Just In
Don't Miss
- Lifestyle
ದಿನ ಭವಿಷ್ಯ: ಶುಕ್ರವಾರದ ರಾಶಿಫಲ ಹೇಗಿದೆ ನೋಡಿ
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Movies
ಶಮಂತ್ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿಗ್ನಲ್ ಅಪ್ಲಿಕೇಶನ್ ಯಾವ ದೇಶಕ್ಕೆ ಸೇರಿದೆ?..ಯಾರ ಒಡೆತನದಲ್ಲಿದೆ?
ಪ್ರಸ್ತುತ ಕೆಲ ದಿನಗಳಿಂದ ವಾಟ್ಸಾಪ್ನ ಹೊಸ ಸೇವಾ ನಿಯಮ ಹಾಗೂ ಗೌಪ್ಯತೆಯ ವಿಚಾರವಾಗಿ ಹೆಚ್ಚು ಚರ್ಚೆ ನಡೆಯುತ್ತಿದೆ. ಸದ್ಯ ವಾಟ್ಸಾಪ್ನ ಹೊಸ ಸೇವಾ ನಿಯಮದ ವಿರುದ್ದ ಆಕ್ರೋಶ ಗೊಂಡಿರುವ ಬಳಕೆದಾರರು ವಾಟ್ಸಾಪ್ ಬದಲಿಗೆ ಪರ್ಯಾಯ ಮೆಸೇಜಿಂಗ್ ಆಪ್ ಸಿಗ್ನಲ್ ಅಪ್ಲಿಕೇಶನ್ ಕಡೆಗೆ ಮುಖ ಮಾಡಿದ್ದಾರೆ. ವಾಟ್ಸಾಪ್ ಮಾದರಿಯಲ್ಲಿಯೇ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಫೀಚರ್ಸ್ ಅನ್ನು ಸಿಗ್ನಲ್ ಅಪ್ಲಿಕೇಶನ್ ಕೂಡ ಹೊಂದಿದೆ.

ಹೌದು, ವಾಟ್ಸಾಪ್ ಬದಲಿಗೆ ಎಲ್ಲರೂ ಸಿಗ್ನಲ್ ಅಪ್ಲಿಕೇಶನ್ ಬಳಸುವುದರತ್ತ ಯೋಚಿಸುತ್ತಿದ್ದಾರೆ. ಇನ್ನು ವಾಟ್ಸಾಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್, ವಿಡಿಯೋ ಮತ್ತು ವಾಯ್ಸ್ ಕಾಲಿಂಗ್ ಸಪೋರ್ಟ್, ಒಂದೇ ಕ್ಲಿಕ್ನಲ್ಲಿ ಸರಳೀಕೃತ ಫೈಲ್ ವರ್ಗಾವಣೆ ಮತ್ತು ಹೆಚ್ಚಿನ ಫೀಚರ್ಸ್ಗಳನ್ನ ಹೊಂದಿದೆ. ಹಾಗೇಯೆ ಸಿಗ್ನಲ್ ಅಪ್ಲಿಕೇಶನ್ ಕೂಡ ಹೆಚ್ಚಿನ ಭದ್ರತಾ ಫೀಚರ್ಸ್ ಅನ್ನು ಹೊಂದಿದೆ. ಸಿಗ್ನಲ್ ವಾಟ್ಸಾಪ್ಗೆ ಸುರಕ್ಷಿತ ಪರ್ಯಾಯವಾಗಿದೆ ಎಂದು ಎಲ್ಲಾ ಕಡೆ ಚರ್ಚೆ ಆಗ್ತಿದೆ. ಹಾಗಾದ್ರೆ ಸಿಗ್ನಲ್ ಅಪ್ಲಿಕೇಶನ್ ವಿಶೇಷತೆ ಏನು? ಇದರ ಸಂಸ್ಥಾಪಕರು ಯಾರು? ಇದೆಲ್ಲ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿಗ್ನಲ್ ಎಂದರೇನು?
ಸಿಗ್ನಲ್ ಗೌಪ್ಯತೆಯ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದರ ಟ್ಯಾಗ್ಲೈನ್ 'Say hello to Privacy'' ಹೆಸರೇ ಸೂಚಿಸುವಂತೆ ಇದು ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದೆ. ಇದು ವಾಟ್ಸಾಪ್ನಂತೆಯೇ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಿದ ಸೇವೆಯಾಗಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ಕ್ರೋಮ್ ಪ್ಲಾಟ್ಫಾರ್ಮ್ಗಳಲ್ಲಿ ಸಿಗ್ನಲ್ ಲಭ್ಯವಿದೆ. ಇದು ವೆಚ್ಚವಿಲ್ಲದೆ ಮತ್ತು ಇತರ ಮೆಸೆಂಜರ್ ಅಪ್ಲಿಕೇಶನ್ಗಳಂತೆಯೇ ಫೀಚರ್ಸ್ಗಳನ್ನು ಹೊಂದಿದೆ.

ಸಿಗ್ನಲ್ ಅಪ್ಲಿಕೇಶನ್ ಯಾರ ಒಡೆತನದಲ್ಲಿದೆ?
ಸಿಗ್ನಲ್ ಅಪ್ಲಿಕೇಶನ್ ಅನ್ನು ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್ಎಲ್ ಸಿ ಅಭಿವೃದ್ಧಿಪಡಿಸಿದೆ. ಇದು ಲಾಭರಹಿತ ಕಂಪನಿಯಾಗಿದೆ. ಸಿಗ್ನಲ್ ಅನ್ನು ಅಮೆರಿಕದ ಕ್ರಿಪ್ಟೋಗ್ರಾಫರ್ ಮತ್ತು ಪ್ರಸ್ತುತ ಸಿಗ್ನಲ್ ಮೆಸೆಂಜರ್ ಮತ್ತು ವಾಟ್ಸಾಪ್ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಸಿಇಒ ಮೊಕ್ಸಿ ಮಾರ್ಲಿನ್ಸ್ಪೈಕ್ ಅವರು ಹೊಂದಿದ್ದಾರೆ.

ಸಿಗ್ನಲ್ ಯಾವ ದೇಶಕ್ಕೆ ಸೇರಿದೆ?
ಸಿಗ್ನಲ್ ಅಪ್ಲಿಕೇಶನ್ನ ಮೂಲ ಅಮೆರಿಕದ ಕ್ಯಾಲಿಫೋರ್ನಿಯಾ. ಇದು ಚೀನಾದ ಕಂಪನಿಯೆಂದು ಕೆಲವರು ಗೊಂದಲವನ್ನು ಹೊಂದಿದ್ದಾರೆ. ಆದರೆ ಇದು ಅಮೆರಿಕಾದ ಅಪ್ಲಿಕೇಶನ್ ಅನ್ನೊದು ಗಮನಿಸಬೇಕಾದ ಅಂಶವಾಗಿದೆ.

ಸಿಗ್ನಲ್ ಸುರಕ್ಷಿತವಾಗಿದೆಯೇ? ಇದು ಯಾವ ಮಾದರಿಯ ಡೇಟಾವನ್ನು ಸಂಗ್ರಹಿಸುತ್ತದೆ?
ಕಾರ್ಯಕ್ಷಮತೆ ಡೇಟಾ, ಡಿವೈಸ್ ಐಡಿ, ಜಾಹೀರಾತು ಡೇಟಾ, ಉತ್ಪನ್ನದ ಸಂವಹನ, ಪಾವತಿ ಮಾಹಿತಿ, ಸ್ಥಳ ಡೇಟಾ, ಸರ್ಚಿಂಗ್ ಹಿಸ್ಟರಿ ಮತ್ತು ಹೆಚ್ಚಿನ ಮಾಹಿತಿಯನ್ನು ವಾಟ್ಸಾಪ್ ಸಂಗ್ರಹಿಸುತ್ತಿದೆ. ಆದರೆ ಸಿಗ್ನಲ್ ಅನ್ನು ಸುರಕ್ಷಿತ ಅಪ್ಲಿಕೇಶನ್ ಎಂದು ಹೇಳಲಾಗಿದೆ. ಏಕೆಂದರೆ ಈ ಅಪ್ಲಿಕೇಶನ್ ಯಾವುದೇ ಬಳಕೆದಾರ ಡೇಟಾವನ್ನು ಸಂಗ್ರಹಿಸುವುದಿಲ್ಲ. ಬದಲಿಗೆ ಸಿಗ್ನಲ್ ನೋಂದಣಿಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ಕೇಳುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ನಿಮ್ಮ ಸಂಖ್ಯೆಯನ್ನು ನಿಮ್ಮ ಬಳಕೆದಾರ ಖಾತೆಗೆ ಲಿಂಕ್ ಮಾಡಲು ಕೂಡ ಅಪ್ಲಿಕೇಶನ್ ನಿಮ್ಮನ್ನು ಕೇಳುವುದಿಲ್ಲ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190