Just In
Don't Miss
- News
ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ
- Automobiles
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
- Movies
ದಿವ್ಯಾ ಸುರೇಶ್ ಜೊತೆಗಿನ ಲವ್ ಸ್ಟೋರಿಗೆ ಎಳ್ಳು ನೀರು ಬಿಟ್ಟ ಶಮಂತ್!
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Finance
ಚಿನ್ನದ ಬೆಲೆ ಏರಿಕೆ: ಮಾರ್ಚ್ 08ರ ಬೆಲೆ ಹೀಗಿದೆ
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೆಬ್ ಆವೃತ್ತಿಯಲ್ಲಿ ಬಯೋಮೆಟ್ರಿಕ್ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್!
ಜನಪ್ರಿಯ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್ಗಳನ್ನು ಪರಿಚಯಿಸಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್ ಪರಿಚಯಿಸುವ ವಾಟ್ಸಾಪ್ ಇದೀಗ ವಾಟ್ಸಾಪ್ ವೆಬ್ ಮತ್ತು ಡೆಸ್ಕ್ಟಾಪ್ಗಾಗಿ ಹೊಸ ಭದ್ರತಾ ಫೀಚರ್ಸ್ ಅನ್ನು ಹೊರತರುತ್ತಿದೆ. ಇದು ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಿಕೊಂಡು ವಾಟ್ಸಾಪ್ ಖಾತೆಯನ್ನು ಪಿಸಿ ಅಥವಾ ವೆಬ್ಗೆ ಲಿಂಕ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಬಯೋಮೇಟ್ರಿಕ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರ ಸ್ಮಾರ್ಟ್ಫೋನ್ನಲ್ಲಿ ಸಂಗ್ರಹವಾಗಿರುವ ಬಯೋಮೆಟ್ರಿಕ್ ದೃಡೀಕರಣವನ್ನು ಬಳಸುತ್ತದೆ. ಈ ಮೂಲಕ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ಗೆ ಲಿಂಕ್ ಮಾಡುವ ಮೂಲಕ ಡೆಸ್ಕ್ಟಾಪ್ ಅಥವಾ ವೆಬ್ನಲ್ಲಿ ವಾಟ್ಸಾಪ್ ಅನ್ನು ಬಳಸಲು ಫಿಂಗರ್ಪ್ರಿಂಟ್ ಅಥವಾ ಫೇಸ್ ಐಡೆಂಟಿಟಿಯನ್ನು ಸೇರಿಸಲು ಸಾಧ್ಯವಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಕ್ಯೂಆರ್ ಕೋಡ್ ದೃಡೀಕರಣದ ಜೊತೆಗೆ ಗೌಪ್ಯತೆ ಫೀಚರ್ಸ್ ಅನ್ನು ಬಳಸಲಾಗುತ್ತದೆ. ಇನ್ನುಳಿದಂತೆ ಈ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಬಯೋಮೆಟ್ರಿಕ್ ಫೀಚರ್ಸ್ ಅನ್ನು ಬಳಸುವವರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಬಯೋಮೆಟ್ರಿಕ್ ದೃಡೀಕರಣವನ್ನು ಸಕ್ರಿಯಗೊಳಿಸಬೇಕು. ಒಂದು ವೇಳೆ ಸಕ್ರಿಯಗೊಳಿಸದವರು ವೆಬ್ ಆವೃತ್ತಿಗೆ ಈ ಹೊಸ ಫೀಚರ್ಸ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಬಳಕೆದಾರರ ಡಿವೈಸ್ ಆಪರೇಟಿಂಗ್ ಸಿಸ್ಟಮ್ ಸಂಗ್ರಹಿಸಿರುವ ಬಯೋಮೆಟ್ರಿಕ್ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಸ್ಪಷ್ಟಪಡಿಸಿದೆ. ಟಚ್ ಐಡಿ ಅಥವಾ ಫೇಸ್ ಐಡಿಯೊಂದಿಗೆ ಐಒಎಸ್ 14 ಮತ್ತು ಅದಕ್ಕಿಂತ ಹೆಚ್ಚಿನ ಚಾಲನೆಯಲ್ಲಿರುವ ಐಫೋನ್ ಡಿವೈಸ್ಗಳಲ್ಲಿ ಈ ಫೀಚರ್ಸ್ ಕಾರ್ಯನಿರ್ವಹಿಸುತ್ತದೆ.

ಆದರೆ, ಆಂಡ್ರಾಯ್ಡ್ನಲ್ಲಿ, ಇದು ಬಯೋಮೆಟ್ರಿಕ್ ದೃಡೀಕರಣಕ್ಕೆ ಹೊಂದಿಕೆಯಾಗುವ ಯಾವುದೇ ಡಿವೈಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ವಾಟ್ಸಾಪ್ ವೆಬ್ ಮತ್ತು ಡೆಸ್ಕ್ಟಾಪ್ಗಾಗಿ ಡಿವೈಸ್ಗಳನ್ನು ಲಿಂಕ್ ಮಾಡುವಾಗ ಫೇಸ್ ಮತ್ತು ಫಿಂಗರ್ಪ್ರಿಂಟ್ ಅನ್ಲಾಕ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಹಂತ: 1 ಸ್ಮಾರ್ಟ್ಫೋನ್ ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಾಟ್ಸಾಪ್ ವೆಬ್, ವಾಟ್ಸಾಪ್ ಡೆಸ್ಕ್ಟಾಪ್ ಅಥವಾ ಪೋರ್ಟಲ್ನಲ್ಲಿ ವಾಟ್ಸಾಪ್ಗೆ ಲಾಗ್ ಇನ್ ಮಾಡಿ.
ಹಂತ:2 ನಂತರ ನಿಮ್ಮ ಫೋನ್ನಲ್ಲಿ ವಾಟ್ಸಾಪ್ ತೆರೆಯಿರಿ.
ಹಂತ:3 ಇದರಲ್ಲಿ ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ
ಹಂತ:4 ನಂತರ ವಾಟ್ಸಾಪ್ ವೆಬ್ ಅಥವಾ ವಾಟ್ಸಾಪ್ ವೆಬ್ / ಡೆಸ್ಕ್ಟಾಪ್ ಟ್ಯಾಪ್ ಮಾಡಿ.
ಹಂತ:5 ಇನ್ನು ಆಂಡ್ರಾಯ್ಡ್ ಬಳಕೆದಾರರು ಡಿವೈಸ್ ಅನ್ನು ಲಿಂಕ್ ಮಾಡಿ ಮತ್ತು ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ದೃಡೀಕರಣವನ್ನು ಸಕ್ರಿಯಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಇನ್ನು ಐಫೋನ್ ಬಳಕೆದಾರರು ಟ್ಯಾಪ್ ಲಿಂಕ್ ಎ ಡಿವೈಸ್>Ok ಕ್ಲಿಕ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ, ಅನ್ಲಾಕ್ ಮಾಡಲು ಟಚ್ ಐಡಿ ಅಥವಾ ಫೇಸ್ ಐಡಿಯನ್ನು ಸಕ್ರಿಯಗೊಳಿಸಬೇಕಾಗಿದೆ. ಈ ಡಿವೈಸ್ಲ್ಲಿ ಲಾಗಿನ್ ಆಗಲು ನಿಮ್ಮ ಕಂಪ್ಯೂಟರ್ ಅಥವಾ ಪೋರ್ಟಲ್ನಲ್ಲಿನ ಕ್ಯೂಆರ್ ಸ್ಕ್ರೀನ್ನಲ್ಲಿ ಯೂವರ್ಸ್ ಸೈನ್ ಇನ್ ಮಾಡಿ. ನಂತರ ನಿಮ್ಮ ಕಂಪ್ಯೂಟರ್ ಅಥವಾ ಪೋರ್ಟಲ್ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮ ಫೋನ್ ಬಳಸಿ.ಪ್ರಾಂಪ್ಟ್ ಮಾಡಿದರೆ, ಮುಗಿದಿದೆ ಆಯ್ಕೆಮಾಡಿ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190