ಶೀಘ್ರದಲ್ಲೇ 'ವಾಟ್ಸ್ಆಪ್' ಸೇರಿಕೊಳ್ಳಲಿವೆ ಈ ವಿಶೇಷ ಫೀಚರ್ಸ್!

|

ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ಆಪ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ವಿಶೇಷ ಫೀಚರ್ಸ್ ಸಿಗುತ್ತಿವೆ. ಮಲ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಹಕರಿಸಲು ಅನುಕೂಲವಾಗುವಂತೆ ವಾಟ್ಸ್‌ಆಪ್‌ನಲ್ಲಿ ಬದಲಾವಣೆ ತರಲು ಕಂಪನಿ ಮುಂದಾಗಿದ್ದು, ಕೋಟ್ಯಂತರ ಮಂದಿಯ ಬಳಕೆಯಲ್ಲಿರುವ ಈ ಆಪ್‌ ಅನ್ನು ಮತ್ತಷ್ಟು ಸರಳಗೊಳಿಸುವ ಪ್ರಕ್ರಿಯೆಯಲ್ಲಿ ಕಂಪನಿ ಸಕ್ರಿಯವಾಗಿದೆ. ಇತ್ತೀಚೆಗಷ್ಟೇ ಹಲವಾರು ಫೀಚರ್‌ಗಳನ್ನು ಬಿಡುಗಡೆ ಮಾಡಿರುವ ವಾಟ್ಸ್ಆಪ್ ಮತ್ತೂ ಕೆಲ ಗ್ರಾಹಕ ಸ್ನೇಹಿ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸಲು ಕಾರ್ಯೋನ್ಮುಖವಾಗಿದೆ.

ಶೀಘ್ರದಲ್ಲೇ 'ವಾಟ್ಸ್ಆಪ್' ಸೇರಿಕೊಳ್ಳಲಿವೆ ಈ ವಿಶೇಷ ಫೀಚರ್ಸ್!

ವಾಟ್ಸ್ಆಪ್ ಅನ್ನು ಮತ್ತಷ್ಟು ಸರಳಗೊಳಿಸುವ ಪ್ರಕ್ರಿಯೆಯಲ್ಲಿ ಕಂಪೆನಿಯು ಬೇರೆ ಬೇರೆ ಕಡೆಗಳಲ್ಲಿ ವಾಟ್ಸ್‌ಆಪ್‌ ಅನ್ನು ಒಂದೇ ಬಾರಿ ಬಳಸಲು ಅನುವುಮಾಡಿಕೊಡಲಿದೆ. ಅಂದರೆ, ಈಗ ಚಾಲ್ತಿಯಲ್ಲಿರುವ ವಾಟ್ಸ್‌ಆಪ್ ವೆಬ್ ವರ್ಶನ್ ಅನ್ನು ಏಕ ಕಾಲದಲ್ಲಿ ಒಂದೇ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸಬಹುದು. ಆದರೆ, ಮುಂದೆ ಬರಲಿರುವ ಹೊಸ ಫೀಚರ್ ಏಕ ಕಾಲಕ್ಕೆ ಬೇರೆ ಬೇರೆ ಕಡೆ ವಾಟ್ಸ್ಆಪ್ ಬಳಸಲು ಸಹಾಯ ಮಾಡುತ್ತದೆ. ಈ ಫೀಚರ್ ಪ್ರಾರಂಭಿಕವಾಗಿ ಆಪಲ್ ಕಂಪನಿಯ ಐಪಾಡ್‌ನಲ್ಲಿ ಮಾತ್ರ ಲಭ್ಯವಾಗಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ 'ವಾಟ್ಸ್ಆಪ್' ಸೇರಿಕೊಳ್ಳಲಿವೆ ಈ ವಿಶೇಷ ಫೀಚರ್ಸ್!

ಇನ್ನು ಗೂಗಲ್ ಅಸಿಸ್ಟೆಂಟ್ ಮೂಲಕ ವಾಟ್ಸ್‌ಆಪ್ ಕರೆ ಮಾಡುವ ಆಯ್ಕೆಯನ್ನು ಸಹ ತರಲು ಕಂಪೆನಿ ಮುಂದಾಗಿದೆ. 'ಗೂಗಲ್ ಅಸಿಸ್ಟೆಂಟ್' ಸದ್ಯ ವಾಟ್ಸ್‌ಆಪ್ ತೆರೆಯಲು ಹಾಗೂ ಟೆಕ್ಸ್ಟ್ ಮೆಸೇಜ್‌ಗಳನ್ನು ಶೇರ್ ಮಾಡಲು ಮಾತ್ರ ಸಹಕರಿಸುತ್ತಿದೆ. ಆದರೆ, ಇನ್ನು ಮುಂದೆ ಇದು ವಿಡಿಯೊ ಹಾಗೂ ಆಡಿಯೊ ಕರೆ ಮಾಡಲೂ ಸಹ ಸಹಕರಿಸುತ್ತದೆ. 'ಹೇ ಗೂಗಲ್, ವಾಟ್ಸ್‌ಆಪ್ ವಿಡಿಯೊ/ಆಡಿಯೊ ಕಾಲ್-ಕಾಂಟ್ಯಾಕ್ಟ್ ನೇಮ್' ಎಂದು ಕರೆ ಮಾಡಬಹುದು. ಇದೂ ಸಹ ಪ್ರಾರಂಭಿಕವಾಗಿ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ.

ಶೀಘ್ರದಲ್ಲೇ 'ವಾಟ್ಸ್ಆಪ್' ಸೇರಿಕೊಳ್ಳಲಿವೆ ಈ ವಿಶೇಷ ಫೀಚರ್ಸ್!

ಹಾಗೆಯೇ, ಹೆಚ್ಚಾಗಿ ಧ್ವನಿ ಸಂದೇಶ ಕಳುಹಿಸುವವರಿಗೆ ಕಿರಿಕಿರಿಯುಂಟು ಮಾಡುತ್ತಿದ್ದ ಸಮಸ್ಯೆ ಕೂಡ ಬಗೆಹರಿಯಲಿದೆ. ಪ್ರಸ್ತುತ ಧ್ವನಿ ಸಂದೇಶ ಕೇಳಬೇಕೆಂದರೆ ಬಳಕೆದಾರರು ಕಡ್ಡಾಯವಾಗಿ ಆಪ್ ತೆರೆದು ಪ್ಲೇ ಮಾಡಬೇಕಿದೆ. ಇದು ಹೆಚ್ಚಾಗಿ ಧ್ವನಿ ಸಂದೇಶ ಕಳುಹಿಸುವವರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಆದರೆ, ಹೊಸದಾಗಿ ಬರುತ್ತಿರುವ ಅಪ್‌ಡೇಟ್‌ನಿಂದ ಬಳಕೆದಾರರು ಸ್ವೀಕರಿಸುವ ಸಂದೇಶಗಳನ್ನು ವಾಟ್ಸ್‌ಆಪ್‌ ತೆರೆಯದೆಯೇ ನೋಟಿಫಿಕೇಷನ್ ಮೂಲಕ ಮೊಬೈಲ್‌ನಲ್ಲಿ ನೋಡಬಹುದು. ಪ್ರಾರಂಭಿಕವಾಗಿ ಈ ಫೀಚರ್ ಐಒಎಸ್‌ಗೆ ಸಿಗಲಿದೆ.

'ಕೇಬಲ್ ಟಿವಿ' ಶವಪೆಟ್ಟಿಗೆಗೆ ಟ್ರಾಯ್‌ನ ಕೊನೆ ಮೊಳೆ!'ಕೇಬಲ್ ಟಿವಿ' ಶವಪೆಟ್ಟಿಗೆಗೆ ಟ್ರಾಯ್‌ನ ಕೊನೆ ಮೊಳೆ!

ಇನ್‌ಸ್ಟಾಗ್ರಾಂನಲ್ಲಿ ಈಚೆಗೆ ಟ್ರೆಂಡ್ ಸೃಷ್ಟಿ ಮಾಡಿರುವುದು ಬೂಮೆರಾಂಗ್ ವಿಡಿಯೊ ಫೀಚರ್ ಕೂಡ ವಾಟ್ಸ್ಆಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಇದೇ ಫೀಚರ್‌ ಕೊಂಚ ಬದಲಾವಣೆಗೊಂಡು ಶೀಘ್ರವೇ ವಾಟ್ಸ್‌ಆ್ಯಪ್‌ಗೂ ಕಾಲಿಡಲಿದೆ. ಇದರಲ್ಲಿ ಜಿಐಎಫ್ ಫೀಚರ್‌ ಜೊತೆಗೆ ವಿಡಿಯೊ ಟೈಪ್ ಪ್ಯಾನೆಲ್‌ನೊಂದಿಗೆ ಕಾಣಿಸಿಕೊಳ್ಳಲಿದೆ. ಇದರ ಸಹಾಯದಿಂದ ವಿಡಿಯೊಗಳನ್ನು ಹಾಗೂ ಫೋಟೊಗಳನ್ನು ಮತ್ತಷ್ಟು ತಮಾಷೆಯಾಗಿ ಮಾಡಬಹುದು. ಅವುಗಳನ್ನು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಅಪ್‌ಲೋಡ್ ಮಾಡಿ ಬಳಕೆದಾರರು ಹೆಚ್ಚು ಆಕರ್ಷಣೆ ಪಡೆಯಬಹುದು.

Best Mobiles in India

English summary
The chat app recently added a host of new features like fingerprint authentication, continuous voice messages, frequently forwarded, etc. But, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X