ಏರ್‌ಟೆಲ್‌ ಮುಂದೆ ಮಕಾಡೆ ಮಲಗಿದ ರಿಲಾಯನ್ಸ್‌ ಜಿಯೋ!ಜಿಯೋಗೆ ಮುಳುವಾಯ್ತಾ 5G?ಮತ್ತೆ ದೊಡ್ಡ ನೆಟ್‌ವರ್ಕ್‌ ಆಗುವತ್ತ ಏರ್‌ಟೆಲ್‌..!

By Gizbot Bureau
|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಏರ್‌ಟೆಲ್‌ ಹಾಗೂ ರಿಲಾಯನ್ಸ್‌ ಜಿಯೋ ನಡುವೆ ಭಾರೀ ಪೈಪೋಟಿ ಇದೆ. ಈ ಜನವರಿಯಲ್ಲಿ ಏರ್‌ಟೆಲ್ 6.9 ಮಿಲಿಯನ್ ಹೊಸ ಗ್ರಾಹಕರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದ್ದರೆ, ರಿಲಾಯನ್ಸ್ ಜಿಯೋ ತನ್ನ ತೆಕ್ಕೆಗೆ ಕೇವಲ 3.4 ಮಿಲಿಯನ್ ಬಳಕೆದಾರರನ್ನು ಸೇರಿಸಿದ್ದು, ಹಿನ್ನಡೆ ಅನುಭವಿಸಿದೆ. ಇದರಿಂದ ಏರ್‌ಟೆಲ್ ತನ್ನ ಮಾರುಕಟ್ಟೆ ವ್ಯಾಪ್ತಿ ಹಾಗೂ ಪಾಲನ್ನು ವಿಸ್ತರಿಸುತ್ತಿದ್ದು, TRAI ಡೇಟಾ ಪ್ರಕಾರ 334.60 ಮಿಲಿಯನ್ ವೈರ್‌ಲೆಸ್ ಬಳಕೆದಾರರಿಗೆ ತನ್ನ ಸೇವೆಯನ್ನು ಏರ್‌ಟೆಲ್‌ ನೀಡುತ್ತಿದೆ. ಇದಲ್ಲದೆ, ಜಿಯೋ ಮಾರುಕಟ್ಟೆಯ ಪಾಲು ಒಂದು ತಿಂಗಳ ಅವಧಿಯಲ್ಲಿ ಶೇ.35.43 ರಿಂದ 35.30ಕ್ಕೆ ಇಳಿದಿದೆ. ಆದರೆ, ಏರ್‌ಟೆಲ್ ತನ್ನ ಮಾರುಕಟ್ಟೆ ಪಾಲನ್ನು ಈ ಒಂದು ತಿಂಗಳ ಅವಧಿಯಲ್ಲಿ ಶೇ.29.36 ರಿಂದ 29.62ಕ್ಕೆ ಹೆಚ್ಚಿಸಿಕೊಂಡಿದೆ.

ಜಿಯೋ

ಅಷ್ಟೇ ಅಲ್ಲದೇ, ಸಕ್ರಿಯ ಬಳಕೆದಾರರ ವಿಷಯದಲ್ಲೂ ರಿಲಾಯನ್ಸ್ ಜಿಯೋ ಏರ್‌ಟೆಲ್‌ನ ಹಿಂದೆ ಇದೆ. ಜಿಯೋ 324.52 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದರೆ, ಏರ್ಟೆಲ್ 335.77 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಏರ್‌ಟೆಲ್‌ ಹಲವು ತಿಂಗಳುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಬಳಗಕ್ಕೆ ಚಂದಾದಾರರನ್ನು ಸೇರಿಸಿಕೊಳ್ಳುತ್ತಿದೆ ಎಂದರೇ ಅಚ್ಚರಿಯಾಗುತ್ತದೆ. ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಾಯನ್ಸ್ ಜಿಯೋ ಹೊಸ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗುತ್ತಿರುವುದು ಏಕೆ..? ಜಿಯೋದ ಈ ಹಿನ್ನಡೆಗೆ ಕಾರಣಗಳೇನು..? ಎಂಬುದನ್ನು ಮುಂದೆ ನೋಡಿ.

ಚಂದಾದಾರರು ಹಾಗೂ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿರುವ ಜಿಯೋ..!

ಚಂದಾದಾರರು ಹಾಗೂ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿರುವ ಜಿಯೋ..!

ಈ ಮೊದಲು, ರಿಲಾಯನ್ಸ್ ಜಿಯೋ ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸುತ್ತಿತ್ತು. ಆದರೆ, ಈಗ ಪದೇ ಪದೇ ಕರೆ ಕಟ್‌ ಆಗುತ್ತಿರುವ ಬಗ್ಗೆ ಬಹಳಷ್ಟು ಬಳಕೆದಾರರು ದೂರು ನೀಡುತ್ತಿದ್ದಾರೆ. ಆದ್ದರಿಂದ ಉತ್ತಮ ನೆಟ್‌ವರ್ಕ್‌ ಹಾಗೂ ಉತ್ತಮ ಸೇವೆಗಳಿಗಾಗಿ ಬಳಕೆದಾರರು ಏರ್‌ಟೆಲ್‌ ಕಡೆ ಮುಖ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಇದರಿಂದ ಜಿಯೋ ಹಿಂದುಳಿಯುವಂತಾಗಿದೆ. ಆದರೂ, ಸ್ಪೆಕ್ಟ್ರಮ್ ಹರಾಜಿನಲ್ಲಿ ಜಿಯೋ ಸಾಕಷ್ಟು ಹಣವನ್ನು ವ್ಯಯಿಸಿರುವುದರಿಂದ ಪರಿಸ್ಥಿತಿ ಬದಲಾಗಿದೆ.

ಹರಾಜಿನಲ್ಲಿ ಹೆಚ್ಚು ಸ್ಪೆಕ್ಟ್ರಮ್‌ ಖರೀದಿಸಿದ ರಿಲಾಯನ್ಸ್ ಜಿಯೋ..!

ಹರಾಜಿನಲ್ಲಿ ಹೆಚ್ಚು ಸ್ಪೆಕ್ಟ್ರಮ್‌ ಖರೀದಿಸಿದ ರಿಲಾಯನ್ಸ್ ಜಿಯೋ..!

ಸ್ಪೆಕ್ಟ್ರಮ್‌ ಹರಾಜಿನಲ್ಲಿ 800 ಮೆಗಾಹರ್ಟ್ಜ್‌, 1800 ಮೆಗಾಹರ್ಟ್ಜ್‌ ಮತ್ತು 2300 ಮೆಗಾಹರ್ಟ್ಜ್‌ನಂತಹ ಬ್ಯಾಂಡ್‌ಗಳಲ್ಲಿ 488.35 ಮೆಗಾಹರ್ಟ್ಜ್‌ ಸ್ಪೆಕ್ಟ್ರಮ್ ಖರೀದಿಸಿದ ಏಕೈಕ ಟೆಲಿಕಾಂ ಆಪರೇಟರ್ ರಿಲಾಯನ್ಸ್ ಜಿಯೋ ಆಗಿದೆ. ತರಂಗಾಂತರಗಳ ಖರೀದಿಗೆ 57,122.65 ಕೋಟಿ ರೂ. ಗಳನ್ನು ರಿಲಾಯನ್ಸ್‌ ಜಿಯೋ ವಿನಿಯೋಗಿಸಿದೆ. ಈ ಮೂಲಕ ತರಂಗಾಂತರ ಖರೀದಿ ವಿಚಾರದಲ್ಲಿ ಏರ್‌ಟೆಲ್ ಮತ್ತು ವಿ (ವೊಡಾಫೋನ್-ಐಡಿಯಾ) ಗಿಂತ ಜಿಯೋ ಮುಂದಿದೆ.

ಜಿಯೋ

ರಿಲಾಯನ್ಸ್ ಜಿಯೋ ಹರಾಜಿನಲ್ಲಿ ಹೆಚ್ಚಿನ ಸ್ಪೆಕ್ಟ್ರಮ್‌ ಖರೀದಿಸಿದರೂ ಏರ್‌ಟೆಲ್‌ ಹಾಗೂ ವಿಗಿಂತ ಹಿಂದಿದೆ. ಏಕೆಂದರೆ ಎರಡೂ ಸಂಸ್ಥೆಗಳು ಕ್ರಮವಾಗಿ 2,107 ಮೆಗಾಹರ್ಟ್ಜ್‌ ಮತ್ತು 1,768 ಮೆಗಾಹರ್ಟ್ಜ್‌ನ್ನು ಹೊಂದಿದ್ದು, ರಿಲಾಯನ್ಸ್ ಜಿಯೋ ಕೇವಲ 1,717 ಮೆಗಾಹರ್ಟ್ಜ್‌ನ್ನು ಮಾತ್ರ ಹೊಂದಿದೆ. ಈ ಹಿನ್ನೆಲೆ ಜಿಯೋ ಬಳಕೆದಾರರು ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಎನ್ನಲಾಗಿದೆ.

ಒಟ್ಟಿನಲ್ಲಿ, ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಚಂದಾದಾರರ ಬೆಳವಣಿಗೆಯೊಂದಿಗೆ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ರಿಲಾಯನ್ಸ್‌ ಜಿಯೋ ಸ್ಪೆಕ್ಟ್ರಮ್ ಮಾರುಕಟ್ಟೆ ಪಾಲು ಮತ್ತು ಚಂದಾದಾರರ ಮಾರುಕಟ್ಟೆ ಪಾಲಿನ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಆಕ್ರಮಣಕಾರಿಯಾಗಿ ಬಿಡ್ ಮಾಡಿದೆ ಎಂದು ನಾವು ನಂಬುತ್ತೇವೆ ಎಂದು ಕ್ರೆಡಿಟ್ ಸ್ಯೂಸ್ ವರದಿಯೊಂದು ತಿಳಿಸಿದೆ.

ರಿಲಾಯನ್ಸ್ ಜಿಯೋ 5ಜಿಯಲ್ಲಿ ಏಕೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ..?

ರಿಲಾಯನ್ಸ್ ಜಿಯೋ 5ಜಿಯಲ್ಲಿ ಏಕೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ..?

ಹರಾಜಿನ ಸಮಯದಲ್ಲಿ ರಿಲಾಯನ್ಸ್‌ ಜಿಯೋ ಹೆಚ್ಚಿನ ಸ್ಪೆಕ್ಟ್ರಮ್ ಖರೀದಿಸಿದ್ದರಿಂದ 4ಜಿ ನೆಟ್‌ವರ್ಕ್‌ನಲ್ಲಿ ಹೂಡಿಕೆ ಮಾಡಲು ಸಂಸ್ಥೆಗೆ ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿದೆ. 5ಜಿ ನೆಟ್‌ವರ್ಕ್‌ನಲ್ಲಿ ಹೂಡಿಕೆ ಪ್ರಾರಂಭಿಸುವ ಸಾಧ್ಯತೆಗಳಿದ್ದು, 5ಜಿ ಬಿಡುಗಡೆಗಾಗಿ ರಿಲಾಯನ್ಸ್‌ ಜಿಯೋ ಹೊಸ ಸ್ಪೆಕ್ಟ್ರಮ್ ಬಳಸುವ ಸಾಧ್ಯತೆ ಇದೆ. ಸ್ಪೆಕ್ಟ್ರಮ್‌ನಲ್ಲಿ ರಿಲಾಯನ್ಸ್ ಜಿಯೋ ಹೂಡಿಕೆಯು ನೆಟ್‌ವರ್ಕ್‌ ಸಮಸ್ಯೆಗಳನ್ನು ಸುಧಾರಿಸಲು ಮತ್ತು ಹೊಸ ಚಂದಾದಾರರನ್ನು ಅದರ ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸಲು ಆಪರೇಟರ್‌ಗೆ ಸಹಾಯ ಮಾಡುತ್ತದೆ ಎಂದು ಇದು ಸೂಚಿಸುತ್ತದೆ.

Most Read Articles
Best Mobiles in India

Read more about:
English summary
Why Is Reliance Jio Losing Subscribers And Market Share?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X