Mother's Day ಪ್ರಯುಕ್ತ ಹೊಸ ಸ್ಟಿಕ್ಕರ್‌ ಪ್ಯಾಕ್‌ ಪರಿಚಯಿಸಿದ ವಾಟ್ಸಾಪ್‌!

|

ಜನ್ಮ ನೀಡಿದ ತಾಯಿಯನ್ನು ಪ್ರೀತಿಸಿಲು, ಆರಾಧಿಸಲು, ಒಂದು ದಿನದ ಅಗತ್ಯವಿಲ್ಲ. ಪ್ರತಿನಿತ್ಯವೂ ತಾಯಿಯನ್ನು ಪ್ರೀತಿಸಿದರೂ ತಾಯಿಯ ಋಣ ತೀರಿಸಲಾಗುವುದಿಲ್ಲ. ಆದರೂ ತಾಯಿಯ ಮಹತ್ವ ಸಾರುವ ದಿನವನ್ನಾಗಿ ಮೇ ತಿಂಗಳ ಎರಡನೇ ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ಆಚರಿಸಲಾಗುತ್ತೆ. ಸದ್ಯ ಈ ಭಾರಿ ನಾಳೆ ಅಂದರೆ ಮೇ.9 ರಂದು ವಿಶ್ವ ತಾಯಂದಿರ ದಿನಾಚರಣೆ ಇದೆ. ಈ ದಿನದ ಪ್ರಯುಕ್ತ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ವಿಶೇಷ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಬಿಡುಗಡೆ ಮಾಡಿದೆ.

ವಾಟ್ಸಾಪ್

ಹೌದು, ವಿಶ್ವ ತಾಯಂದಿರ ಪ್ರಯುಕ್ತ ವಾಟ್ಸಾಪ್ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಈ ವರ್ಷ, ತಾಯಿಯ ದಿನವನ್ನು ಮೇ 9 ರಂದು ಆಚರಿಸಲಾಗುತ್ತಿದ್ದು, "ಮಾಮಾ ಲವ್" ಎಂಬ ಹೊಸ ವಾಟ್ಸಾಪ್ ಸ್ಟಿಕ್ಕರ್ ಪ್ಯಾಕ್ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಜಾಗತಿಕವಾಗಿ ಲಭ್ಯವಿದೆ. ಮದರ್ಸ್ ಡೇ ಸ್ಟಿಕ್ಕರ್ ಸ್ಟೋರೇಜ್‌ ಒಟ್ಟು 11 ಸ್ಟಿಕ್ಕರ್‌ಗಳನ್ನು ಹೊಂದಿದೆ. ಇವು ಅನಿಮೇಟೆಡ್ ಸ್ಟಿಕ್ಕರ್‌ಗಳಾಗಿವೆ. ಹಾಗಾದ್ರೆ ಹೊಸ ಸ್ಟೀಕರ್‌ ಪ್ಯಾಕ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವಿಶ್ವ ತಾಯಂದಿರ ಪ್ರಯಕ್ತ ತಾಯಿಯ ಮಹತ್ವ ಸಾರುವ ''ಮಾಮಾ ಲವ್‌'' ಸ್ಟೀಕ್ಕರ್‌ ಪ್ಯಾಕ್‌ ಪರಿಚಯಿಸಿದೆ. ಈ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ತಾಯಿಯ ದಿನದಂದು ನಿಮ್ಮ ಸ್ಟಿಕ್ಕರ್ ಲೈಬ್ರರಿಗೆ ಸೇರಿಸಲಾಗುತ್ತದೆ. ಅಲ್ಲದೆ ಈ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಿದ ನಂತರ ಸ್ಟಿಕ್ಕರ್ ಅನ್ನು ಲಾಂಗ್‌ ಟೈಂ ಪ್ರೆಸ್‌ ಮಾಡುವ ಮೂಲಕ ‘ನಿಮ್ಮ ಆಯ್ಕೆಯನ್ನು ಸೇರಿಸಿ' ಆಯ್ಕೆ ಮಾಡುವ ಮೂಲಕ ನೀವು ಈ ಸ್ಟಿಕ್ಕರ್‌ಗಳನ್ನು ನಿಮ್ಮ ಆಯ್ಕೆಗಳಿಗೆ ಸೇರಿಸಬಹುದಾಗಿದೆ.

ವಾಟ್ಸಾಪ್‌ನಲ್ಲಿ ವಿಶ್ವ ತಾಯಂದಿರ ದಿನದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಿಶ್ವ ತಾಯಂದಿರ ದಿನದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ 1: ವಾಟ್ಸಾಪ್‌ನಲ್ಲಿ ಪರ್ಸನಲ್‌ ಅಥವಾ ಗ್ರೂಪ್‌ ಚಾಟ್ ತೆರೆಯಿರಿ

ಹಂತ 2: ನಿಮ್ಮ ಸ್ಕ್ರೀನ್‌ ಕೆಳಗಿನ ಎಡಭಾಗದಲ್ಲಿರುವ ಸ್ಮೈಲಿ ಎಮೋಜಿ ಕ್ಲಿಕ್ ಮಾಡಿ

ಹಂತ 3: ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಲಾದ ಸ್ಟಿಕ್ಕರ್ ಐಕಾನ್ ಕ್ಲಿಕ್ ಮಾಡಿ

ಹಂತ 4: ಪ್ಲಸ್ (+) ಚಿಹ್ನೆಗಾಗಿ ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ

ಹಂತ 5: ಇಲ್ಲಿ ನೀವು ಮಾಮಾ ಲವ್ಸ್‌ ಸ್ಟಿಕರ್‌ ನೋಡಬಹುದು. ಅಲ್ಲಿ ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ

ಡೌನ್‌ಲೋಡ್

ಹಂತ 6: ಡೌನ್‌ಲೋಡ್ ಪೂರ್ಣಗೊಂಡ ನಂತರ ಗ್ರೀನ್‌ ಟಿಕ್ ಗುರುತು ಕಾಣಿಸುತ್ತದೆ

ಹಂತ 7: ಚಾಟ್‌ಗೆ ಹಿಂತಿರುಗಿ ಮತ್ತು ನೀವು ಕಳುಹಿಸಲು ಬಯಸುವ ಸ್ಟಿಕ್ಕರ್‌ಗಾಗಿ ನೋಡಿ.

ಹಂತ 8: ಒಮ್ಮೆ ನೀವು ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿದರೆ, ಅದು ಸ್ವಯಂಚಾಲಿತವಾಗಿ ಕಳುಹಿಸುತ್ತದೆ.

Most Read Articles
Best Mobiles in India

English summary
WhatsApp has released a new sticker pack on the occasion of Mother’s Day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X