Just In
- 7 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 8 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 10 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 11 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಶೀಘ್ರದಲ್ಲೇ ವಾಟ್ಸಾಪ್ ಕಾಲ್ ಫೀಚರ್ಸ್ನಲ್ಲಿ ಆಗಲಿದೆ ಹೊಸ ಬದಲಾವಣೆ!
ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಅನೇಕ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್ಗಳನ್ನು ಪರೀಕ್ಷಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದು ವಾಟ್ಸಾಪ್ ಕಾಲ್ನಲ್ಲಿ ಸೇರ್ಪಡೆ ಆಗಲು ಕಾಲ್ಸ್ ಲಿಂಕ್ಗಳನ್ನು ಕ್ರಿಯೆಟ್ ಮಾಡಲು ಅವಕಾಶ ನೀಡಲಿದೆ. ಇದರಿಂದ ವಾಟ್ಸಾಪ್ ಕಾಲ್ ಹೋಸ್ಟ್ ಕಾಲ್ ಲಿಂಕ್ ಕ್ರಿಯೆಟ್ ಮಾಡಿ ಬೇರೆಯವರನ್ನು ಕಾಲ್ಗೆ ಇನ್ವೈಟ್ ಮಾಡಲು ಅವಕಾಶ ನೀಡಲಿದೆ.

ಹೌದು, ವಾಟ್ಸಾಪ್ ಕಾಲ್ಸ್ ಲಿಂಕ್ ಕ್ರಿಯೆಟ್ ಮಾಡುವ ಫೀಚರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ವಾಟ್ಸಾಪ್ ಕಾಲ್ ಅನ್ನು ಕಾಲ್ಸ್ ಲಿಂಕ್ ಮೂಲಕವೇ ಸೇರಬಹುದಾಗಿದೆ. ಗ್ರೂಪ್ ಕಾಲ್ ಹೋಸ್ಟ್ ಮಾಡುವವರು ಕಾಲ್ಸ್ ಲಿಂಕ್ ಮೂಲಕ ತಮ್ಮ ಸ್ನೇಹಿತರನ್ನು ಇನ್ವೈಟ್ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್ ಕಾಳ್ಸ್ ಲಿಂಕ್ ಕ್ರಿಯೆಟ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಶೀಘ್ರದಲ್ಲೇ ಕಾಲ್ ಲಿಂಕ್ಗಳನ್ನು ಬಳಸಿಕೊಂಡು ವಾಟ್ಸಾಪ್ ಕಾಲ್ ಸೇರುವುದಕ್ಕೆ ಅವಕಾಶ ನೀಡಲಿದೆ. ವಾಟ್ಸಾಪ್ ಕಾಲ್ ಹೋಸ್ಟ್ ಮಾಡುವವರು ಕಾಲ್ಸ್ ಲಿಂಕ್ಸ್ ಕ್ರಿಯೆಟ್ ಮಾಡುವುದಕ್ಕೆ ಅವಕಾಶ ನೀಡಲಿದ್ದು, ಇದರಿಂದ ನೀವು ವಾಟ್ಸಾಪ್ ಕಾಲ್ನಲ್ಲಿ ಸೇರುವುದು ಸುಲಭವಾಘಲಿದೆ. ಇನ್ನು ಕಾಲ್ ಹೋಸ್ಟ್ ಕಾಲ್ಸ್ ಲಿಂಕ್ ಮೂಲಕ ಯಾರನ್ನು ಬೇಕಾದರೂ ಕಾಲ್ಗೆ ಇನ್ವೈಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ಲಿಂಕ್ ಅನ್ನು ಬಳಸಿಕೊಂಡು ವಾಟ್ಸಾಪ್ನಲ್ಲಿ ಕರೆ ಮಾಡಲು ಅವಕಾಶ ದೊರೆಯಲಿದೆ.

ಇನ್ನು ಈ ಹೊಸ ಫೀಚರ್ಸ್ ಈಗಾಗಲೇ ಮೆಸೆಂಜರ್ ರೂಮ್ಗಳಲ್ಲಿ ಲಭ್ಯವಿರುವ ಫೀಚರ್ಸ್ ಮಾದರಿಯಲ್ಲಿಯೇ ಇದ್ದರೂ ಸ್ವಲ್ಪ ಭಿನ್ನವಾಗಿರುತ್ತದೆ. ಮೆಸೆಂಜರ್ ರೂಮ್ ಅನ್ನು ಫೇಸ್ಬುಕ್ ಅಕೌಂಟ್ ಇಲ್ಲದವರೂ ಕೂಡ ಸೇರಬಹುದು. ಆದರೆ ವಾಟ್ಸಾಪ್ ಕಾಲ್ ಅನ್ನು ವಾಟ್ಸಾಪ್ ಅಕೌಂಟ್ ಹೊಂದಿರುವ ಬಳಕೆದಾರರು ಮಾತ್ರ ಸೇರುವುದಕ್ಕೆ ಅವಕಾಶವಿದೆ. ಸದ್ಯ ಈ ಫೀಚರ್ಸ್ ಇನ್ನು ಅಭಿವೃದ್ಧಿ ಹಂತದಲ್ಲಿರುವುದರಿಂದ, ಪ್ರಸ್ತುತ ಕಾಲ್ ಲಿಂಕ್ಸ್ ಕ್ರಿಯೆಟ್ ಮಾಡಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ಫೀಚರ್ಸ್ ಅನ್ನು ವಾಟ್ಸಾಪ್ ಪರಿಚಯಿಸಲಿದೆ ಎಂದು ವರದಿಯಾಗಿದೆ.

ಇದಲ್ಲದೆ ವಾಟ್ಸಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಬಳಕೆದಾರರು ಹೊಸ ಸರ್ಚ್ ಬಟನ್ ಪರಿಚಯಸಲು ಮುಂದಾಗಿದೆ. ಇದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಪರ್ಕಗಳು ಮತ್ತು ಗುಂಪು ಚಾಟ್ಗಳ ಮಾಹಿತಿ ಪುಟದಲ್ಲಿ ಈ ಸರ್ಚ್ ಆಯ್ಕೆಯನ್ನು ಕಾಣಬಹುದಾಗಿದೆ. ಪ್ರಸ್ತುತ, ಈ ಫೀಚರ್ಸ್ ಅನ್ನು ಬೀಟಾ ಪರೀಕ್ಷಕರ ಗ್ರೂಪ್ನಲ್ಲಿ ಪರಿಚಯಿಸಲಾಗುತ್ತಿದೆ. ಇನ್ನು ಈ ಸರ್ಚ್ ಬಟನ್ ಮೂಲಕ ನೀವು ನಿರ್ಧಿಷ್ಟ ಮೆಸೇಜ್ಗಳನ್ನು ಸರ್ಚ್ ಮಾಡುವುದು ಸುಲಭವಾಗಲಿದೆ. ಇದು ಒಂದು ರೀತಿಯಲ್ಲಿ ಶಾರ್ಟ್ಕಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಪ್ರಸ್ತುತ ವಾಟ್ಸಾಪ್ನಲ್ಲಿ ಆಂಡ್ರಾಯ್ಡ್ ಬಳಕೆದಾರರು ವೈಯಕ್ತಿಕ ಚಾಟ್ಗಳಿಗೆ ಹೋಗಿ ಮತ್ತು "ಸರ್ಚ್" ಮಾಡಲು ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ಸಂದೇಶಗಳನ್ನು ಮಾತ್ರ ಹುಡುಕಬಹುದು. ಆದರೆ ಈ ಹೊಸ ಬಟನ್ ಸೇರ್ಪಡೆಯಾದರೆ ಸರ್ಚ್ ಮಾಡುವುದು ಸಾಕಷ್ಟು ಸುಲಭವಾಗಲಿದೆ. ಇನ್ನು ವಾಟ್ಸಾಪ್ ಇತ್ತೀಚೆಗೆ ಹೊಸ ವಾಯ್ಸ್ ಕಾಲ್ ಇಂಟರ್ಫೇಸ್ ಅನ್ನು ಪ್ರಾರಂಭಿಸಿದೆ. ವಾಯ್ಸ್ ಮೆಸೇಜ್ ಗಳನ್ನು ವಿರಾಮಗೊಳಿಸುವ ಮತ್ತು ರೆಕಾರ್ಡಿಂಗ್ ಮುಂದುವರಿಸುವ ಆಯ್ಕೆಯನ್ನು ಕೂಡ ಈಗಾಗಲೇ ಪರಿಚಯಿಸಲಾಗಿದೆ.

ಹಾಗೆಯೇ ವಾಟ್ಸಾಪ್ ತನ್ನ ಡೆಸ್ಕ್ಟಾಪ್ ಆವೃತ್ತಿಯಲ್ಲಿ ಹೊಸ ಬೀಟಾ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಪರಿಚಯಿಸಿದೆ. ಇದು ಹೆಸರೇ ಸೂಚಿಸುವಂತೆ ವಾಟ್ಸಾಪ್ ಮೆಸೇಜ್ಗಳಿಗೆ ಎಮೋಜಿಗಳ ಮೂಲಕ ರಿಯಾಕ್ಷನ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಬಳಕೆದಾರರು ಸ್ವೀಕರಿಸುವ ಸಂದೇಶಕ್ಕೆ ಎಮೋಜಿ ಮೂಲಕ ತ್ವರಿತವಾಗಿ ರಿಯಾಕ್ಷನ್ ಮಾಡಲು ಅನುಮತಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086