WhatsApp: ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದ ವಾಟ್ಸಾಪ್‌!

|

ಕೆಲವು ದಿನಗಳಿಂದ ವಾಟ್ಸಾಪ್‌ ಹೊಸ ಸೇವಾ ನಿಯಮ ಹಾಗೂ ಭಾರತ ಸರ್ಕಾರ ಹೊಸ ಐಟಿ ನಿಯಮದ ಕಾರಣಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿದೆ. ಹೊಸ ಐಟಿ ನಿಯಮ ಪಾಲನೆ ವಿಚಾರದಲ್ಲಿ ಸರ್ಕಾರದ ನಡುವೆ ಜಟಾಪಟಿ ನಡೆಸುತ್ತಿರುವ ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆ ಎನ್ನುವ ವರದಿ ಕೂಡ ಇದೆ. ಇದರ ನಡುವೆ ಹೊಸ ಸೇವಾ ನಿಯಮವನ್ನು ಸ್ವೀಕರಿಸದ ಬಳಕೆದಾರರು ಕೆಲವು ವಿಶೇಷ ಫೀಚರ್ಸ್‌ಗಳನ್ನು ಕಾಲಾನುಕ್ರಮದಲ್ಲಿ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ವಾಟ್ಸಾಪ್‌‌ ಇದನ್ನು ಇದೀಗ ನಿರಾಕರಿಸಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ತನ್ನ ಹೊಸ ಸೇವಾ ನಿಯಮದ ಕಾರಣದಿಂದಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ. ಬಳಕೆದಾರರ ನೆಚ್ಚಿನ ಮಸೇಜಿಂಗ್‌ ಅಪ್ಲಿಕೇಶನ್‌ ಆಗಿರುವ ವಾಟ್ಸಾಪ್‌ ಸುಖಾ ಸುಮ್ಮನೇ ಹೊಸ ನಿಯಮ ತರಲು ಹೋಗಿ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿರೊದಂತೂ ಸುಳ್ಳಲ್ಲ. ಈಗಾಗಲೇ ಹೊಸ ಸೇವಾ ನಿಯಮ ಸ್ವೀಕರಿಸುವ ಗಡುವು ಮುಗಿದಿದೆ. ಇದನ್ನು ಸ್ವೀಕರಿಸಿದ ಬಳಕೆದಾರರು ಮುಂದಿನ ದಿನಗಳಲ್ಲಿ ಹಲವು ಸೇವೆಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನುವ ಭೀತಿ ಇತ್ತು. ಆದರೆ ಇದೆಲ್ಲದಕ್ಕೂ ವಾಟ್ಸಾಪ್‌ ಇದೀಗ ಫುಲ್‌ ಸ್ಟಾಪ್‌ ಇಟ್ಟಿದೆ. ಹಾಗಾದ್ರೆ ವಾಟ್ಸಾಪ್‌ ಹೇಳಿರೋದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನ 2021ರ ಹೊಸ ಗೌಪ್ಯತೆ ನೀತಿಯನ್ನು ಇನ್ನೂ ಸ್ವೀಕರಿಸದವರು ಯಾವುದೇ ಫೀಚರ್ಸ್‌ಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ವಿವಿಧ ಅಧಿಕಾರಿಗಳು ಮತ್ತು ಗೌಪ್ಯತೆ ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಹೊಸ ಅಪ್ಡೇಟ್‌ ಅನ್ನು ಸ್ವೀಕರಿಸದವರಿಗೆ ವಾಟ್ಸಾಪ್‌ನ ಯಾವುದೇ ಫೀಚರ್ಸ್‌ಗಳನ್ನು ಮಿತಿಗೊಳಿಸುವುದು ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ ಎಂದು ವಾಟ್ಸಾಪ್ ವಕ್ತಾರರು ಹೇಳಿದ್ದಾರೆ.

ಗೌಪ್ಯತೆ

ಹೊಸ ಗೌಪ್ಯತೆ ನೀತಿ ಅಪ್ಡೇಟ್‌ ಅನ್ನು ನೋಡಿದ ಹೆಚ್ಚಿನ ಬಳಕೆದಾರರು ಇದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ವಾಟ್ಸಾಪ್ ದೃಡಪಡಿಸಿದೆ. ಇದಲ್ಲದೆ, ನೀತಿಯನ್ನು ಇನ್ನೂ ಸ್ವೀಕರಿಸದವರು ನೋಟಿಫಿಕೇಶನ್‌ಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ನಾವು ವಾಟ್ಸಾಪ್‌ನಲ್ಲಿ ನೋಟಿಫಿಕೇಶನ್‌ ಪ್ರದರ್ಶಿಸುವುದನ್ನು ಮುಂದುವರಿಸುತ್ತೇವೆ. ಅಪ್ಡೇಟ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ. ವಿಮರ್ಶೆ ಮತ್ತು ಸ್ವೀಕರಿಸಲು ಅವಕಾಶವಿಲ್ಲದವರಿಗೆ ನೆನಪಿಸುತ್ತೇವೆ ಎಂದು ಹೇಳಿದೆ. ಈ ಜ್ಞಾಪನೆಗಳು ನಿರಂತರವಾಗಿರಲು ಮತ್ತು ಅಪ್ಲಿಕೇಶನ್‌ನ ಕಾರ್ಯವನ್ನು ಮಿತಿಗೊಳಿಸಲು ನಮ್ಮಲ್ಲಿ ಪ್ರಸ್ತುತ ಯಾವುದೇ ಯೋಜನೆಗಳಿಲ್ಲ ಎಂದು ವಾಟ್ಸಾಪ್ ಹೇಳಿದೆ.

ವಾಟ್ಸಾಪ್

ಈ ಹೊಸ ನೀತಿಯು ನೀವು ಬ್ಯುಸಿನೆಸ್‌ ವಾಟ್ಸಾಪ್ ಮೂಲಕ ಕಳುಹಿಸಿದ ಸಂದೇಶಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗುವುದು. ಇದರ ಅರ್ಥವೇನೆಂದರೆ, ವಾಟ್ಸಾಪ್‌ನಲ್ಲಿ ವ್ಯವಹಾರವನ್ನು ಸಂದೇಶ ಕಳುಹಿಸುವುದು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಒಬ್ಬರಿಗೊಬ್ಬರು ಚಾಟ್ ಮಾಡುವಂತಿಲ್ಲ. ವೈಯಕ್ತಿಕ ಚಾಟ್‌ಗಳು ಖಾಸಗಿಯಾಗಿ ಉಳಿಯುತ್ತವೆ ಮತ್ತು ಪ್ಲಾಟ್‌ಫಾರ್ಮ್ ಎಂಡ್‌ ಟು ಎನ್‌ಕ್ರಿಪ್ಟ್ ಆಗಿರುವುದರಿಂದ ಮೂರನೇ ವ್ಯಕ್ತಿ ಪ್ರವೇಶಿಸಲಾಗುವುದಿಲ್ಲ ಎಂದು ಹೇಳಿದೆ. ನೀವು ಹೊಸ ಅಪ್ಡೇಟ್‌ ಅನ್ನು ಸ್ವೀಕರಿಸದಿದ್ದರೆ ಅದು ನಿಮ್ಮ ಖಾತೆಯನ್ನು ಅಳಿಸುವುದಿಲ್ಲ ಎಂದು ವಾಟ್ಸಾಪ್ ಸ್ಪಷ್ಟವಾಗಿ ಉಲ್ಲೇಖಿಸಿದೆ.

Most Read Articles
Best Mobiles in India

English summary
Now, those who still haven't accepted the 2021 privacy policy can continue to use the messaging app without losing any functionality.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X