ನಕಲಿ ಸುದ್ದಿ ಪತ್ತೆ ಮಾಡಲು ಸರ್ಚ್‌ವೆಬ್‌ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ವಿಶ್ವದ ಟಾಪ್‌ ಮೆಸೇಜಿಂಗ್‌ ಅಪ್‌ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ವಾಟ್ಸಾಪ್‌ ತನ್ನ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ವಾಟ್ಸಾಪ್‌ ಈಗ ತನ್ನ ವೆಬ್‌ ಆವೃತ್ತಿಯಲ್ಲಿ ಹೊಸ ಸರ್ಚ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಕೇವಲ ಟ್ಯಾಪ್ ಮೂಲಕ, ಫಾರ್ವರ್ಡ್ ಮಾಡಿದ ಸಂದೇಶದ ಸತ್ಯಾಸತ್ಯತೆ ಮತ್ತು ಫೇಕ್‌ ನ್ಯೂಸ್‌ ಆಗಿದ್ದರೆ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ವಾಟ್ಸಾಪ್ ವೆಬ್‌ ಆವೃತ್ತಿಯಲ್ಲಿ ಹೊಸ ಮಾದರಿಯ ಸರ್ಚ್‌ ವೆಬ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ವಾಟ್ಸಾಪ್‌ ಬಳಕೆದಾರರಿಗೆ ಇತರೆ ಜನರಿಮದ ಬರುವ ಪಾವರ್ಡ್‌ ಸಂದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅನುಮತಿಸಲಿದೆ ಎಂದು ಹೇಳಲಾಗ್ತಿದೆ. ಸದ್ಯ ಜಗತ್ತಿನ ಎಲ್ಲೆಡೆ ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ, ನಕಲಿ ಸುದ್ದಿಗಳ ಹರಡುವಿಕೆ ಹೆಚ್ಚುತ್ತಿದೆ. ಅದರಲ್ಲೂ ವಾಟ್ಸಾಪ್‌ನಂತಹ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂತಹ ನಕಲಿ ಸುದ್ದಿಗಳು ಬಹುಬೇಗನೇ ಪಾವರ್ಡ್‌ ಆಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ವಾಟ್ಸಾಪ್‌ ಇಂತಹದೊಂದು ಕಾರ್ಯಕ್ಕೆ ಮುಂದಾಗಿದೆ. ಸದ್ಯ ವಾಟ್ಸಾಪ್‌ ಸರ್ಚ್‌ ವೆಬ್ ಅನ್ನು ಕೆಲವೇ ಕೆಲ ಆಯ್ದ ದೇಶಗಳಲ್ಲಿ ಪ್ರಾರಂಭಿಸುತ್ತಿದ್ದು, ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌, ಮೆಸೆಜಿಂಗ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ಶೇರ್‌ ಆಗುವ ಸಂದೇಶಗಳು ಬಹುಬೇಗನೆ ಎಲ್ಲೆಡೆ ತಲುಪಿ ಬಿಡುತ್ತವೆ. ಇಂತಹ ಸುದ್ದಿಗಳಲ್ಲಿ ಕೆಲವೊಮ್ಮೆ ನಕಲಿ ಸುದ್ದಿಗಳು ಕೂಡ ಇರುತ್ತವೆ. ಇ ನಕಲಿ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಸಾದ್ಯತೆ ಇರುವುದರಿಂದ, ಇದನ್ನ ಪರಿಶೀಲಿಸುವ ಫೀಚರ್ಸ್‌ ಅನ್ನು ವಾಟ್ಸಾಪ್‌ ಪರಿಚಯಿಸಿದೆ. ವಾಟ್ಸಾಪ್‌ ಬಳಕೆದಾರರು ತಮಗೆ ಬರುವ ಸಂದೇಶಗಳನ್ನ ಸರ್ಚ್‌ ವೆಬ್‌ ಮೂಲಕ ಆ ಸುದ್ದಿಯ ಸತ್ಯಾಸತ್ಯತೆಯನ್ನ ಪರಿಶೀಲಿಸಬಹುದಾಗಿದೆ.

ವಾಟ್ಸಾಪ್‌

ಇದಕ್ಕಾಗಿ ವಾಟ್ಸಾಪ್‌ ಸಂದೇಶದ ಪಕ್ಕದಲ್ಲಿರುವ ಭೂತಗನ್ನಡಿಯ ಐಕಾನ್ ಅನ್ನು ನೀವು ಟ್ಯಾಪ್ ಮಾಡಬಹುದು. ಇದನ್ನು ಟ್ಯಾಪ್ ಮಾಡುವ ಮೂಲಕ, ನಿಮ್ಮ ಡೀಫಾಲ್ಟ್ ಬ್ರೌಸರ್‌ಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಸಂದೇಶವನ್ನು ಅಪ್‌ಲೋಡ್ ಮಾಡಲಾಗುತ್ತದೆ. ವೆಬ್ ಫಲಿತಾಂಶಗಳ ಮೂಲಕ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇದು ನಿಮಗೆ ಅನುಮತಿಸುತ್ತದೆ. ಅಲ್ಲದೆ ಅನೇಕ ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಹುಡುಕಲು ಸರಳವಾದ ಮಾರ್ಗವನ್ನು ಒದಗಿಸಲಿದೆ.

ವಾಟ್ಸಾಪ್

ಬಳಕೆದಾರರು ಸ್ವೀಕರಿಸಿದ ವಿಷಯದ ಬಗ್ಗೆ ಸುದ್ದಿ ಫಲಿತಾಂಶಗಳು ಅಥವಾ ಇತರ ಮಾಹಿತಿಯ ಮೂಲಗಳನ್ನು ಕಂಡುಹಿಡಿಯಲು ಇದು ಸಹಾಯ ಮಾಡಬಹುದು ಎನ್ನಲಾಗ್ತಿದೆ. ಇನ್ನು ನಿಮಗೆ ಕಳುಹಿಸಿದ ಸಂದೇಶವನ್ನು ಸಂದೇಶದ ಮೇಲ್ಭಾಗದಲ್ಲಿ ಗೋಚರಿಸುವ ಫಾರ್ವರ್ಡ್ ಮಾಡಲಾದ ಲೇಬಲ್ ಮೂಲಕ ಫಾರ್ವರ್ಡ್ ಮಾಡಲಾಗಿದೆಯೇ ಎಂದು ನೋಡಲು ವಾಟ್ಸಾಪ್ ನಿಮಗೆ ಅನುಮತಿಸುತ್ತದೆ. ಅಲ್ಲದೆ ವಾಟ್ಸಾಪ್ ಸಂದೇಶವನ್ನು ನೋಡದೆಯೆ ತಮ್ಮ ಬ್ರೌಸರ್‌ಗಳಲ್ಲಿ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿದೆ ಎಂದು ವಾಟ್ಸಾಪ್ ಹೇಳಿದೆ.

ವಾಟ್ಸಾಪ್‌

ಪ್ರಸ್ತುತ, ಆಂಡ್ರಾಯ್ಡ್, ಐಫೋನ್ ಮತ್ತು ವಾಟ್ಸಾಪ್ ವೆಬ್‌ನಲ್ಲಿ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವ ಬಳಕೆದಾರರಿಗಾಗಿ ಇದನ್ನು ರೂಪಿಸಲಾಗಿದ್ದು, ಇದು ಸದ್ಯ ಬ್ರೆಜಿಲ್, ಇಟಲಿ, ಐರ್ಲೆಂಡ್, ಮೆಕ್ಸಿಕೊ, ಸ್ಪೇನ್, ಯುಕೆ ಮತ್ತು ಯುಎಸ್‌ನಲ್ಲಿ ಮಾತ್ರ ಈ ಸರ್ಚ್ ವೆಬ್ ಲಬ್ಯವಾಗಲಿದೆ ಎನ್ನಲಾಗ್ತಿದೆ.

Most Read Articles
Best Mobiles in India

English summary
A magnifying glass next to the forwarded messages will lead you to Web results about the same on your browser.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X