ವಾಟ್ಸಾಪ್‌ನಿಂದ ಪ್ಲೇ ಬ್ಯಾಕ್‌ ಸ್ಪೀಡ್‌ ಫೀಚರ್ಸ್‌ ಬಿಡುಗಡೆ!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ ಪರಿಚಯಿಸಿ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಸೈ ಎನಿಸಿಕೊಂಡಿದೆ. ಇನ್ನು ಕಾಲಕಾಲಕ್ಕೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿರುವ ವಾಟ್ಸಾಪ್‌ ಇದೀಗ ವಾಯ್ಸ್‌ ಮೆಸೇಜ್‌ಗಳಿಗಾಗಿ ಪ್ಲೇಬ್ಯಾಕ್ ವೇಗವನ್ನು ಪ್ರಾರಂಭಿಸುವುದನ್ನು ಅಧಿಕೃತವಾಗಿ ಘೋಷಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದೆ. ವಾಯ್ಸ್‌ ಮೆಸೇಜ್‌ನಲ್ಲಿ ಪ್ಲೇಬ್ಯಾಕ್‌ ವೇಗವನ್ನು ಪರಿಚಯಿಸಿದೆ. ವಾಯ್ಸ್‌ ಮೇಸೇಜ್‌ಗಳಿಗಾಗಿ ಆಯ್ಕೆ ಮಾಡಲು ಮೂರು ಪ್ಲೇಬ್ಯಾಕ್ ವೇಗ ಆಯ್ಕೆಗಳಿವೆ. ಇನ್ನು ಈ ಹೊಸ ಫೀಚರ್ಸ್‌ ಬಗ್ಗೆ ವಾಟ್ಸಾಫ್‌ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇನ್ನು ಪ್ಲೇಬ್ಯಾಕ್‌ ವೇಗದಲ್ಲಿ ಸಾಮಾನ್ಯ ವೇಗ, 1.5x ವೇಗ ಮತ್ತು 2x ವೇಗ ಸೇರಿದಂತೆ ಮೂರು ವಿಭಿನ್ನ ವೇಗಗಳಲ್ಲಿ ಬಳಕೆದಾರರು ವಾಟ್ಸಾಪ್ ಧ್ವನಿ ಸಂದೇಶಗಳನ್ನು ಕೇಳಬಹುದಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್

ಇನ್ನು ಈ ಹೊಸ ವಾಟ್ಸಾಪ್ ಪ್ಲೇಬ್ಯಾಕ್ ವೇಗ ಐಕಾನ್ ವಾಯ್ಸ್‌ ಮೆಸೇಜ್‌ನಲ್ಲಿ ಗೋಚರಿಸುತ್ತದೆ. ಪ್ಲೇಬ್ಯಾಕ್ ವೇಗವನ್ನು ಬದಲಾಯಿಸಲು ನೀವು ಐಕಾನ್ ಟ್ಯಾಪ್ ಮಾಡಬಹುದು. ಆದ್ದರಿಂದ ಮೊದಲ ಟ್ಯಾಪ್ ವೇಗವನ್ನು 1.5x ಮತ್ತು ಎರಡನೆಯದನ್ನು 2x ಹೆಚ್ಚಿಸುವುದು. ಧ್ವನಿ ಸಂದೇಶಗಳಿಗಾಗಿ ನಿಧಾನವಾದ ಪ್ಲೇಬ್ಯಾಕ್ ವೇಗಕ್ಕೆ ಯಾವುದೇ ಆಯ್ಕೆಗಳಿಲ್ಲ. ಹೊಸ ವಾಟ್ಸಾಪ್ ವೈಶಿಷ್ಟ್ಯವು ಚಿಕ್ಕದಾಗಿದೆ ಆದರೆ ಇದು ಸಹಾಯಕವಾಗಬಲ್ಲದು. ಅದರಲ್ಲೂ ವಾಟ್ಸಾಪ್ ವಾಯ್ಸ್‌ ಮೆಸೇಜ್‌ಗಳು ಪೂರ್ವನಿಯೋಜಿತವಾಗಿ ಸಾಮಾನ್ಯ ವೇಗದಲ್ಲಿ ಪ್ಲೇ ಆಗುತ್ತವೆ.

ಹೊಸ

ಸದ್ಯ ಇದೀಗ ಪರಿಚಯಿಸಿರುವ ಹೊಸ ಫೀಚರ್ಸ್‌ ಕಳೆದ ತಿಂಗಳಿನಿಂದ ಕೆಲವು ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದು ಇದೀಗ ಎಲ್ಲರಿಗೂ ಲಭ್ಯವಾಗಿದೆ. ಒಂದು ವೇಳೆ ನೀವು ಇನ್ನು ಕೂಡ ಈ ಫೀಚರ್ಸ್‌ ಅನ್ನು ಸ್ವೀಕರಿಸದಿದ್ದರೆ ನೀವು Google Play Store ಅಥವಾ App Store ನಲ್ಲಿ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾಗುತ್ತದೆ. ಇನ್ನು ಈ ವಾಯ್ಸ್‌ ಮೆಸೇಜ್‌ ಪ್ಲೇಬ್ಯಾಕ್‌ ವೇಗ ನೀಡುವ ಫೀಚರ್ಸ್‌ ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ಅದರಲ್ಲೂ

ಇದಲ್ಲದೆ ಈ ವರ್ಷ ವಾಟ್ಸಾಪ್‌ಗೆ ಅನೇಕ ಫೀಚರ್ಸ್‌ಗಳನ್ನು ಪರೀಕ್ಷೆ ಮಾಡುತ್ತಿದೆ. ಅದರಲ್ಲೂ ಡಿವೈಸ್‌ನಲ್ಲಿ ಸಕ್ರಿಯ ಇಂಟರ್ನೆಟ್ ಸಂಪರ್ಕವಿಲ್ಲದೆ ನಾಲ್ಕು ಸಾಧನಗಳಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಬಳಸಲು ನಿಮಗೆ ಅನುಮತಿಸುವ ಫೀಚರ್ಸ್‌ ಪರಿಚಯಿಸುವುದಕ್ಕೂ ಮುಂದಾಗಿದೆ. ಇದು ಮುಂದಿನ ಎರಡು ತಿಂಗಳೊಳಗೆ ಸಾರ್ವಜನಿಕ ಬೀಟಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ.

Most Read Articles
Best Mobiles in India

English summary
WhatsApp voice messages: Different playback speeds for voice messages has finally been rolled out. Users can now play voice messages at faster speeds of 1.5x and 2x.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X