Just In
Don't Miss
- News
ಬೆಂಗಳೂರಿನ ಸಬ್ಅರ್ಬನ್ ರೈಲು ಕಾರಿಡಾರ್ಗಳಿಗೆ ಹೂವುಗಳ ಹೆಸರು
- Movies
ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಜೂ.ಎನ್ ಟಿ ಆರ್: ಯಾವ ಶೋ?
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೇವಾ ನಿಯಮ ವಿವಾದದ ನಡುವೆ ಹೊಸ ಫೀಚರ್ಸ್ ಪರಿಚಯಿಸಲು ವಾಟ್ಸಾಪ್ನಿಂದ ಸಿದ್ದತೆ!
ಪ್ರಸ್ತುತ ವಾಟ್ಸಾಪ್ ತನ್ನ ಸೇವಾ ನಿಯಮ ಹಾಗೂ ಗೌಪ್ಯತೆ ನೀತಿಯ ವಿಚಾರವಾಗಿ ಬಳಕೆದಾರರಿಂದ ಭಾರಿ ವಿರೋದವನ್ನು ಎದುರಿಸುತ್ತಿದೆ. ಇದರ ನಡುವೆ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಒಂದನ್ನ ಬೀಟಾ ವರ್ಷನ್ನಲ್ಲಿ ಪರಿಚಯಿಸಿದೆ. ಇನ್ನು ಈ ಹೊಸ ಫೀಚರ್ಸ್ ಅನ್ನು ವಾಟ್ಸಾಪ್ ರೀಡ್ ಲೇಟರ್ ಎಂದು ಗುರುತಿಸಲಾಗಿದ್ದು, ಇದು ಮೂಲಭೂತವಾಗಿ ಆರ್ಕೈವ್ ಮಾಡಿದ ಚಾಟ್ಗಳ ಒಂದು ಪುನರಾವರ್ತನೆಯಾಗಿದೆ. ಅಂದರೆ, ಹೆಸರೇ ಸೂಚಿಸುವಂತೆ, ಈ ಪಟ್ಟಿಗೆ ಸೇರಿಸಲಾದ ಎಲ್ಲಾ ಚಾಟ್ಗಳನ್ನು ಮ್ಯೂಟ್ ಮಾಡುತ್ತದೆ, ಮತ್ತು ಆಗಾಗ್ಗೆ ಅಡ್ಡಿಪಡಿಸುವಿಕೆಯನ್ನು ಕಡಿಮೆ ಮಾಡಲು ಈ ಚಾಟ್ಗಳಿಗಾಗಿ ಹೊಸ ಸಂದೇಶ ಅಧಿಸೂಚನೆಗಳನ್ನು ನೀಡುವುದನ್ನು ತಪ್ಪಿಸಲಿದೆ.

ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ರೀಡ್ ಲೇಟರ್ ಫೀಚರ್ಸ್ ಅನ್ನು ಪರಿಚಯಸಿದೆ. ಇದು ಮೂಲಭೂತವಾಗಿ, ಬಳಕೆದಾರರು ವಾಟ್ಸಾಪ್ನಲ್ಲಿ ಬರುವ ಸಂದೇಶಗಳ ನಂತರ ಲೇಟ್ ಆಗಿ ಓದುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಮುಖ್ಯ ವಲ್ಲದ ಚಾಟ್ಗಳನ್ನು ನಿದಾನವಾಗಿ ಓದುವುದಕ್ಕಾಗಿ ರೀಡ್ ಲೇಟರ್ನಲ್ಲಿ ಇರಿಸಬಹುದು. ಇದರಿಂದ ನಿಮಗೆ ಬರುವ ಚಾಟ್ಗಳನ್ನ ನೋಟಿಫಿಕೇಶನ್ನಲ್ಲಿ ತೋರಿಸುವುದಿಲ್ಲ. ಅಲ್ಲದೆ ಚಾಟ್ ಪರದೆಯನ್ನು ಹೊಂದಲು, ಗುಂಪುಗಳನ್ನು ಮತ್ತು ವ್ಯಕ್ತಿಗಳನ್ನು ಅವರಿಗೆ ಮುಖ್ಯವಲ್ಲದ ವಿಭಾಗದಲ್ಲಿ ಇರಿಸಬಹುದು. ಇನ್ನುಳಿದಂತೆ ಈ ಫೀಚರ್ಸ್ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ನ ಹೊಸ ರೀಡ್ ಲೇಟರ್ ಫೀಚರ್ಸ್ ಅನ್ನು ಸದ್ಯ ವಾಟ್ಸಾಪ್ ಆಂಡ್ರಾಯ್ಡ್ ಬೀಟಾದಲ್ಲಿ ಗುರುತಿಸಲಾಗಿದೆ. ಆಂಡ್ರಾಯ್ಡ್ ಬೀಟಾ v2.21.2.2 ಗಾಗಿ ಹೊಸ ವಾಟ್ಸಾಪ್ ಫೀಚರ್ಸ್ ಪೈಪ್ಲೈನ್ನಲ್ಲಿದೆ. ಸಹಜವಾಗಿ, ಇದು ಅಭಿವೃದ್ಧಿಯ ಹಂತದಲ್ಲಿದೆ ಮತ್ತು ನೀವು ಇತ್ತೀಚಿನ ಬೀಟಾವನ್ನು ಸ್ಥಾಪಿಸಿದರೂ ಸಹ ನೀವು ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಎಲ್ಲಾ ವಾಣಿಜ್ಯ ಬಳಕೆದಾರರಿಗೆ ಲಭ್ಯವಾಗುವ ಮೊದಲು, ಫೀಚರ್ಸ್ ಅನ್ನು ಪರೀಕ್ಷೆಗೆ ಸಿದ್ಧವಾದ ನಂತರ ಅದನ್ನು ಬೀಟಾ ಬಳಕೆದಾರರಿಗೆ ವಾಟ್ಸಾಪ್ ಪರಿಚಯಿಸಬೇಕಿದೆ.

ಇನ್ನು ವಾಟ್ಸಾಪ್ ಬೀಟಾ ಇನ್ಪೋ ಚಾಟ್ ಪಟ್ಟಿಯ ಮೇಲ್ಭಾಗದಲ್ಲಿ ಆರ್ಕೈವ್ ಮಾಡಿದ ಚಾಟ್ಗಳಂತೆಯೇ ರೀಡ್ ಲೇಟರ್ ಫೀಚರ್ಸ್ ಕೂಡ ಇರಲಿದೆ ಎನ್ನಲಾಗಿದೆ. ಆರ್ಕೈವ್ ಗುಂಡಿಯ ಮೇಲ್ಬಾಗದಲ್ಲಿ ಈ ಫೀಚರ್ಸ್ ಇರಲಿದೆ. ಇದನ್ನು ಟ್ಯಾಪ್ ಮಾಡುವುದರಿಂದ ಪರಿಚಯಾತ್ಮಕ ಬ್ಯಾನರ್ ಅನ್ನು ನೀಡುತ್ತದೆ. ಇದು "ಅಡಚಣೆಗಳನ್ನು ಕಡಿಮೆ ಮಾಡಲು, ಹೊಸ ಸಂದೇಶಗಳನ್ನು ಯಾವುದೇ ನೊಟೀಫಿಕೇಶನ್ ತೋರಿಸದೆ ಉಳಿಸುತ್ತದೆ. ಈ ಕಾರ್ಯವನ್ನು ಸುಧಾರಿಸಲು ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.

ಇದಲ್ಲದೆ ವಾಟ್ಸಾಪ್ನ ಚಾಟ್ ಸೆಟ್ಟಿಂಗ್ಗಳಲ್ಲಿ ಟಾಗಲ್ ಮಾಡುವ ಮೂಲಕ ಬಳಕೆದಾರರು ನಂತರ ಓದಲು ಸುಲಭವಾಗಿ ಆಫ್ ಮಾಡಬಹುದು ಎಂದು ವರದಿಯಾಗಿದೆ. ಈ ಒಂದು ಸ್ವಿಚ್ನೊಂದಿಗೆ, ರೀಡ್ ಲೇಟರ್ ಫೀಚರ್ಸ್ನಲ್ಲಿ ಇರಿಸಲಾಗಿರುವ ಎಲ್ಲಾ ಚಾಟ್ಗಳು ಮುಖ್ಯ ಚಾಟ್ ವಿಭಾಗಕ್ಕೆ ಚಲಿಸುತ್ತವೆ. ಈ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190