ಫೇಸ್‌ಬುಕ್‌ ಹೆಸರನ್ನು ಬದಲಾಯಿಸಿದ್ದು ಯಾಕೆ? ಹೊಸ ಹೆಸರಿನಲ್ಲಿರುವ ಲೆಕ್ಕಾಚಾರ ಏನು?

|

ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಗುರುವಾರ ತಡರಾತ್ರಿ ತನ್ನ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ. ಫೇಸ್‌ಬುಕ್‌ CEO ಮಾರ್ಕ್‌ ಜುಕರ್‌ಬರ್ಗ್‌ ತಡರಾತ್ರಿ ನಡೆದ ಈವೆಂಟ್‌ನಲ್ಲಿ ಈ ಹೊಸ ಹೆಸರನ್ನು ಘೋಷಣೆ ಮಾಡಿದೆ. ಇನ್ನು ಈ ಹೆಸರು ಬದಲಾವಣೆ ಆಗಿರುವುದು ಮೂಲ ಕಂಪೆನಿಯ ಹೆಸರು ಮಾತ್ರ. ಪೇಸ್‌ಬುಕ್‌ ಒಡೆತನದ ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಅಪ್ಲಿಕೇಶನ್‌ ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಹೆಸರು ಮೆಟಾ ಎಂದು ಬದಲಾಗಿದೆ. ಫೇಸ್‌ಬುಕ್‌ ಅನ್ನು ಮೆಟಾ ಎಂಬ ಹೆಸರಿನಲ್ಲಿ ರಿಬ್ರಾಂಡ್‌ ಮಾಡಲಾಗಿದೆ. ಫೇಸ್‌ಬುಕ್‌ ಬಳಕೆದಾರರು ಇದರಿಂದ ವಿಚಲಿತರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಬದಲಾಗಿರೋದು ಹೆಸರು ಮಾತ್ರವೇ ಹೊರತು ಪೇಸ್‌ಬುಕ್‌ ಕಾರ್ಯನಿರ್ವಹಿಸುವ ವಿಧಾನವಲ್ಲ. ಹಾಗಾದ್ರೆ ಫೇಸ್‌ಬುಕ್‌ ಕಂಪೆನಿ ಏಕಾಏಕಿ ತನ್ನ ಹೆಸರನ್ನು ಬದಲಾಯಿಸಿರೋದು ಯಾಕೆ? ಮಾರ್ಕ್‌ ಜುಕರ್‌ ಬರ್ಗ್‌ ತಲೆಯಲ್ಲಿ ಈ ರೀತಿಯ ಯೋಚನೆ ಬಂದಿರೋದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾವರ್ಸ್

ಯೆಸ್‌ ಇಡೀ ಟೆಕ್‌ ವಲಯದಲ್ಲಿ ಮೂಡಿ ಬಂದಿರುವ ಪ್ರಶ್ನೆ ಫೇಸ್‌ಬುಕ್‌ ತನ್ನ ಹೆಸರನ್ನು ಬದಲಾಯಿಸಿರೋದು ಯಾಕೆ. ಈ ಪ್ರಶ್ನೆಗೆ ಉತ್ತರ ಮಾರ್ಕ್‌ ಜುಕರ್‌ಬರ್ಗ್‌ ನೀಡಿದ್ದಾರೆ. ಜನರು ಫೇಸ್‌ಬುಕ್‌ ಕಂಪನಿಯನ್ನು ಸೊಶೀಯಲ್‌ ಮೀಡಿಯಾ ದೈತ್ಯ ಎಂದು ತಿಳಿಯದೆ "ಮೆಟಾವರ್ಸ್" ಎಂದು ತಿಳಿದುಕೊಳ್ಳಬೇಕು ಅನ್ನೊದು ನಮ್ಮ ಆಶಯ ಎಂದಿದ್ದಾರೆ. ಏಕೆಂದರೆ ಭವಿಷ್ಯದಲ್ಲಿ ಫೇಸ್‌ಬುಕ್‌ ಕಂಪನಿಯು ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರತಿನಿಧಿಸಲು ಫೇಸ್‌ಬುಕ್‌ ಎಂಬ ಹೆಸರಿಗಿಂತ ಮೆಟಾ ಎಂಬ ಹೆಸರು ಸೂಕ್ತ ಅನ್ನೊದು ಜುಕರ್‌ಬರ್ಗ್‌ ವಾದವಾಗಿದೆ.

ಫೇಸ್‌ಬುಕ್

ಇನ್ನು 'ಮೆಟಾ' ಎಂಬ ಹೆಸರು ಸಾಮಾನ್ಯ ಫೇಸ್‌ಬುಕ್ ಸೇವೆಗಳು ಮತ್ತು ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಪ್ರತಿನಿಧಿಸುವುದಿಲ್ಲ. ಬದಲಿಗೆ ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿ ಉತ್ಪನ್ನಗಳ ಸುತ್ತ ವಿಕಸನಗೊಳ್ಳುವ ಕೆಲಸವನ್ನೂ ಹೈಲೈಟ್‌ ಮಾಡಲಿದೆ. ಮೆಟಾ ಎಂಬ ಹೆಸರು "ನಾವು ಯಾರು ಮತ್ತು ನಾವು ಏನನ್ನು ನಿರ್ಮಿಸಲು ಆಶಿಸುತ್ತೇವೆ" ಎಂದು ಪ್ರತಿಬಿಂಬಿಸುತ್ತದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ''ಕಾಲಕ್ರಮೇಣ, ನಾವು ಮೆಟಾವರ್ಸ್ ಕಂಪನಿಯಾಗಿ ಕಾಣುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ ಎಂಬುದರ ಬದಲಾಗಿ ಮೆಟಾವರ್ಸ್‌ ಎಂದು ಗುರುತಿಸಿಕೊಳ್ಳುತ್ತೇವೆ. ಜನರು ಮೆಟಾ ಬ್ರ್ಯಾಂಡ್ ಮತ್ತು ನಾವು ನಿಂತಿರುವ ಭವಿಷ್ಯವನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಅನ್ನೊದನ್ನ ಜುಕರ್‌ ಬರ್ಗ್‌ ಹೇಳಿದ್ದಾರೆ.

ಫೇಸ್‌ಬುಕ್

ಇನ್ನು ಮೆಟಾ ಎಂಬ ಹೊಸ ಫೇಸ್‌ಬುಕ್ ಹೆಸರು ಮೂಲತಃ ಮೆಟಾವರ್ಸ್ ಎಂಬ ಪದದಿಂದ ಹುಟ್ಟಿಕೊಂಡಿದೆ. ಈ ಪದವನ್ನು ಸುಮಾರು ಮೂರು ದಶಕಗಳ ಹಿಂದೆ ಡಿಸ್ಟೋಪಿಯನ್ ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ಮೆಟಾವರ್ಸ್ ಎಂಬ ಪದವು ಸಿಲಿಕಾನ್ ವ್ಯಾಲಿಯಲ್ಲಿ ವ್ಯಾಪಕ ಆಕರ್ಷಣೆಯನ್ನು ಗಳಿಸಿದೆ. ಈಗಿನಿಂದಲೇ ಮೆಟಾವರ್ಸ್ ಎಂಬ ಪದವನ್ನು ಬಳಸುವುದರಿಂದ ವರ್ಚುವಲ್ ಜಾಗವನ್ನು ನಿರ್ಮಿಸುವುದು, ಇದನ್ನು ವಿಶ್ವದಾದ್ಯಂತ ಜನರು ವಿಭಿನ್ನ ಡಿವೈಸ್‌ಗಳನ್ನು ಬಳಸಿಕೊಂಡು ಪ್ರವೇಶಿಸುವುದಕ್ಕೆ ಅವಕಾಶ ನೀಡಲಿದೆ.

ಕ್ರಿಪ್ಟೋ

ಮೆಟಾವರ್ಸ್‌ನಲ್ಲಿ "ಗೌಪ್ಯತೆ ಮತ್ತು ಸುರಕ್ಷತೆಯನ್ನು ಮೊದಲ ದಿನದಿಂದಲೇ ನಿರ್ಮಿಸಬೇಕಿದೆ. ಆದ್ದರಿಂದ ಮುಕ್ತ ಮಾನದಂಡಗಳು ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಮಾಡುವುದಕ್ಕೆ ಮುಂದಾಗಿದ್ದೇವೆ. ಸಮುದಾಯದಲ್ಲಿ ಕ್ರಿಪ್ಟೋ ಮತ್ತು ಎನ್‌ಎಫ್‌ಟಿ ಪ್ರಾಜೆಕ್ಟ್‌ಗಳನ್ನು ಬೆಂಬಲಿಸುವಂತಹ ಹೊಸ ತಾಂತ್ರಿಕ ಕೆಲಸಗಳು ಮಾತ್ರವಲ್ಲದೆ ಹೊಸ ರೀತಿಯ ಆಡಳಿತದ ಅಗತ್ಯವಿರುತ್ತದೆ ಎಂದು ಹೇಳಲಾಗಿದೆ. ಮೆಟಾವರ್ಸ್‌ನಲ್ಲಿ ಗ್ರಾಹಕರಾಗಿ ಮಾತ್ರವಲ್ಲದೆ ಕ್ರಿಯೆಟರ್ಸ್‌ಗಳಾಗಿಯೂ ಪ್ರಯೋಜನ ಪಡೆಯಬಹುದು ಎಂದು ಜುಕರ್‌ಬರ್ಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌ನ ಹೆಸರು ಬದಲಾವಣೆ ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ ಅಪ್ಲಿಕೇಶನ್ ಬಳಕೆದಾರರಿಗೆ ಬದಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸಾಖಷ್ಟು ಪ್ರಶ್ನೆಗಳು ಕೂಡ ಮೂಡಿವೆ. ಆದರೆ ಮಾರ್ಕ್‌ ಜುಕರ್‌ಬರ್ಗ್ ಫೇಸ್‌ಬುಕ್‌ ಹೆಸರು ಬದಲಾಯಿಸುವ ಮುನ್ನ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಇದ್ದ ರೀತಿಯಲ್ಲಿಯೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಇನ್ನು ಫೇಸ್‌ಬುಕ್‌ ಅಪ್ಲಿಕೇಶನ್‌ ಬಳಸುವ ವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಲೇಔಟ್‌ಗಳನ್ನು ಘೋಷಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ನ ಹೊಸ ಹೆಸರು ಹೇಗೆ ಮೋಡಿ ಮಾಡಲಿದೆ ಅನ್ನೊದು ತಿಳಿದುಬರಲಿದೆ.

Most Read Articles
Best Mobiles in India

English summary
Zuckerberg said that he wants people to know the company not as a social media giant but as ”metaverse”.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X