ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿವೆ ಈ ಐದು ಅಚ್ಚರಿಯ ಫೀಚರ್ಸ್‌ಗಳು!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಸಾಕಷ್ಟು ಅನುಕೂಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈಗಾಗಲೇ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಸಾಕಷ್ಟು ಹೊಸ ಮಾದರಿಯ ಫೀಚರ್ಸಗಳ ಮೇಲೆ ಕೆಲಸ ನಡೆಯುತ್ತಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಪಬ್ಲಿಕ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿವೆ. ಕೆಲವು ವಾಟ್ಸಾಪ್‌ನ ಬೀಟಾ ಪ್ರೋಗ್ರಾಂಗೆ ಸೈನ್‌ ಆಪ್‌ ಮಾಡಿದ ಬಳಕೆದಾರರಿಗೆ ಲಭ್ಯವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಶೀಘ್ರದಲ್ಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲಿದೆ. ಇನ್ನು ಈ ಹೊಸ ಫೀಚರ್ಸ್‌ಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲಿದೆ ಎನ್ನಲಾಗಿದೆ. ಇನ್ನು ಶೀಘ್ರದಲ್ಲೇ ಬರಲಿರುವ ಹೊಸ ಫೀಚರ್ಸ್‌ಗಳಲ್ಲಿ ನ್ಯೂ ವಾಯ್ಸ್‌ ನೋಟ ಫೀಚರ್ಸ್‌, ರಿ ಡಿಸೈನ್‌ ಚಾಟ್‌ ಬಬಲ್ಸ್‌, ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್ಸ್‌ನಂತಹ ಫೀಚರ್ಸ್‌ಗಳು ಲಭ್ಯವಿದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ವಾಟ್ಸಾಪ್‌ ಪರಿಚಯಿಸಬಹುದಾದ ವಿಶೇಷ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನ್ಯೂ ನೋಟ್ಸ್ ಫೀಚರ್

ನ್ಯೂ ನೋಟ್ಸ್ ಫೀಚರ್

ವಾಟ್ಸಾಪ್‌ ಶೀಘ್ರದಲ್ಲೇ ಪರಿಚಯಿಸಲಿರುವ ಫೀಚರ್ಸ್‌ಗಳಲ್ಲಿ ನ್ಯೂ ನೋಟ್ಸ್‌ ಫೀಚರ್‌ ಕೂಡ ಒಂದಾಗಿದೆ. ಇದಕ್ಕಾಗಿ "ಜಾಗತಿಕ ವಾಯ್ಸ್‌ ಮೆಸೇಜ್‌ ಪ್ಲೇಯರ್" ನಲ್ಲಿ ಕೆಲಸ ಮಾಡುತ್ತಿದೆ. ಇದು ಬಳಕೆದಾರರಿಗೆ ಚಾಟ್ ಬಿಟ್ಟ ನಂತರವೂ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬಳಕೆದಾರರು ವಾಯ್ಸ್‌ ಮೆಸೇಜ್‌ ಅನ್ನು ಪ್ಲೇ ಮಾಡಿದ ನಂತರ, ಆ ಚಾಟ್ ಅನ್ನು ತೊರೆದ ನಂತರವೂ ಮೇನ್‌ ಅಪ್ಲಿಕೇಶನ್‌ನ ಮೇಲ್ಭಾಗಕ್ಕೆ ವಾಯ್ಸ್‌ ಮೆಸೇಜ್‌ಗಳನ್ನು ಪಿನ್ ಮಾಡುತ್ತದೆ. ಅಲ್ಲದೆ ನೀವು ವಾಯ್ಸ್‌ ಮೆಸೇಜ್‌ ಅನ್ನು ಕೇಳುವಾಗಲೂ ಇತರ ಕಂಟ್ಯಾಕ್ಟ್‌ಗಳಿಗೆ ಮೆಸೇಜ್‌ ಕಳುಹಿಸುವುದಕ್ಕೆ ಕೂಡ ಸಾಧ್ಯವಾಗಲಿದೆ.

ರಿ ಡಿಸೈನ್‌ ಚಾಟ್ ಬಬಲ್ಸ್‌

ರಿ ಡಿಸೈನ್‌ ಚಾಟ್ ಬಬಲ್ಸ್‌

ವಾಟ್ಸಾಪ್ ಇತ್ತೀಚೆಗೆ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬೀಟಾ ಬಳಕೆದಾರರಿಗಾಗಿ ಆವೃತ್ತಿ 2.21.200.11 ಅಪ್‌ಡೇಟ್ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಬಳಕೆದಾರರು ರಿ ಡಿಸೈನ್‌ ಮಾಡಲಾದ ಬಬಲ್ಸ್‌ ಅನ್ನು ವೀಕ್ಷಿಸಲು ಅನುಮತಿಸುತ್ತದೆ. ಹಳೆಯ ಚಾಟ್ ಬಬಲ್‌ಗೆ ಹೋಲಿಸಿದರೆ ಬೀಟಾ ಬಳಕೆದಾರರು ಈಗ ದುಂಡಾದ, ದೊಡ್ಡದಾದ ಮತ್ತು ಹೆಚ್ಚು ವರ್ಣರಂಜಿತ ಚಾಟ್ ಬಬಲ್‌ಗಳನ್ನು ಕಾಣಬಹುದಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ.

ಕಸ್ಟಮ್ ಪ್ರೈವೆಸಿ ಸೆಟ್ಟಿಂಗ್

ಕಸ್ಟಮ್ ಪ್ರೈವೆಸಿ ಸೆಟ್ಟಿಂಗ್

ವಾಟ್ಸಾಪ್‌ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಹೊಸ ಕಸ್ಟಮ್ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಯನ್ನು ಪರಿಚಯಿಸುತ್ತಿದೆ. ಸದ್ಯ ವಾಟ್ಸಾಪ್‌ ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್‌ಗಳಲ್ಲಿ ಹೊಸದಾಗಿ "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಸೇರಿಸುತ್ತಿದೆ. ಇದು ನಿರ್ದಿಷ್ಟ ಸಂಪರ್ಕಗಳಿಗಾಗಿ ಬಳಕೆದಾರರನ್ನು ಲಾಸ್ಟ್‌ ಸೀನ್‌ ನೋಡಲು ಅನುಮತಿ ನೀಡಲಿದೆ. ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಈಗಾಗಲೇ ಈ ಫೀಚರ್ಸ್‌ ಅನ್ನು ಪರೀಕ್ಷಿಸಲು ಆರಂಭಿಸಿದೆ.

ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌

ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌

ವಾಟ್ಸಾಪ್ ಅಭಿವೃದ್ದಿ ಪಡಿಸುತ್ತಿರುವ ಹೊಸ ಫೀಚರ್ಸ್‌ಗಳಲ್ಲಿ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಕೂಡ ಸೇರಿದೆ. ಇದು ನಿಮಗೆ ಎಮೋಜಿಗಳೊಂದಿಗೆ ಮೆಸೇಜ್‌ ರಿಯಾಕ್ಷನ್‌ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಈಗಾಗಲೇ ಇದೇ ರೀತಿಯ ಫಿಚರ್ಸ್‌ ಅನ್ನು ನೀವು ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನ ಡೈರೆಕ್ಟ್‌ ಮೆಸೇಜ್‌ನಲ್ಲಿ ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಟಚ್‌ ಮಾಡಲು ಮತ್ತು ರೆಸ್ಪಾನ್ಸ್‌ ಮಾಡಲು ಬಯಸುವ ಸಂದೇಶವನ್ನು ಹಿಡಿದಿಟ್ಟುಕೊಂಡು ಸೂಕ್ತ ಎಮೋಜಿಗೆ ಎಳೆಯಲು ಅನುಮತಿಸುತ್ತದೆ.

ಹೊಸ ಬ್ಯಾಕಪ್ ಫೀಚರ್ಸ್‌

ಹೊಸ ಬ್ಯಾಕಪ್ ಫೀಚರ್ಸ್‌

ವಾಟ್ಸಾಪ್‌ ತನ್ನ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಗಾತ್ರವನ್ನು ಮ್ಯಾನೇಜ್‌ ಮಾಡುವುದಕ್ಕೆ ಸಹಾಯ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ತಮ್ಮ ಕ್ಲೌಡ್ ಬ್ಯಾಕಪ್‌ನಿಂದ ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳಂತಹ ನಿರ್ದಿಷ್ಟ ವಿಷಯವನ್ನು ಹೊರಗಿಡಲು ಅವಕಾಶ ನೀಡುವ ಹೊಸ ಫೀಚರ್ಸ್‌ನಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ವಾಟ್ಸಾಪ್‌ನ ನೀಡಿರುವ ಮಾಹಿತಿ ಪ್ರಕಾರ ಬಳಕೆದಾರರು ತಮ್ಮ ಬ್ಯಾಕಪ್ ಗಾತ್ರವನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವ ಮೊದಲು ನಿರ್ವಹಿಸಲು ಅನುಮತಿಸಲು ಮೀಸಲಾದ 'ಬ್ಯಾಕಪ್ ಗಾತ್ರವನ್ನು ನಿರ್ವಹಿಸಿ' ವಿಭಾಗದಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ.ಸದ್ಯದಲ್ಲೇ ಇದು ವಾಟ್ಸಾಪ್‌ ಸೇರಲಿದೆ.

Most Read Articles
Best Mobiles in India

English summary
WhatsApp is working on various new features, that we may get to experience soon, once the company decides to roll them out for evryone.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X