ಇನ್ಮುಂದೆ ವಾಟ್ಸಾಪ್‌ ಮೂಲಕವೇ ವೈದ್ಯರನ್ನು ಭೇಟಿ ಮಾಡಬಹುದು?

|

ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಸೇವೆಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಿದೆ. ವಾಟ್ಸಾಪ್‌ ಮೂಲಕ ಟೆಲಿಕನ್ಸಲ್ಟೇಶನ್ ಒದಗಿಸಲು 'CSC ಆರೋಗ್ಯ ಸೇವೆಗಳ ಸಹಾಯವಾಣಿ' ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕವೇ ಇನ್ಮುಂದೆ ನಿಮ್ಮ ವೈದ್ಯರನ್ನು ಬೇಟಿ ಮಾಡಬಹುದಾಗಿದೆ. ನಿಮ್ಮ ಅರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಾಟ್ಸಾಪ್‌ ಪರಿಚಯಿಸಿರುವ ಸಹಾಯವಾಣಿ ಮೂಲಕ ಹಂಚಿಕೊಳ್ಳಬಹುದು. ವಾಟ್ಸಾಪ್‌ ಟೆಲಿಕನ್ಸಲ್ಟೇಶನ್ ಮೂಲಕ ಸೂಕ್ತ ಸಹಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಹೊಸ ಸೇವೆಯು ಉಚಿತವಾಗಿದ್ದು, ಆಸ್ಪತ್ರೆಗಳು ಇರುವ ಸ್ಥಳದಿಂದ ದೂರದ ಪ್ರದೇಶದಲ್ಲಿ ವಾಸಿಸುವ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಸಹಾಯವಾಣಿ ಮೂಲಕ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಪರಿಚಯಿಸಿರುವ ಹೆಲ್ತ್‌ ಹೆಲ್ಪ ಡೆಸ್ಕ್‌ ಮೂಲಕ ಬಳಕೆದಾರರು ವೈದ್ಯರೊಂದಿಗೆ ಸಮಾಲೋಚನೆ ನಡೆಸಬಹುದು. ಅಲ್ಲದೆ ಕೋವಿಡ್ ಸಂಬಂಧಿತ ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾದ್ಯವಾಗಲಿದೆ. ವಾಟ್ಸಾಪ್‌ನಲ್ಲಿನ CSCಯ ಆರೋಗ್ಯ ಸೇವೆಗಳ ಸಹಾಯವಾಣಿಯು ಭಾರತದಲ್ಲಿ ಮೊದಲ ಬಾರಿಗೆ ಟೆಲಿ-ಕನ್ಸಲ್ಟೇಶನ್ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಭಾರತದ ಜನರಿಗೆ ಪ್ರಾಥಮಿಕ ಆರೋಗ್ಯ ರಕ್ಷಣೆಯ ಅಗತ್ಯತೆಗಳ ಸುಲಭ, ಅನುಕೂಲಕರ ಮತ್ತು ವಿಶ್ವಾಸಾರ್ಹ ಮೂಲವಾಗಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ.

ವಾಟ್ಸಾಪ್‌ ಮೂಲಕ ವೈದ್ಯರನ್ನು ಸಂಪರ್ಕಿಸುವುದು ಹೇಗೆ?

ವಾಟ್ಸಾಪ್‌ ಮೂಲಕ ವೈದ್ಯರನ್ನು ಸಂಪರ್ಕಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ CSC ಆರೋಗ್ಯ ಸೇವೆಗಳ ಸಹಾಯವಾಣಿಯನ್ನು ಉಚಿತವಾಗಿ ಬಳಸಬಹುದಾಗಿದೆ. ಇದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. ಈ ಹೆಲ್ಪ್‌ಡೆಸ್ಕ್ ಅನ್ನು ಪ್ರವೇಶಿಸಲು, ಬಳಕೆದಾರರು ವಾಟ್ಸಾಪ್‌ನಲ್ಲಿ +917290055552 ಸಂಖ್ಯೆಗೆ 'ಹಾಯ್' ಎಂದು ಕಳುಹಿಸಬೇಕಾಗುತ್ತದೆ. ನಂತರ ನೀವು ವೈದ್ಯರನ್ನು ಸಂಪರ್ಕಿಸಲು ನಿಮ್ಮ ಆಯ್ಕೆಗಳನ್ನು ಆರಿಸಬೇಕಾಗುತ್ತದೆ. ಇದಕ್ಕಾಗಿ ನೀವು https://wa.me/917290055552/ ಬಳಸಬಹುದಾಗಿದೆ.

ವಾಟ್ಸಾಪ್

ಇನ್ನು ವಾಟ್ಸಾಪ್ ಹೆಲ್ಪ್‌ಡೆಸ್ಕ್ ಬಳಕೆದಾರರಿಗೆ ಸಾಮಾನ್ಯ ಆರೋಗ್ಯ ಮತ್ತು ಕೋವಿಡ್-19 ಗೆ ಸಂಬಂಧಿಸಿದ ನಿರ್ದಿಷ್ಟ ಆರೋಗ್ಯ ಅಗತ್ಯತೆಗಳ ಆಧಾರದ ಮೇಲೆ ಸೂಕ್ತ ವೈದ್ಯರಿಗೆ ಮಾರ್ಗದರ್ಶನ ನೀಡುತ್ತದೆ. ಸದ್ಯ ಈ ಹೆಲ್ಫ ಡೆಸ್ಕ್‌ ಅನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಡಿಜಿಟಲ್ ಒಳಗೊಳ್ಳುವ ಚಾನಲ್‌ಗಳ ಮೂಲಕ ಆರೋಗ್ಯ ಸೇವೆಗಳನ್ನು ತಲುಪಿಸುವ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿದೆ.

ಇಂಡಿಯಾ

ಈ ಸೇವೆಯ ಬಗ್ಗೆ CSC ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್‌ನ ಸಿಇಒ ದಿನೇಶ್ ಕುಮಾರ್ ತ್ಯಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸೇವೆಯು ಗ್ರಾಮೀಣ ನಾಗರಿಕರು ಆರೋಗ್ಯ ಮತ್ತು ಮೂಲಸೌಕರ್ಯ ಸೇವೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯುವುದಕ್ಕೆ ನಾವು ಸಹಾಯ ಮಾಡಲಿದೆ ಎಂದಿದ್ದಾರೆ. CSC ಯ ಟೆಲಿ-ಹೆಲ್ತ್ ಸಮಾಲೋಚನೆಯು ತಳಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಈ ಚಾಟ್‌ಬಾಟ್ ಬಳಸುವುದು ತುಂಬಾ ಸುಲಭವಾಗಿದೆ.

ವಾಟ್ಸಾಪ್

ವಾಟ್ಸಾಪ್ ಭಾರತದಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲರವಾದ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಾಲ್ ಹೇಳಿದ್ದಾರೆ. ವಾಟ್ಸಾಪ್‌ನಲ್ಲಿ ನಾಗರಿಕ ಕೇಂದ್ರಿತ ಸೇವೆಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವಿಶೇಷವಾಗಿ ಆರೋಗ್ಯ ಮತ್ತು ಕೋವಿಡ್ ವಿರುದ್ದದ ಹೋರಾಟದಲ್ಲಿ ಜನರಿಗೆ ಸಹಾಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಈ ಚಾಟ್‌ಬಾಟ್ ಭಾರತದ ಜನರಿಗೆ ಪ್ರಾಥಮಿಕ ಆರೋಗ್ಯ ರಕ್ಷಣೆಯ ಅಗತ್ಯತೆಗಳ ಸುಲಭ, ಅನುಕೂಲಕರ ಮತ್ತು ವಿಶ್ವಾಸಾರ್ಹ ಮೂಲವಾಗಿದೆ ಎಂದು ಹೇಳಬಹುದಾಗಿದೆ. CSC ಯೊಂದಿಗಿನ ನಮ್ಮ ಪಾಲುದಾರಿಕೆಯ ಮೂಲಕ ನಾವು ಆರೋಗ್ಯ ಮತ್ತು ಇತರ ಸೇವೆಗಳನ್ನು ಹೆಚ್ಚು ಡಿಜಿಟಲ್ ಮಾರ್ಗದಲ್ಲಿ ನೀಡಲಿದ್ದೇವೆ ಅನ್ನೊ ಮಾತನ್ನ ವಾಟ್ಸಾಪ್‌ ಹೇಳಿಕೊಂಡಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಬ್‌ ಬುಕ್ಕಿಂಗ್‌ ಸೇವೆಯನ್ನು ಕೂಡ ಪರಿಚಯಿಸಿದೆ. ಇದಕ್ಕಾಗಿ ವಾಟ್ಸಾಪ್‌ ಉಬರ್‌ ಜೊತೆಗೆ ಟೈ ಆಪ್‌ ಮಾಡಿಕೊಂಡಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ ಮೂಲಕವೇ ಉಬರ್‌ ಕ್ಯಾಬ್‌ ಅನ್ನು ಬುಕ್‌ಮಾಡಬಹುದಾಗಿದೆ. ಭಾರತದಲ್ಲಿ ಲಕ್ನೋ ನಗರದಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದ ಇತರ ನಗರ ಪ್ರದೇಶಗಳಿಗೂ ಈ ಸೇವೆ ವಿಸ್ತಾರವಾಗಲಿದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ಮೂಲಕ ಗ್ರಾಹಕರು ಉಬರ್ ಕಾರುಗಳು, ಉಬರ್ ಮೋಟೋ (ಮೋಟಾರ್ ಸೈಕಲ್‌ಗಳು) ಮತ್ತು ಆಟೋಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

Most Read Articles
Best Mobiles in India

English summary
WhatsApp users will be able to consult with doctors using new helpdesk.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X