Just In
Don't Miss
- News
ಅಂಕೋಲ; ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Lifestyle
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
'ವಾಟ್ಸಪ್ ಪೇ' ಲಾಂಚ್ ಕನ್ಫರ್ಮ್!..ಶುರುವಾಗಿದೆ ಪೇಟಿಎಮ್ಗೆ ನಡುಕ!
ಸದ್ಯ ಭಾರತದಲ್ಲಿ ಹಲವಾರು UPI ಆಧಾರಿತ ಪೇಮೆಂಟ್ ಆಪ್ಗಳು ಬಳಕೆಯಲ್ಲಿದ್ದು, ಆ ಲಿಸ್ಟಿಗೆ ಈಗ ವಾಟ್ಸಪ್ ಪೇ ಸೇರಿಕೊಳ್ಳಲಿದೆ. ಹೌದು, ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ UPI ಆಧಾರಿತ ಪೇಮೆಂಟ್ ಸೇವೆಯನ್ನು ಆರಂಭಿಸಲು ಕಳೆದ ವರ್ಷದಿಂದ ಸಿದ್ಧತೆ ನಡೆಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಟೆಸ್ಟಿಂಗ್ ಹಂತದಲ್ಲಿದೆ. ವಾಣಿಜ್ಯ ರೂಪದಲ್ಲಿ ಬಳಕೆದಾರರಿಗೆ ಅತೀ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವಾಟ್ಸಪ್ನ ಗ್ಲೋಬಲ್ ಹೆಡ್ ವಿಲ್ ಕ್ಯಾಥ್ಕಾರ್ಟ್ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಸುಮಾರು ಒಂದು ಮಿಲಿಯನ್ ಬಳಕೆದಾರಿಗೆ ಪ್ರಾಯೋಗಿಕವಾಗಿ ಟೆಸ್ಟಿಂಗ್ ಮಾಡಲಾಗಿದ್ದು, ಭಾರತ ಸರ್ಕಾರದ ಕೇಲವು ನಿಯಂತ್ರಕ ಮಾನದಂಡಗಳನ್ನು ಪಾಲಿಸುವಲ್ಲಿ ತಡವಾಗಿದೆ. ಆದ್ರೆ ಇದೀಗ ಕಂಪನಿಯು ಎಲ್ಲ ನಿಯಂತ್ರಕ ಮಾನದಂಡಗಳನ್ನು ಪೂರೈಸುವ ಹಂತದಲ್ಲಿದ್ದು, ಹಾಗೆಯೇ ಪ್ರಾಯೋಗಿಕ ಹಂತಗಳನ್ನು ಮುಗಿಸಿದೆ ಹೀಗಾಗಿ ಮುಂದಿನ ವರ್ಷದ ಆರಂಭದಲ್ಲಿ ವಾಟ್ಸಪ್ ಪೇ ಭಾರತದ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗಿದೆ.
ವಾಟ್ಸಪ್ ಪೇ ಗ್ರಾಹಕರ ಬಳಕೆಗೆ ಲಭ್ಯವಾದ ನಂತರ ಬಹುಬೇಗನೆ ಜನಪ್ರಿಯತೆಗಳಿಸುವ ಲಕ್ಷಣಗಳಿವೆ. ಹಾಗೆಯೇ 'ವಾಟ್ಸಪ್ ಪೇ'ಯಿಂದಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪೇಟಿಎಮ್, ಫೋನ್ ಪೇ ಮತ್ತು ಗೂಗಲ್ ಪೇ ಗಳ ಬಳಕೆ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಹಾಗಾದರೇ 'ವಾಟ್ಸಪ್ ಪೇ' ಸೇವೆಯ ಇನ್ನಿತರೆ ವಿಶೇಷತೆಗಳೆನು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.
ಓದಿರಿ : ಮಿಸ್ ಕಾಲ್ ಮಾಡಿ ಉಚಿತ 'ಟಾಟಾಸ್ಕೈ ಫೈರ್ ಟಿವಿ ಸ್ಟಿಕ್' ಸೇವೆ ಪಡೆಯಿರಿ!

UPI ಪೇಮೆಂಟ್ ಬೇಡಿಕೆ
ಸದ್ಯ ಭಾರತದಲ್ಲಿ ಕ್ಯಾಶ್ಲೆಸ್ ವ್ಯವಹಾರ ಬಳಕೆ ಕ್ರಮೇಣ ವೃದ್ಧಿಯಾಗುತ್ತಿದ್ದು, ಹೀಗಾಗಿ ಇ-ಪೇಮೆಂಟ್ ಆಪ್ಸ್ಗಳ ಬೇಡಿಕೆ ಸಹ ದ್ವಿಗುಣಗೊಳ್ಳುತ್ತಲೇ ಸಾಗಿದೆ. ಸಂಶೋಧನೆಯೊಂದರ ಪ್ರಕಾರ 2023ರಲ್ಲಿ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆಯ ಪ್ರಮಾಣ 1 ಟ್ರಿಲಿಯನ್ ಗಡಿ ದಾಟಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಸಹ ನೂತನವಾಗಿ 'ವಾಟ್ಸಪ್ ಪೇ' ಅನ್ನು ಆರಂಭಿಸಲು ಮುಂದಾಗಿದೆ.
ಓದಿರಿ : ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

ಆಪ್ಗಳ ಪೈಪೋಟಿ
ಭಾರತದಲ್ಲಿ ಈಗಾಗಲೇ ಹಲವು ಡಿಜಿಟಲ್ UPI ಪೇಮೆಂಟ್ ಆಪ್ಸ್ಗಳು ಲಗ್ಗೆ ಇಟ್ಟಿದ್ದು, ಎಲ್ಲ ಆಪ್ಗಳು ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್ಗಳನ್ನು ನೀಡಿವೆ. ಅವುಗಳಲ್ಲಿ ಗೂಗಲ್ ಪೇ, ಫೋನ್ಪೇ, ಪೇಟಿಎಮ್, ಅಮೆಜಾನ್ ಪೇ, ಭಾರತ್ ಪೇ, ಆಪ್ಗಳು ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಇದೀಗ 'ವಾಟ್ಸಪ್ ಪೇ' ಇವುಗಳೊಂದಿಗೆ ನೇರ ಪೈಪೋಟಿ ನಡೆಸಲಿದೆ.
ಓದಿರಿ : 5180mAh ಬ್ಯಾಟರಿ ಶಕ್ತಿಯ 'ಲೆನೊವೊ ಟ್ಯಾಬ್ ವಿ7' ಬಿಡುಗಡೆ!

ಡಿಜಿಟಲ್ ಪೇಮೆಂಟ್ಗೆ ಉತ್ತೇಜನ
ವಾಟ್ಸಪ್ ಪೇ ಸೇವೆಯನ್ನು ಹೆಚ್ಚಾಗಿ 3ಲಕ್ಷದಿಂದ ಸುಮಾರು 75ಕೋಟಿ ವಾರ್ಷಿಕ ವಹಿವಾಟು ನಡೆಸುವ ಸಣ್ಣ, ಮಧ್ಯಮ ಮತ್ತು ಎಂಟರ್ಪ್ರೈಸ್ ಬ್ಯುಸಿನೆಸ್ ಮಾಲೀಕರು ಬಳಸಲು ಮುಂದಾಗುತ್ತಾರೆ. ಜೊತೆಗೆ ವಾಟ್ಸಪ್ ಸಂಸ್ಥೆಯು ಉದ್ಯಮಗಳಿಗೆ ವಾಟ್ಸಪ್ ಪೇ ಬಳಕೆ ಮಾಡಲು ಉತ್ತೇಜನ ನೀಡಲು ಹೆಚ್ಚಿನ ಸವಲತ್ತುಗಳನ್ನು ಮಾಡಿಕೊಡಲಿದೆ ಎನ್ನಲಾಗಿದೆ.

'ವಾಟ್ಸಪ್ ಪೇ' ಜನಪ್ರಿಯತೆ
ಪ್ರಸ್ತುತ ಸ್ಮಾರ್ಟ್ಫೋನ್ ಮೂಲಕವೇ ಹಣ ಪಾವತಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಹೀಗಾಗಿ ವಾಟ್ಸಪ್ UPI ಆಧಾರಿತ ಪೇಮೆಂಟ್ ಸೇವೆ ಆರಂಭಿಸಲು ಯೋಜಿಸಿದೆ. ಅಷ್ಟಕ್ಕೂ ವಾಟ್ಸಪ್ ಪ್ರತಿದಿನ ಸುಮಾರು 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ 'ವಾಟ್ಸಪ್ ಪೇ' ಬಹುಬೇಗನೆ ಜನಪ್ರಿಯವಾಗಲಿದೆ ಎನ್ನುವ ವಿಶ್ವಾಸವನ್ನು ವಾಟ್ಸಪ್ ಹೊಂದಿದೆ.
ಓದಿರಿ : ಬೆಲೆ ಇಳಿಕೆ!..'ಒಪ್ಪೊ A5s' ಸ್ಮಾರ್ಟ್ಫೋನ್ ಖರೀದಿಗೆ ಸಕಾಲ!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790