ವಾಟ್ಸಾಪ್‌ನಲ್ಲಿ ನೀವು ಶೇರ್‌ ಮಾಡಿದ ಎಲ್ಲಾ ಫೈಲ್‌ಗಳನ್ನು ಪರಿಶೀಲಿಸುವುದು ಹೇಗೆ?

|

ಜಾಗತಿಕವಾಗಿ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಟಾಪ್‌ ಮೇಸೆಜಿಂಗ್‌ ಆಪ್‌ ವಾಟ್ಸಾಪ್‌. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹಂತಹಂತವಾಗಿ ಇನ್ನು ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಅಲ್ಲದೆ ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿಯು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಅಳವಡಿಸಿದೆ. ಹಾಗೆಯೇ ವಾಟ್ಸಾಪ್‌ನಲ್ಲಿ ನೀವು ಹಂಚಿಕೊಂಡ ಎಲ್ಲ ಮಾಹಿತಿಯನ್ನು ಪರೀಶಿಲಿಸಲು ಸಹ ಅವಕಾಶ ನೀಡಿದೆ. ಆದರೆ ಬಹುತೇಕ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ತಾವು ಇನ್ನೊಬ್ಬರಿಗೆ ಕಳುಹಿಸಿದ ಎಲ್ಲಾ ಮಾದರಿಯ ಮೇಸೆಜ್‌, ಫೋಟೋ, ಫೈಲ್‌ ಎಲ್ಲವನ್ನೂ ಪರಿಶೀಲಿಸುವುದು ಹೇಗೆ ಅನ್ನೊ ಪ್ರಶ್ನೆ ಬರುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಬಳಸುವ ಪ್ರತಿಯೊಬ್ಬರೂ ಬಹಳಷ್ಟು ವಾಟ್ಸಾಪ್‌ ಗ್ರೂಪ್‌ಗಳನ್ನ ಹೊಂದಿರುತ್ತಾರೆ. ಇದರಿಂದಾಗಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಹಂಚಿಕೊಂಡ ಫೋಟೋಗಳು, ವೀಡಿಯೊಗಳು, ಲಿಂಕ್‌ಗಳು ಅಥವಾ ಫೈಲ್‌ಗಳ ಪ್ರಮಾಣವನ್ನು ಗಮನದಲ್ಲಿರಿಸಿಕೊಳ್ಳುವುದು ಕಷ್ಟ. ಆದರೆ ನಿಮ್ಮ ಗ್ಯಾಲರಿಯಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಾಗೂ ಡೌನ್‌ಲೋಡ್‌ಗಳಲ್ಲಿನ ಇತರ ಫೈಲ್‌ಗಳನ್ನು ಯಾರಿಂದ ಯಾವ ಸಂಖ್ಯೆಯ ವಾಟ್ಸಾಪ್‌ನಿಂದ ಬಂದಿದೆ ಅನ್ನೊದು ಪರಿಶೀಲಿಸಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಬಳಕೆದಾರರ ತಮ್ಮ ವಾಟ್ಸಾಪ್‌ ಮೂಲಕ ಇತರರ ಜೊತೆ ಹಂಚಿಕೊಂಡ ಎಲ್ಲವನ್ನೂ ಪರಿಶೀಲಿಸಲು ನಿಮಗೆ ಅವಕಾಶವನ್ನು ನೀಡಿದೆ. ಇನ್ನು ನೀವು ನಿಮ್ಮ ಫೋನ್‌ನಿಂದ ಫೈಲ್ ಅಥವಾ ಫೋಟೋಗಳನ್ನು ಡಿಲೀಟ್‌ ಮಾಡಿದ್ದರೆ, ನೀವು ಅದನ್ನು ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಕಂಡುಹಿಡಿಯಲಾಗುವುದಿಲ್ಲ. ಅಲ್ಲದೆ ನೀವು ಡಾಕ್ಯುಮೆಂಟ್‌ಗಳು ಮತ್ತು ಲಿಂಕ್‌ಗಳಿಗಾಗಿ ಸರ್ಚ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇದಕ್ಕಾಗಿ ನೀವು ಫೋಟೋವನ್ನು ಸ್ಕ್ರಾಲ್ ಮಾಡಿ ಮತ್ತು Manually ಕಂಡುಹಿಡಿಯಬೇಕಾಗುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಚಾಟ್‌ನಲ್ಲಿ ಮತ್ತು ನಿಮ್ಮ ಫೋನ್‌ನ ಗ್ಯಾಲರಿಯಲ್ಲಿ ನೀವು ಯಾವುದೇ ಫೋಟೋವನ್ನು ಸರ್ಚ್‌ ಮಾಡಲು Manually ಸರ್ಚ್‌ ಮಾಡುವ ಅಗತ್ಯವಿಲ್ಲ. ಹಾಗಾದ್ರೆ ನೀವು ಶೇರ್‌ ಮಾಡಿದ ಫೈಲ್‌ಗಳು ಅಥವಾ ಫೋಟೋಗಳನ್ನು ಹೇಗೆ ಪರಿಶೀಲಿಸುವುದಕ್ಕೆ ಈ ಕೆಳಗಿನ ಹಂತಗಳನ್ನ ಅನುಸರಿಸಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ಶೇರ್‌ ಮಾಡಿದ ಎಲ್ಲಾ ಫೈಲ್‌ಗಳನ್ನು ಪರಿಶೀಲಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಶೇರ್‌ ಮಾಡಿದ ಎಲ್ಲಾ ಫೈಲ್‌ಗಳನ್ನು ಪರಿಶೀಲಿಸುವುದು ಹೇಗೆ?

ಹಂತ 1: ನಿಮ್ಮ Android ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು individual's ಚಾಟ್‌ನಲ್ಲಿ ಟ್ಯಾಪ್ ಮಾಡಿ.

ಹಂತ 2: person's ಪ್ರೊಫೈಲ್‌ಗೆ ಭೇಟಿ ನೀಡಿ.

ಹಂತ 3: ನಂತರ ನೀವು ವ್ಯಕ್ತಿಯ ಹೆಸರಿನ ಕೆಳಗೆ ಬರೆಯಲಾದ "media, ಲಿಂಕ್‌ಗಳು ಮತ್ತು ಡಾಕ್ಸ್ ಕಾಣುತ್ತಿರಿ. ಇದರಲ್ಲಿ ನೀವು ಆ ವ್ಯಕ್ತಿಗೆ ಎಷ್ಟು ಫೈಲ್‌ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಿದ್ದೀರಿ ಎಂಬುದನ್ನು ಸಹ ತೋರಿಸುತ್ತದೆ. ನೀವು ಆ ಲೇಬಲ್ ಅನ್ನು ಟ್ಯಾಪ್‌ ಮಾಡಬೇಕಾಗುತ್ತದೆ ಹಾಗೂ ನೀವು ಶೇರ್‌ಮಾಡಿದ ಎಲ್ಲವನ್ನೂ ಈ ಅಪ್ಲಿಕೇಶನ್ ತೋರಿಸುತ್ತದೆ.

Most Read Articles
Best Mobiles in India

English summary
WhatsApp lets you check everything shared on the massaging app itself. Read on to know more about how to check shared links, files, or photos with an individual on the messaging app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X