ಶೀಘ್ರದಲ್ಲೇ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿ ಸೇರಲಿದೆ ಹೊಸ ಸೆಕ್ಯುರಿಟಿ ಫೀಚರ್ಸ್‌!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಅಲ್ಲದೆ ಕಾಲಕಾಲಕ್ಕೆ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು, ಇದೀಗ ಮತ್ತೊಂದು ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ವಾಟ್ಸಾಪ್‌ ಪ್ಲಾಟ್‌ಫಾರ್ಮ್ ತನ್ನ ಡೆಸ್ಕ್‌ಟಾಪ್ ಮತ್ತು ವೆಬ್ ಆವೃತ್ತಿಯಲ್ಲಿ ಬಹುಮುಖ್ಯವಾದ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ವೆಬ್‌ ಮತ್ತು ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಹೊಸ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಕೆಲಸ ಮತ್ತು ವೈಯಕ್ತಿಕ ಬಳಕೆ ಎರಡಕ್ಕೂ ಕೂಡ ವಾಟ್ಸಾಪ್‌ ಅನ್ನು ಬಳಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸದ್ಯ ವಾಟ್ಸಾಪ್‌ ಎರಡು-ಹಂತದ ಪರಿಶೀಲನೆಯನ್ನು ವೆಬ್‌ ಮತ್ತು ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಸೇರಿಸಲು ಮುಂದಾಗಿದೆ. ಹಾಗಾದ್ರೆ ವಾಟ್ಸಾಪ್‌ ಸೇರಲಿರುವ ಹೊಸ ಸೆಕ್ಯುರ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಮತ್ತು ವೆಬ್ ಆವೃತ್ತಿಯಲ್ಲಿ ಟು-ಸ್ಟೆಪ್‌ ವೆರಿಫಿಕೇಶನ್‌ ಫೀಚರ್ಸ್‌ ಪರಿಚಯಿಸಲಿದೆ. ಇದರಿಂದ ನೀವು ಟು-ಸ್ಟೆಪ್‌ ವೆರಿಫಿಕೇಶನ್‌ ಸೆಟ್‌ ಮಾಡಲು ಸಾಧ್ಯವಾಗಲಿದೆ. ಈ ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡಲು ವಾಟ್ಸಾಪ್‌ ಎರಡು ಆಯ್ಕೆಗಳನ್ನು ನೀಡಲಿದೆ. ಅದರಂತೆ ವಾಟ್ಸಾಪ್‌ ನಿಮಗೆ PIN ಸೆಟ್‌ ಮಾಡುವುದು ಅಥವಾ ಇಮೇಲ್ ವಿಳಾಸವನ್ನು ಸೇರಿಸಲು ಅನುಮತಿಸುತ್ತದೆ. ಇದರಿಂದ ನೀವು ನಿಮ್ಮ ವಾಟ್ಸಾಪ್‌ ಖಾತೆಯ ನೋಂದಣಿ ಮಾಡುವಾಗ 6 ಅಂಕಿಯ ಕೋಡ್ ಅನ್ನು ನಮೂದಿಸಿದ ನಂತರ, ಖಾತೆಗೆ ಲಾಗ್ ಇನ್ ಮಾಡಲು ವೈಯಕ್ತಿಕ ಪಿನ್ ನಮೂದಿಸಬೇಕಾಗುತ್ತದೆ. ಸದ್ಯ ಈ ಫೀಚರ್ಸ್‌ ಪಬ್ಲಿಕ್‌ ಬೀಟಾ ಪರೀಕ್ಷಕರಿಗೆ ಇದು ಯಾವಾಗ ಲಭ್ಯವಿರುತ್ತದೆ ಎಂಬುದು ತಿಳಿದಿಲ್ಲ. ಏಕೆಂದರೆ ಈ ಫೀಚರ್ಸ್‌ ಪ್ರಸ್ತುತ ಆರಂಭಿಕ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಈಗಾಗಲೇ ಮೊಬೈಲ್ ಬಳಕೆದಾರರಿಗೆ ಲಭ್ಯವಿದೆ. ಮೊಬೈಲ್ ಬಳಕೆದಾರರು ಫಿಂಗರ್‌ಪ್ರಿಂಟ್ ವೆರಿಫಿಕೇಶನ್‌ ಮತ್ತು ಟು ಸ್ಟೆಪ್‌ ವೆರಿಫಿಕೇಶನ್‌ ಅನ್ನು ಆಕ್ಟಿವ್‌ ಮಾಡಬಹುದು. ಇದರಿಂದ ನಿಮ್ಮ ವಾಟ್ಸಾಪ್‌ ಚಾಟ್‌ಗಳನ್ನು ಬೇರೆಯವರು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಬೇರೆಯವರು ನಿಮ್ಮ ವಾಟ್ಸಾಪ್‌ ಚಾಟ್‌ ತೆರೆಯಲು ಪ್ರಯತ್ನಿಸಿದರೆ ಸೆಕ್ಯುರಿಟಿ ಪಿನ್ ಅಥವಾ ಫಿಂಗರ್‌ಪ್ರಿಂಟ್ ಅನ್ನು ಸ್ಕ್ಯಾನ್ ಮಾಡಲು ಕೇಳುತ್ತದೆ. ಇದರಿಂದ ನಿಮ್ಮನ್ನು ಬಿಟ್ಟು ಬೇರೆಯವರು ವಾಟ್ಸಾಪ್‌ ಚಾಟ್‌ ತೆರೆಯಲು ಸಾದ್ಯವಾಗುವುದಿಲ್ಲ.

ವಾಟ್ಸಾಪ್‌

ವಾಟ್ಸಾಪ್‌ ಅಪ್ಲಿಕೇಶನ್‌ನ ಸೆಕ್ಯುರಿಟಿ ವಿಭಾಗದಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ಸ್‌ ಕಾಣಲಿದೆ. ಇನ್ನು ಎರಡು-ಹಂತದ ಪರಿಶೀಲನೆಗಾಗಿ, ಸೆಟ್ಟಿಂಗ್ಸ್‌ > ಅಕೌಂಟ್‌ಗೆ ಹೋಗಬೇಕಾಗುತ್ತದೆ. ಒಮ್ಮೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸಿದರೆ. ಖಾತೆಗೆ ಲಿಂಕ್ ಮಾಡುವ ಮೊದಲು ನೀವು ಅಪ್ಲಿಕೇಶನ್ ಅನ್ನು ಅನ್‌ಲಾಕ್ ಮಾಡಬೇಕಾಗುತ್ತದೆ. ಇದಲ್ಲದೆ ವಾಟ್ಸಾಪ್‌ ಅಪ್ಲಿಕೇಶನ್‌ ಇನ್ನು ಅನೇಕ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅದರಲ್ಲಿ ವಾಟ್ಸಾಪ್‌ ಲಾಸ್ಟ್‌ ಸೀನ್‌ ಲಿಮಿಟ್‌ ಮಾಡುವ ಫೀಚರ್ಸ್‌ ಕೂಡ ಸೇರಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಕ್ರಮದಿಂದ ನೀವು ಚಾಟ್‌ ಮಾಡದ ವ್ಯಕ್ತಿ ಹಾಗೂ ನೀವು ಇಬ್ಬರೂ ಕೂಡ ಆನ್‌ಲೈನ್‌ನಲ್ಲಿ ಆಕ್ಟಿವ್‌ ಆಗಿದ್ದರೂ ನಿಮಗೆ ಲಾಸ್ಟ್‌ ಸೀನ್‌ ಟೈಂ ಕಾಣುವುದಿಲ್ಲ. ಕೆಲವು ಚಾಟ್ ಹಿಸ್ಟರಿ ಹೊರತು ಬಳಕೆದಾರರು ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಸ್ಟೇಟಸ್ ಕೂಡ ಕಾಣಿಸುವುದಿಲ್ಲ. ಅಂದರೆ ವಾಟ್ಸಾಪ್‌ ಜಾರಿಗೊಳಿಸಿರುವ ಹೊಸ ಮಿತಿಯು ಬಳಕೆದಾರರೊಂದಿಗೆ ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮಾಡಿದೆ. ಇದರಿಂದ ನೀವು ಸಂವಹನ ನಡೆಸುತ್ತಿರುವ ಸ್ನೇಹಿತರು, ಕುಟುಂಬ ಮತ್ತು ವ್ಯಾಪಾರಗಳೊಂದಿಗೆ ಚಾಟ್‌ಗಳಲ್ಲಿ ಯಾವುದೇ ಅಡಚಣೆಯನ್ನು ಉಂಟುಮಾಡುವುದಿಲ್ಲ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದು ನಿಮ್ಮ ಮತ್ತು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ನಿಮಗೆ ತಿಳಿದಿರುವ ಅಥವಾ ಹಿಂದೆ ಸಂದೇಶ ಕಳುಹಿಸಿದ ವ್ಯವಹಾರಗಳ ನಡುವೆ ಏನನ್ನೂ ಬದಲಾಯಿಸುವುದಿಲ್ಲ ಎಂದು ಹೇಳಲಾಗಿದೆ.

Most Read Articles
Best Mobiles in India

English summary
WhatsApp is reportedly planning to add two-step verification, purely to offer more security.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X