ಮತ್ತೊಂದು ಆಕರ್ಷಕ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ಜಾಗತಿಕವಾಗಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿಯು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಅಳವಡಿಸಿದೆ. ಹಾಗೆಯೇ ಕಾಲಕಾಲಕ್ಕೆ ಅನುಗುಣವಾಗಿ ಅಪ್ಲಿಕೇಶನ್‌ ಆಪ್ಡೇಟ್‌ ಅನ್ನು ಸಹ ಮಾಡುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿ ಹೊಸ ಬೀಟಾ ಆಪ್ಡೇಟ್‌ ಅನ್ನು ಹೊರತಂದಿದೆ. ಇದು 'Always mute' ನಂತಹ ಹೊಸ ಫಿಚರ್ಸ್‌ ಅನ್ನು ಒಳಗೊಂಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬೀಟಾ ವರ್ಷನ್‌ನಲ್ಲಿ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ವಾಟ್ಸಾಪ್ ನ ನ್ಯೂ ಆಪ್ಡೇಟ್‌ ವರ್ಷನ್‌ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸದ್ಯ ಈ ಆಪ್ಡೇಟ್‌ವರ್ಷನ್‌ನಲ್ಲಿ ಪರಿಶೀಲಿಸಿದ ಕರೆಗಳು, Always mute ನಂತಹ ಫಿಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಆಪ್ಡೇಟ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ಸದ್ಯ ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಚಾಟ್‌ ಅನ್ನು ಸದಾಕಾಲ ಮ್ಯೂಟ್‌ ಮಾಡುವ ಅವಕಾಶವನ್ನು ಕಲ್ಪಿಸಿದೆ. ಪ್ರಸ್ತುತ ಯಾವುದೇ ಒಂದು ಚಾಟ್‌ ಅನ್ನು 1 ವರ್ಷದವರೆಗೂ ಮಾತ್ರ ಮ್ಯೂಟ್ ಮಾಡುವ ಆಯ್ಕೆಯನ್ನು ನೀಡಿತ್ತು. ಇದೀಗ ಇದನ್ನು ಬದಲಾಯಿಸಲು ವಾಟ್ಸಾಪ್‌ ಮುಂದಾಗಿದ್ದು, ಅಂತಿಮವಾಗಿ ತನ್ನ ಆಂಡ್ರಾಯ್ಡ್ ಬೀಟಾ ಅಪ್ಲಿಕೇಶನ್‌ನಲ್ಲಿ Always mute ಅನ್ನು ಸಕ್ರಿಯಗೊಳಿಸಿದೆ. ಇನ್ನು ಈಗ ಬಳಕೆದಾರರು ಪಟ್ಟಿಯಿಂದ ‘ಯಾವಾಗಲೂ' ಆಯ್ಕೆಯನ್ನು ಆರಿಸುವ ಮೂಲಕ ಚಾಟ್‌ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದು.

ವಾಟ್ಸಾಪ್

ಇನ್ನು ವಾಟ್ಸಾಪ್‌ನಲ್ಲಿ ಲಭ್ಯವಿರುವ ಚಾಟ್‌ ಮ್ಯೂಟ್‌ ಆಯ್ಕೆಗಳಲ್ಲಿ ಎರಡು ಮ್ಯೂಟ್ ಟೈಮ್‌ಲೈನ್‌ಗಳು ಲಭ್ಯವಿದ್ದು, ಇವು 8 ಗಂಟೆ 1 ವಾರವನ್ನು ಒಳಗೊಂಡಿವೆ. ಇದಲ್ಲದೆ ವಾಟ್ಸಾಪ್‌ ಪರಿಚಯಿಸಿರುವ ಫೀಚರ್ಸ್‌ಗಳಲ್ಲಿ ಪರಿಶೀಲಿಸಿದ ಕರೆಗಳ ಫಿಚರ್ಸ್‌ ಅನ್ನು ಸಹ ಪರಿಚಯಿಸಿದೆ. ಇದರಿಂದ ಇನ್ಮುಂದೆ ಸಂಪರ್ಕಗಳಿಗಾಗಿ ಧ್ವನಿ ಮತ್ತು ವೀಡಿಯೊ ಕರೆ ಬಟನ್‌ಗಳು ಲಭ್ಯವಾಗುವುದಿಲ್ಲ.

ವಾಟ್ಸಾಪ್‌

ಸದ್ಯ ಈ ವಾಟ್ಸಾಪ್‌ ಆಪ್ಡೇಟ್‌ ತನ್ನ ಬಳಕೆದಾರರಿಗೆ ಹೊಸ ಸಂಗ್ರಹ UI ಅನ್ನು ಸಹ ಪರಿಚಯಿಸಿದೆ. ಇದು ವಾಟ್ಸಾಪ್ ಬೀಟಾ ಅಪ್‌ಡೇಟ್‌ನೊಂದಿಗೆ ತರಲಾಗಿದ್ದು, ಹೊಸ ಶೇಖರಣಾ ಯುಐ ಅನ್ನು ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದ ಫೋಟೋಗಳು, ವೀಡಿಯೊಗಳು ಮತ್ತು ಜಿಐಎಫ್‌ಗಳನ್ನು ಎಡಿಟ್‌ ಮಾಡಲು ಸುಲಭವಾಗುತ್ತಿದೆ. ಈ ಫಿಚರ್ಸ್‌ ಅನ್ನು ‘Media Guidelines' ಎಂದು ಕರೆಯಲಾಗುತ್ತದೆ. ಇದು ಫೋಟೋಗಳು, ವೀಡಿಯೊಗಳು ಮತ್ತು ಜಿಐಎಫ್‌ಗಳಿಗೆ ಸ್ಟಿಕ್ಕರ್‌ಗಳು ಮತ್ತು ಪಠ್ಯವನ್ನು ಜೋಡಿಸಲು ಸಹಾಯ ಮಾಡುತ್ತದೆ.

ವಾಟ್ಸಾಪ್

ಇನ್ನು ಪ್ರಸ್ತುತ ವಾಟ್ಸಾಪ್ ಬೀಟಾ ಅಪ್‌ಡೇಟ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ವಾಟ್ಸಾಪ್ ಈ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೆ ಶೀಘ್ರದಲ್ಲಿಯೇ ಲಭ್ಯವಾಗುವಂತೆ ಮಾಡಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
WhatsApp's beta app on Android has a new feature that comes with the always mute option, new storage UI and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X