ಸದ್ಯದಲ್ಲೇ ವಾಟ್ಸಾಪ್‌ ಪರಿಚಯಿಸಲಿರುವ ಹಲವು ಅನುಕೂಲಕರ ಫೀಚರ್ಸ್‌!

|

ವಿಶ್ವದ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ವಾಟ್ಸಾಪ್‌ ಕೂಡ ಒಂದಾಗಿದೆ. ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕಾಲಕ್ಕೆ ತಕ್ಕಂತೆ ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಅಪ್ಲಿಕೇಶನ್‌ಗಳಿಗೆ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಸೇರಿಸುತ್ತಿದೆ. ಮಿಸ್ಡ್‌ ಗ್ರೂಪ್‌ ಕಾಲ್‌, ಪೇಸ್ಟ್‌ ಮಲ್ಟಿಪಲ್‌ ಇಮೇಜಸ್‌ ನಂತಹ ಫೀಚರ್ಸ್‌ಗಳನ್ನು ಪರಿಚಯಿಸುವತ್ತ ಕಾರ್ಯನಿರ್ವಹಿಸುತ್ತಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಲು ಮುಂದಾಗಿದೆ. ಸದ್ಯ ಎಲ್ಲಾ ಐಒಎಸ್ ಬೀಟಾ ಬಳಕೆದಾರರು ಈಗ ಅನೇಕ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ ಪೇಸ್ಟ್‌ ಮಾಡುವ ಅವಕಾಶವನ್ನು ನೀಡಿದೆ. ಈ ಫೀಚರ್ಸ್‌ಗಳು ಪ್ರಸ್ತುತ ಕೆಲವು ವಾಟ್ಸಾಪ್ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿವೆ ಮತ್ತು ಕಂಪನಿಯು ಶೀಘ್ರದಲ್ಲೇ ಇವುಗಳನ್ನು ಸ್ಥಿರ ಆವೃತ್ತಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಮಿಸ್ಡ್‌ ಗ್ರೂಪ್‌ ಕಾಲ್‌

ಮಿಸ್ಡ್‌ ಗ್ರೂಪ್‌ ಕಾಲ್‌

ವಾಟ್ಸಾಪ್ ಶೀಘ್ರದಲ್ಲೇ ಮಿಸ್ಡ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಬಳಸುವುದಕ್ಕೆ ನಿಮಗೆ ಅವಕಾಶ ನೀಡುತ್ತದೆ. ಸರಳವಾಗಿ ಹೇಳುವುದಾದರೆ, ಯಾರಾದರೂ ನಿಮ್ಮನ್ನು ಗ್ರೂಪ್‌ ಕಾಲಗ್‌ ಸೇರಲು ಆಹ್ವಾನಿಸಿದರೆ, ಮತ್ತು ಆ ಸಮಯದಲ್ಲಿ ನಿಮಗೆ ಸೇರಲು ಸಾಧ್ಯವಾಗದಿದ್ದರೆ, ಕರೆ ಮುಗಿಯದಿದ್ದರೆ ಮುಂದಿನ ಬಾರಿ ನೀವು ವಾಟ್ಸಾಪ್ ತೆರೆದಾಗ ಸೇರಲು ನಿಮಗೆ ಸಾಧ್ಯವಾಗುತ್ತದೆ. ಅಕ್ಟೋಬರ್ 2020 ರಲ್ಲಿ ಇದೇ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ನಲ್ಲಿ ಗುರುತಿಸಲಾಗಿದೆ. ಈಗ, ವಾಟ್ಸಾಪ್ ಇದನ್ನು ಐಒಎಸ್ ಬಳಕೆದಾರರಿಗಾಗಿ ಪರೀಕ್ಷಿಸುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಪರೀಕ್ಷಕರು ಫೀಚರ್ಸ್‌ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಪೇಸ್ಟ್‌ ಮಲ್ಟಿಪಲ್‌ ಇಮೇಜಸ್‌

ಪೇಸ್ಟ್‌ ಮಲ್ಟಿಪಲ್‌ ಇಮೇಜಸ್‌

ಈ ಫೀಚರ್ಸ್‌ ಐಒಎಸ್ 2.21.10.23 ವಾಟ್ಸಾಪ್ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಈ ಹೊಸ ಆಪ್ಡೇಟ್‌ ನವೀಕರಣವು ಬಳಕೆದಾರರಿಗೆ ಅನೇಕ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ಪೇಸ್ಟ್‌ ಮಾಡಲು ಅನುಮತಿಸುತ್ತದೆ. ನೀವು ಈ ಫೀಚರ್ಸ್‌ ಅನ್ನು ಸ್ವೀಕರಿಸಿದ್ದೀರಾ ಎಂದು ಪರಿಶೀಲಿಸಲು, ಐಒಎಸ್ ಬೀಟಾ ಬಳಕೆದಾರರು ಫೋಟೋಗಳ ಅಪ್ಲಿಕೇಶನ್‌ನಿಂದ ಅನೇಕ ಚಿತ್ರಗಳನ್ನು ಆಯ್ಕೆ ಮಾಡಿ, "ರಫ್ತು" ಮತ್ತು "ನಕಲಿಸಿ" ಟ್ಯಾಪ್ ಮಾಡಿ. ನೀವು ವಾಟ್ಸಾಪ್ ಅನ್ನು ತೆರೆದರೆ ಮತ್ತು ಚಾಟ್ ಬಾರ್‌ನಲ್ಲಿ ವಿಷಯವನ್ನು ಅಂಟಿಸಿದರೆ, "ಎಲ್ಲಾ ಚಿತ್ರಗಳನ್ನು ವಾಟ್ಸಾಪ್‌ನಿಂದ ಸೆರೆಹಿಡಿಯಲಾಗುತ್ತದೆ, ಕಳುಹಿಸಲು ಸಿದ್ಧವಾಗಿದೆ" ಎಂದು ಉಲ್ಲೇಖಿಸಿದ ಮೂಲ ಹೇಳುತ್ತದೆ.

ವಾಟ್ಸಾಪ್ ವೆಬ್ ಕಾಲ್‌

ವಾಟ್ಸಾಪ್ ವೆಬ್ ಕಾಲ್‌

ಆಯ್ದ ಬೀಟಾ ಬಳಕೆದಾರರಿಗೆ ವಾಟ್ಸಾಪ್ ವೆಬ್ ಕಾಲ್‌ ಫೀಚರ್ಸ್‌ ಈಗ ಲಭ್ಯವಿದೆ. ಇದು ಶೀಘ್ರದಲ್ಲೇ ಸಾರ್ವಜನಿಕರಿಗೂ ಲಭ್ಯವಾಗಬಹುದು. ಈ ಹೊಸ ಫೀಚರ್ಸ್‌ ವಾಟ್ಸಾಪ್‌ ಡೆಸ್ಕ್‌ಟಾಪ್ / ವೆಬ್ ಆವೃತ್ತಿಯಲ್ಲಿ ಕಾರ್ಯರೂಪದಲ್ಲಿದೆ. ಕೆಲವೇ ದಿನಗಳ ವಾಯ್ಸ್‌ ಮತ್ತು ವೀಡಿಯೊ ಕಾಲ್‌ ಫೀಚರ್ಸ್‌ ಅನ್ನು ತೋರಿಸುವ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಸಹ ವಾಟ್ಸಾಪ್‌ ಹಂಚಿಕೊಂಡಿದೆ. ಇನ್ನು ಈ ಕರೆ ಆವೃತ್ತಿಯು ಮೊಬೈಲ್ ಆವೃತ್ತಿಯಂತೆಯೇ ಚಾಟ್ ಹೆಡರ್‌ನಲ್ಲಿದೆ. ನೀವು ವಾಟ್ಸಾಪ್ ವೆಬ್ / ಡೆಸ್ಕ್‌ಟಾಪ್‌ನಲ್ಲಿ ಕರೆ ಸ್ವೀಕರಿಸಿದಾಗಲೆಲ್ಲಾ, ಪ್ರತ್ಯೇಕ ಪೆಟ್ಟಿಗೆಯೊಂದು ಪಾಪ್ ಅಪ್ ಆಗುತ್ತದೆ, ಅದು ಒಳಬರುವ ಕರೆಯನ್ನು ಸ್ವೀಕರಿಸಿ, ನಿರಾಕರಿಸಿ ಅಥವಾ ನಿರ್ಲಕ್ಷಿಸಿ ಸೇರಿದಂತೆ ಮೂರು ಆಯ್ಕೆಗಳನ್ನು ನೀಡುತ್ತದೆ.

Best Mobiles in India

English summary
All iOS beta users will also now be able to paste multiple images and videos in WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X