ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್; ಬಳಕೆದಾರರಿಗೆ ಸಿಗಲಿದೆ ಭರ್ಜರಿ ಕ್ಯಾಶ್‌ಬ್ಯಾಕ್‌!

|

ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್ ವಾಟ್ಸಾಪ್‌ ಇತ್ತೀಚಿಗೆ ವಾಟ್ಸಾಪ್‌ ಪೇಮೆಂಟ್‌ ಫೀಚರ್ ಪರಿಚಯಿಸಿ ಗೂಗಲ್‌ ಪೇ, ಫೋನ್‌ಪೇಗಳಿಗೆ ಶಾಕ್ ನಿಡಿದೆ. ಅದರ ಬೆನ್ನಲ್ಲೇ ವಾಟ್ಸಾಪ್‌ನಲ್ಲಿ ಹಣವನ್ನು ಕಳುಹಿಸುವಾಗ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸುವ ಆಯ್ಕೆಯನ್ನು ಪರಿಚಯಿಸಿದೆ. ಇದಲ್ಲದೇ ಗ್ರಾಹಕರನ್ನು ಸೆಳೆಯಲು ಈಗ ಮತ್ತೊಂದು ಕುತೂಹಲಕಾರಿ ಫೀಚರ್‌ ಅನ್ನು ವಾಟ್ಸಾಪ್‌ ಅಳವಡಿಸಿದೆ. ಅದು ಏನೆಂದು ತಿಳಿದರೇ ಹಣ ವರ್ಗಾವಣೆ ಮಾಡಲು ನೀವಿನ್ನು ವಾಟ್ಸಾಪ್ ಪೇ ಬಳಕೆ ಮಾಡಲು ಮುಂದಾಗುತ್ತಿರಿ.

WABetaInfo

ಹೌದು, ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್‌ನ ಈಗ ಯುಪಿಐ ಪೇಮೆಂಟ್‌ನಲ್ಲಿ ಕ್ಯಾಶ್‌ಬ್ಯಾಕ್‌ ಕೂಪನ್‌ ನೀಡಲಿದೆ. ವಾಟ್ಸಾಪ್ ಟ್ರ್ಯಾಕರ್ WABetaInfo ಪ್ರಕಾರ, ವಾಟ್ಸಾಪ್‌ ಆಪ್ ಶೀಘ್ರದಲ್ಲೇ ವಾಟ್ಸಾಪ್‌ ಮೂಲಕ ಮಾಡಿದ UPI ಪೇಮೆಂಟ್‌ಗಳಿಗೆ ಕ್ಯಾಶ್‌ಬ್ಯಾಕ್ ನೀಡುವುದು. 'ವಾಟ್ಸಾಪ್‌ ಪೇ' ಯ ಈ ಹೊಸ ಸೇವೆಯು ಪ್ರಬಲ ಪ್ರತಿಸ್ಫರ್ಧಿ ಎನಿಸಿಕೊಂಡಿರುವ ಗೂಗಲ್‌ ಪೇ ಆಪ್‌ನ ಪಾವತಿ ಸೇವೆಗಳನ್ನು ಅನುಕರಿಸಿದಂತೆ ಕಾಣಿಸುತ್ತದೆ.

ಸಂಗತಿಯೆಂದರೇ

ಇನ್ನು ವಾಟ್ಸಾಪ್‌ನ ಈ ಹೊಸ ಫೀಚರ್ ಅಭಿವೃದ್ಧಿ ಹಂತದಲ್ಲಿದ್ದು, ಎಲ್ಲಾ ಬಳಕೆದಾರರಿಗೆ ಲಭ್ಯವಾಗದಿರಬಹುದು ಎಂದು ಹೇಳಲಾಗಿದೆ. ಹಾಗೆಯೇ ಮುಂಬರುವ ಈ ಫೀಚರ್‌ಗೆ ಸಂಬಂಧಿಸಿದಂತೆ ಸಂಸ್ಥೆಯು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಕುತೂಹಲಕಾರಿ ಸಂಗತಿಯೆಂದರೇ 10ರೂ ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ಪಾವತಿಯು ಕ್ಯಾಶ್‌ಬ್ಯಾಕ್ ಪಡೆಯಲು ಅರ್ಹವಾಗಿರುತ್ತದೆ. ಅಂದಹಾಗೇ ಈ ಕ್ಯಾಶ್‌ಬ್ಯಾಕ್ ಫೀಚರ್ ಭಾರತದ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.

ಇತ್ತೀಚಿಗಷ್ಟೆ

ವಾಟ್ಸಾಪ್‌ನ ಬಹುನಿರೀಕ್ಷಿತ ವಾಟ್ಸಾಪ್ ಪೇ ಸೇವೆಯು 2018 ರಲ್ಲಿ ಆರಂಭವಾಗಿತು. ಆದರೆ ಈ ಫೀಚರ್ ಕೆಲವು ವರ್ಷಗಳವರೆಗೆ ಬೀಟಾದಲ್ಲಿ ಉಳಿಯಿತು. ಬಳಿಕ ವಾಟ್ಸಾಪ್ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದುಕೊಂಡು ಎಲ್ಲ ಬಳಕೆದಾರರಿಗೆ ಲಭ್ಯವಾಗುವಂತೆ ಮುಕ್ತವಾಯಿತು. ಆದರೆ ಭಾರತದಲ್ಲಿ ವಾಟ್ಸಾಪ್ ಪೇ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡುವಲ್ಲಿ ಹಿನ್ನಡೆ ಕಂಡಿದೆ. ಇನ್ನು ವಾಟ್ಸಾಪ್‌ ಇತ್ತೀಚಿಗಷ್ಟೆ ಭಾರತೀಯ ಬಳಕೆದಾರರಿಗಾಗಿ ಪರಿಚಯಿಸಿರುವ ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸುವ ಆಯ್ಕೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸುವ ಆಯ್ಕೆ

ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸುವ ಆಯ್ಕೆ

ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್‌ನ ಹೊಸ ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸುವ ಆಯ್ಕೆಯು ಜನರ ಭಾವನೆಯನ್ನು ತಿಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ಹಣ ವರ್ಗಾವಣೆ ಮಾಡುವಾಗ ಆ ಹಣ ಯಾವುದಕ್ಕಾಗಿ ವರ್ಗಾವಣೆ ಮಾಡಲಾಗುತ್ತಿದೆ ಎನ್ನುವುದನ್ನು ಹೊಸ ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸುವ ಮೂಲಕ ತಿಳಿಸಬಹುದಾಗಿದೆ.

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಈ ಕ್ರಮ ಫಾಲೋ ಮಾಡಿರಿ:

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಈ ಕ್ರಮ ಫಾಲೋ ಮಾಡಿರಿ:

* ನೀವು ಹಣವನ್ನು ಕಳುಹಿಸಲು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ.
* ನೀವು ಸಂಪರ್ಕಕ್ಕೆ ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ
* ಹಿನ್ನೆಲೆ (background icon) ಐಕಾನ್ ಮೇಲೆ ಟ್ಯಾಪ್ ಮಾಡಿ
* ಲಭ್ಯವಿರುವ ಆಯ್ಕೆಗಳ ಮೂಲಕ ಸ್ಕ್ರಾಲ್ ಮಾಡಿ ಮತ್ತು ನೀವು ಬಳಸಲು ಬಯಸುವ ಹಿನ್ನೆಲೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಪಾವತಿ ಸಂದೇಶಕ್ಕೆ ಹಿಂತಿರುಗಲು, ಪಾವತಿ ಮೊತ್ತವನ್ನು ಟ್ಯಾಪ್ ಮಾಡಿ ಅಥವಾ ಹಿನ್ನೆಲೆ ಆಯ್ಕೆಗಳನ್ನು ವಜಾಗೊಳಿಸಲು X ಅನ್ನು ಟ್ಯಾಪ್ ಮಾಡಿ.

ಪರಿಣಾಮ

ನೀವು ಹಿನ್ನೆಲೆ/ಪೇಮೆಂಟ್ ಬ್ಯಾಕ್‌ಗ್ರೌಂಡ್‌ ಸೇರಿಸಿದ ನಂತರವೂ ನೀವು ಮೊತ್ತವನ್ನು ಬದಲಾಯಿಸಬಹುದು ಅಥವಾ ವಿವರಣೆಯನ್ನು ನಮೂದಿಸಬಹುದು. ಹಿನ್ನೆಲೆ ಸೇರಿಸುವುದರಿಂದ ನಿಮ್ಮ ಚಾಟ್ ಮೇಲೆ ಪರಿಣಾಮ ಬೀರುವುದಿಲ್ಲ.

ವಾಟ್ಸಾಪ್‌ ವಿಡಿಯೋ ಕರೆಯ ಬಗ್ಗೆ ಈ ಸಂಗತಿಗಳು ನಿಮಗೆ ಗೊತ್ತಿರಲಿ!

ವಾಟ್ಸಾಪ್‌ ವಿಡಿಯೋ ಕರೆಯ ಬಗ್ಗೆ ಈ ಸಂಗತಿಗಳು ನಿಮಗೆ ಗೊತ್ತಿರಲಿ!

* ವಾಟ್ಸಾಪ್ ಬಳಕೆದಾರರು ಈಗಾಗಲೇ ಕರೆಯಲ್ಲಿದ್ದಾರೆ, ಮತ್ತು ಯಾರು ಆಹ್ವಾನಿತರಾಗಿದ್ದಾರೆ ಆದರೆ ಇನ್ನೂ ಸೇರಿಕೊಂಡಿಲ್ಲ ಎಂದು ನೋಡಲು ಕರೆ ಮಾಹಿತಿ ಪರದೆಯನ್ನು ರಚಿಸಿದ್ದಾರೆ.

* ವಾಟ್ಸಾಪ್‌ನಲ್ಲಿನ ವೀಡಿಯೊ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ. ಇದರರ್ಥ ಭಾಗವಹಿಸುವವರು ವೀಡಿಯೊ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಹೌದು, ವೀಡಿಯೊ ಕರೆಯಲ್ಲಿ ಭಾಗವಹಿಸುವವರ ಸ್ಕ್ರೀನ್‌ಶಾಟ್‌ಗಳನ್ನು ನೀವು ತೆಗೆದುಕೊಳ್ಳಬಹುದು. ಯಾವುದೇ ಅಧಿಸೂಚನೆ ಎಚ್ಚರಿಕೆ ಇರುವುದಿಲ್ಲ.
* ಬಳಕೆದಾರರು ಕರೆಯನ್ನು ಕೈಬಿಟ್ಟು ನಂತರ ಕರೆಯನ್ನು ಡ್ರಾಪ್-ಆಫ್ ಮಾಡಬಹುದು ಮತ್ತು ಮತ್ತೆ ಸೇರಬಹುದು.

Most Read Articles
Best Mobiles in India

English summary
Whatsapp Will Introduce Cashback Coupons On UPI Payments.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X