ವಾಟ್ಸಾಪ್‌ನಿಂದ ಗ್ರೂಪ್‌ ವೀಡಿಯೊ ಕಾಲ್‌ ಮಾಡೋರಿಗೆ ಗುಡ್‌ ನ್ಯೂಸ್‌!

|

ಇಂದಿನ ದಿನಗಳಲ್ಲಿ ವಾಟ್ಸಾಪ್‌ ಅನ್ನು ಬಳಸದವರೂ ಇಲ್ಲ ಅಂತಾನೇ ಹೇಳಬಹುದು. ಅಷ್ಟರ ಮಟ್ಟಿಗೆ ವಾಟ್ಸಾಪ್‌ ಎಲ್ಲಾ ವಯೋಮಾನದವರನ್ನು ಸೆಳೆದಿದೆ. ಎಲ್ಲಾ ವಲಯದವರು ಬಳಸುವ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಂತಹಂತವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಗ್ರೂಪ್‌ ವೀಡಿಯೊ ಕಾಲ್‌ ಅನ್ನು ನೇರವಾಗಿ ಗ್ರೂಪ್‌ ಚಾಟ್‌ಗಳಿಗೆ ಸೇರುವುದಕ್ಕೆ ಅವಕಾಶ ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಜಾಯಿನೇಬಲ್‌ ಕಾಲ್‌ ಫೀಚರ್ಸ್‌ ಅನ್ನು ಗ್ರೂಪ್‌ಚಾಟ್‌ ಜೊತೆಗೆ ಸಂಯೋಜಿಸಿದೆ. ಅಂದರೆ ಗ್ರೂಪ್‌ ವೀಡಿಯೊ ಕಾಲ್‌ನಲ್ಲಿರುವಾಗಲೇ ಗ್ರೂಪ್‌ಕಾಲ್‌ಗೆ ಜಾಯಿನ್‌ ಆಗಬಹುದಾಗಿದೆ. ಇದರಿಂದ ಗ್ರೂಪ್ ಚಾಟ್ ಟ್ಯಾಬ್ ನಿಂದಲೇ ನಡೆಯುತ್ತಿರುವ ಗ್ರೂಪ್ ಕರೆಗೆ ಸೇರುವುದು ಸುಲಭವಾಗಲಿದೆ. ಸದ್ಯ ಈ ಹೊಸ ಅಪ್ಡೇಟ್‌ ಮೂಲಕ ಗ್ರೂಪ್‌ ಕಾಲ್‌ನಲ್ಲಿ ಭಾಗವಹಿಸುವವರ ಹೆಸರಿನ ಬದಲಿಗೆ ಗ್ರೂಪ್‌ ನೇಮ್‌ ಮಾತ್ರ ಕಾಣಿಸಲಿದೆ ಎಂದಯ ಹೇಳಲಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಜಾಯಿನೇಬಲ್‌ ಫೀಚರ್ಸ್‌ ಅನ್ನು ಅಪ್ಡೇಟ್‌ ಮಾಡಿದೆ. ಇದೀಗ ತನ್ನ ಗ್ರೂಪ್‌ ಚಾಟ್‌ಗಳಿಗೆ ಇಂಟಿಗ್ರೇಷನ್ ಮೂಲಕ ಹೊಸ ಅನುಭವ ನೀಡಲು ಮುಂದಾಗಿದೆ. ಈ ಮೂಲಕ ನೀವು ನಿಮ್ಮ ಗುಂಪಿನಲ್ಲಿರುವ ಯಾರಾದರೂ ಗ್ರೂಪ್‌ ಕಾಲ್‌ ಮಿಸ್‌ ಮಾಡಿಕೊಂಡಿದ್ದರೆ ಅವರು ಕರೆಯ ಮಧ್ಯದಲ್ಲಿ ಮತ್ತೆ ಸೇರಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಕರೆಯಲ್ಲಿರುವಾಗಲೇ ನೀವು ಯಾವಾಗ ಬೇಕಾದರೂ ಬಿಡಬಹುದು ಮತ್ತು ಪುನಃ ಸೇರಬಹುದು. ವಾಟ್ಸಾಪ್ ಅನ್ನು ಗ್ರೂಪ್ ವಿಡಿಯೋ ಅಥವಾ ವಾಯ್ಸ್ ಕರೆಗಳಿಗೆ ಹೆಚ್ಚು ಬಳಸುವವರಿಗೆ ಈ ಫೀಚರ್ಸ್‌ ಉಪಯುಕ್ತವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಿಂದಾಗಿ ಗ್ರೂಪ್‌ ಕಾಲ್ಸ್‌ ನಿಮ್ಮ ಗುಂಪು ಚಾಟ್‌ಗಳಿಗೆ ಸಾಕಷ್ಟು ಉಪಯುಕ್ತವಾಗಲಿದೆ. ನೀವು ಚಾಟ್ ಟ್ಯಾಬ್‌ನಿಂದಲೇ ಸಲೀಸಾಗಿ ಸೇರಿಕೊಳ್ಳಬಹುದು. ಗ್ರೂಪ್‌ ಕಾಲ್‌ ಜನಪ್ರಿಯತೆ ಹೆಚ್ಚುತ್ತಿದ್ದು, ವಾಟ್ಸಾಪ್‌ನ ಈ ಫೀಚರ್ಸ್‌ ತಮ್ಮ ಕುಟುಂಬ ಮತ್ತು ಸ್ನೇಹಿತರ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಲು ಹೊಸ ಅವಕಾಶ ನೀಡಲಿದೆ. ಇನ್ನು ಈ ಫೀಚರ್ಸ್‌ನಲ್ಲಿ ಒಬ್ಬರು ಕರೆ ಮಾಹಿತಿ ಪರದೆಯನ್ನು ನೋಡಬಹುದು. ಜೊತೆಗೆ ವಾಟ್ಸಾಪ್‌ ಗ್ರೂಪ್‌ ಕಾಲ್‌ನಲ್ಲಿ ಈಗಾಗಲೇ ಯಾರಿದ್ದಾರೆ, ಯಾರು ಇನ್ವೈಟ್‌ ಮಾಡಿದ್ದಾರೆ, ಯಾರು ಸೇರಿಕೊಂಡಿಲ್ಲ ಅನ್ನೊದನ್ನ ನೀವು ನೋಡಬಹುದಾಗಿದೆ.

ಈಗಾಗಲೇ ಚಾಲ್ತಿಯಲ್ಲಿರುವ ವಾಟ್ಸಾಪ್ ಗ್ರೂಪ್ ಕರೆಗಳಿಗೆ ಸೇರುವುದು ಹೇಗೆ?

ಈಗಾಗಲೇ ಚಾಲ್ತಿಯಲ್ಲಿರುವ ವಾಟ್ಸಾಪ್ ಗ್ರೂಪ್ ಕರೆಗಳಿಗೆ ಸೇರುವುದು ಹೇಗೆ?

ನೀವು ಗ್ರೂಪ್‌ ವಾಯ್ಸ್‌ ಅಥವಾ ವೀಡಿಯೊ ಕರೆಯನ್ನು ನಿರ್ಲಕ್ಷಿಸಿದರೆ, ವಾಟ್ಸಾಪ್‌ನಲ್ಲಿ ಗ್ರೂಪ್‌ ಚಾಟ್‌ನಿಂದ ನೇರವಾಗಿ ಕರೆ ಸೇರುವ ಆಯ್ಕೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಬಳಕೆದಾರರು ನೋಟಿಫಿಕೇಶನ್‌ ನೋಡುತ್ತಾರೆ. ಇದು ಭಾಗವಹಿಸುವವರ ಹೆಸರುಗಳ ಬದಲಿಗೆ ಗುಂಪಿನ ಹೆಸರನ್ನು ತೋರಿಸಲಿದೆ. ವಾಟ್ಸಾಪ್‌ ಸ್ಕ್ರೀನ್‌ ಮೇಲ್ಭಾಗದಲ್ಲಿ "ಸೇರಿಕೊಳ್ಳಿ" ಬಟನ್ ಇರುತ್ತದೆ ಈ ಮೂಲಕ ನೀವು ಚಾಲ್ತಿಯಲ್ಲಿರುವ ವಾಟ್ಸಾಪ್‌ ಗ್ರೂಪ್‌ ಕಾಲ್‌ಗೆ ಸೇರಬಹುದು.

ಗ್ರೂಪ್

ಇನ್ನು ಒಮ್ಮೆ ಗ್ರೂಪ್ ಕಾಲ್ ಪ್ರಾರಂಭವಾದರೆ, ಎಲ್ಲಾ ಸದಸ್ಯರು ತಕ್ಷಣವೇ ಅಥವಾ ತಮ್ಮ ಬಿಡುವಿನ ವೇಳೆಯಲ್ಲಿ ಸೇರಿಕೊಳ್ಳಬಹುದು. ಎರಡನೆಯದು ಜಾಯಿನ್ ಬಟನ್‌ನೊಂದಿಗೆ ಗ್ರೂಪ್ ಚಾಟ್‌ನಲ್ಲಿ ಪ್ರತ್ಯೇಕ ಟ್ಯಾಬ್ ಕಾಣಲಿದೆ. ಕರೆಗೆ ಸೇರಲು ಈ ಬಟನ್‌ ಅನ್ನು ಟ್ಯಾಪ್ ಮಾಡಬಹುದು. ವಾಟ್ಸಾಪ್ ಕರೆ ನೋಟಿಫಿಕೇಶನ್‌ನಲ್ಲಿ ಭಾಗವಹಿಸುವವರ ಹೆಸರಿನ ಬದಲು ಗುಂಪಿನ ಹೆಸರನ್ನು ಹೇಳುತ್ತದೆ ಎಂದು ಹೇಳುತ್ತದೆ. ಆಯಾ ವಾಟ್ಸಾಪ್ ಗ್ರೂಪ್‌ನ ಭಾಗವಾಗಿರುವ ಜನರು ಮಾತ್ರ ನಡೆಯುತ್ತಿರುವ ಗ್ರೂಪ್ ಕರೆಗೆ ಸೇರಬಹುದು ಎಂಬುದನ್ನು ಗಮನಿಸಬೇಕು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಶೀಘ್ರದಲ್ಲೇ ನ್ಯೂ ನೋಟ್ಸ್‌ ಫೀಚರ್‌ ಅನ್ನು ಪರಿಚಯಿಸಲಿದೆ. ಇದಕ್ಕಾಗಿ "ಜಾಗತಿಕ ವಾಯ್ಸ್‌ ಮೆಸೇಜ್‌ ಪ್ಲೇಯರ್" ನಲ್ಲಿ ಕೆಲಸ ಮಾಡುತ್ತಿದೆ. ಇದು ಬಳಕೆದಾರರಿಗೆ ಚಾಟ್ ಬಿಟ್ಟ ನಂತರವೂ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬಳಕೆದಾರರು ವಾಯ್ಸ್‌ ಮೆಸೇಜ್‌ ಅನ್ನು ಪ್ಲೇ ಮಾಡಿದ ನಂತರ, ಆ ಚಾಟ್ ಅನ್ನು ತೊರೆದ ನಂತರವೂ ಮೇನ್‌ ಅಪ್ಲಿಕೇಶನ್‌ನ ಮೇಲ್ಭಾಗಕ್ಕೆ ವಾಯ್ಸ್‌ ಮೆಸೇಜ್‌ಗಳನ್ನು ಪಿನ್ ಮಾಡುತ್ತದೆ. ಅಲ್ಲದೆ ನೀವು ವಾಯ್ಸ್‌ ಮೆಸೇಜ್‌ ಅನ್ನು ಕೇಳುವಾಗಲೂ ಇತರ ಕಂಟ್ಯಾಕ್ಟ್‌ಗಳಿಗೆ ಮೆಸೇಜ್‌ ಕಳುಹಿಸುವುದಕ್ಕೆ ಕೂಡ ಸಾಧ್ಯವಾಗಲಿದೆ.

Most Read Articles
Best Mobiles in India

English summary
WhatsApp has integrated its joinable calls feature, which lets users join an ongoing group video,directly into group chats.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X