲಿದೆ. ಈ ಆಯ್ಕೆಯು ಆಂಡ್ರಾಯ್ಡ್‌ ಲಭ್ಯ ಎಂದಿದೆ. ವಾಟ್ಸಾಪ್ ಬೀಟಾ ಆವೃತ್ತಿ v2.21.3.13 ಅಪ್‌ಡೇಟ್‌ನ ಮೂಲಕ ಈ ಫೀಚರ್ ಸ್ವೀಕರಿಸಿದ್ದಾರೆ ಎಂದು WABetaInfo ವೆಬ್‌ಸೈಟ್ ಉಲ್ಲೇಖಿಸಿದೆ.

Most Read Articles
Best Mobiles in India

English summary
WhatsApp Messenger has been updated on iOS and it brings some new features like a new animation for voice messages and disables receipts for them, depending on the read receipt setting.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X