ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ಕೊಟ್ಟ ವಾಟ್ಸಾಪ್‌!

|

ಮೆಟಾ ಒಡೆತನದ ವಾಟ್ಸಾಪ್‌ ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಐಫೋನ್‌ ಬಳಕೆದಾರರು ಶೀಘ್ರದಲ್ಲೇ ತಮ್ಮ iOS ಅಪ್ಡೇಟ್‌ ಮಾಡಿಕೊಳ್ಳದಿದ್ದರೆ ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್‌ ವರ್ಕ್‌ ಮಾಡುವುದನ್ನು ನಿಲ್ಲಿಸಲಿದೆ. ಅಂದರೆ ವಾಟ್ಸಾಪ್‌ iOS 10 ಮತ್ತು iOS 11 ಚಾಲನೆಯಲ್ಲಿರುವ ಐಫೋನ್‌ನಲ್ಲಿ ತನ್ನ ಕಾರ್ಯನಿರ್ವಹಿಸುವುದನ್ನು ಸ್ಟಾಪ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಐಫೋನ್‌ iOS 10 ಮತ್ತು iOS 11 ಚಾಲನೆಯಲ್ಲಿರುವ ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಕಳುಹಿಸಲು ಪ್ರಾರಂಭಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ iOS 10 ಮತ್ತು iOS 11 ಚಾಲನೆಯಲ್ಲಿರುವ ವಾಟ್ಸಾಪ್‌ನಲ್ಲಿ ತನ್ನ ಕಾರ್ಯವನ್ನು ನಿಲ್ಲಿಸಲು ಮುಂದಾಗಿದೆ. ಸದ್ಯ ವಾಟ್ಸಾಪ್‌ ಅಪ್ಲಿಕೇಶನ್ ಈ ವರ್ಷದ ನಂತರ ಅವರ OS ಅನ್ನು ಬೆಂಬಲಿಸುವುದನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ. ಆದರಿಂದ ಐಫೋನ್‌ ಬಳಕೆದಾರರು ಹೊಸ iOS ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸೂಕ್ತವಾಗಿದೆ. ಹಾಗಾದ್ರೆ ವಾಟ್ಸಾಪ್‌ ಐಫೋನ್‌ನ ಯಾವ ಒಎಸ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಅನ್ನೊದನ್ನ ವಿವರವಾಗಿ ತಿಳಿದುಕೊಳ್ಳೋಣ ಬನ್ನಿರಿ.

ವಾಟ್ಸಾಪ್‌

ವಾಟ್ಸಾಪ್‌ ಇದೇ ಅಕ್ಟೋಬರ್ 24, 2022 ರ ನಂತರ iOSನ ಹಳೆಯ ಆವೃತ್ತಿಯನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ಆದರಿಂದ ಐಫೋನ್‌ ಬಳಕೆದಾರರು ಸೆಟ್ಟಿಂಗ್‌ಗಳು > ಜನರಲ್‌ಗೆ ಹೋಗಿ, ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್ಡೇಟ್‌ ಟ್ಯಾಪ್ ಮಾಡಿ, ಎಂದು ವಾಟ್ಸಾಪ್‌ ಹಳೆಯ iOS ಆವೃತ್ತಿಯನ್ನು ಚಾಲನೆ ಮಾಡುತ್ತಿರುವ ಐಫೋನ್‌ ಬಳಕೆದಾರರಿಗೆ ಸಂದೇಶವನ್ನು ಕಳುಹಿಸುತ್ತಿದೆ. iOS 12 ಮತ್ತು ಹೊಸ iOS ಆವೃತ್ತಿಯನ್ನು ಬಳಸಲು ಶಿಫಾರಸು ಮಾಡುವ ವಾಟ್ಸಾಪ್‌ ಸಪೋರ್ಟ್‌ ಪೇಜ್‌ನಿಂದ ಈ ವರದಿಯನ್ನು ದೃಢೀಕರಿಸಲಾಗಿದೆ.

ಐಫೋನ್‌

ಒಂದು ವೇಳೆ ನೀವು ಕೂಡ iOS 10 ಅಥವಾ iOS 11 ಚಾಲನೆಯಲ್ಲಿರುವ ಐಫೋನ್‌ ಅನ್ನು ಬಳಸುತ್ತಿದ್ದರೆ ಶೀಘ್ರದಲ್ಲೇ ವಾಟ್ಸಾಪ್‌ ನಿಮ್ಮ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಆದರಿಂದ ನೀವು ವಾಟ್ಸಾಪ್‌ ಬಳಸುವುದನ್ನು ಮುಂದುವರಿಸಲು iOS 12 ಅಥವಾ iOS 15.5 ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಇದು ಪ್ರಸ್ತುತ ಲಭ್ಯವಿರುವ iOS ನ ಇತ್ತೀಚಿನ ಆವೃತ್ತಿಯಾಗಿದೆ. ಅಂದರೆ ಐಫೋನ್‌ 5s, ಐಫೋನ್‌ 6 ಅಥವಾ ಐಫೋನ್‌ 6S ಅನ್ನು ಬಳಸುತ್ತಿರುವವರು iOS 12 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಆದರೆ ಐಫೋನ್‌ 5 ಮತ್ತು ಐಫೋನ್‌ 5C ಬಳಕೆದಾರರು ಅಪ್ಡೇಟ್‌ ಮಾಡಲು ಸಾಧ್ಯವಿಲ್ಲವಾದರಿಂದ ಹೊಸ ಡಿವೈಸ್‌ಗೆ ಬದಲಾಯಿಸಬೇಕಾಗುತ್ತದೆ.

ಆವೃತ್ತಿ

ಇನ್ನು ಆಪಲ್ ಕಂಪೆನಿ ತನ್ನ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2022 ಅನ್ನು ಪ್ರಾರಂಭಿಸುವ ಕೆಲವೇ ದಿನಗಳ ಮೊದಲು ಈ ಸುದ್ದಿ ಹೊರಬಂದಿದೆ. ಆದರಿಂದ ಆಪಲ್‌ ಕಂಪನಿಯು iOS 16, iPadOS 16, macOS 13, tvOS16, watchOS 9 ಸೇರಿದಂತೆ ತನ್ನ ಆಪರೇಟಿಂಗ್ ಸಿಸ್ಟಮ್‌ಗಳ ಹೊಸ ಆವೃತ್ತಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಗ್ರೂಪ್‌ಗಳಲ್ಲಿ ಅನುಕೂಲವಾಗುವಂತಹ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ವಾಟ್ಸಾಪ್‌ ಗ್ರೂಪ್‌ನಿಂದ ನೀವು ಎಕ್ಸಿಟ್‌ ಆದರೆ ಇನ್ಮುಂದೆ ಯಾರಿಗೂ ತಿಳಿಯದಂತೆ ಮಾಡುವುದಕ್ಕೆ ಈ ಫೀಚರ್ಸ್‌ ಸಹಾಯ ಮಾಡಲಿದೆ. ಈ ಫೀಚರ್ಸ್‌ ಮೂಲಕ ವಾಟ್ಸಾಪ್‌ ಗ್ರೂಪ್‌ನಿಂದ ಸೈಲೆಂಟ್‌ ಆಗಿ ಎಕ್ಸಿಟ್‌ ಆಗುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ "ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್" ಎಂಬ ಹೊಸ ಫೀಚರ್ಸ್‌ ಅಭಿವೃದ್ದಿಪಡಿಸುತ್ತಿದೆ. ಇದರಿಂದ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹಿಂದೆ ಯಾರೆಲ್ಲಾ ಇದ್ದರೂ ಅನ್ನೊದನ್ನ ವೀಕ್ಷಿಸಲು ಅನುಮತಿಸುತ್ತದೆ.

Most Read Articles
Best Mobiles in India

English summary
WhatsApp will stop support for iOS 10, iOS 11 after 24 Oct 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X