Just In
Don't Miss
- News
ನಡುರಸ್ತೆಯಲ್ಲೇ ಜಗಳ; ಕಾಲಿನಿಂದ ಒದ್ದ ಪೊಲೀಸ್ ಪೇದೆ
- Finance
ದುಬೈನಲ್ಲಿ ಒಂಟೆಗಳಿಗೆ ಐಷಾರಾಮಿ ಆಸ್ಪತ್ರೆ: ಜಗತ್ತಿನ ಏಕೈಕ ಆಸ್ಪತ್ರೆ
- Automobiles
ಫಾಸ್ಟ್ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
- Movies
ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!
- Lifestyle
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
- Sports
South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ವಿಂಡೋಸ್ 10ರ ಇತ್ತೀಚಿನ ಅಪ್ಡೇಟ್ ಬಳಿಕ ಸಮಸ್ಯೆ ಹೆಚ್ಚಾಗಿದೆ!
ಇತ್ತೀಚಿಗೆ ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಇಲ್ಲಿ ನೋಡಿ. ಏಕೆಂದರೆ, ವಿಂಡೋಸ್ 10ನ ಇತ್ತೀಚಿನ ಅಪ್ಡೇಟ್ ಒಂದು ಬಳಕೆದಾರರಿಗೆ ಸಮಸ್ಯೆಗಳನ್ನು ತಂದೊಡ್ಡಿರುವುದಾಗಿ ವರದಿಯಾಗಿದೆ. ವಿಂಡೋಸ್ 10ರ ಇತ್ತೀಚಿನ ಅಪ್ಡೇಟ್ ಬಳಿಕ ವಿಂಡೋಸ್ ಸರ್ಚ್ ಮತ್ತು ವಿಎಮ್ ವೇರ್ ವರ್ಕ್ಸ್ಟೇಷನ್ ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸಿವೆ. ಇನ್ನು ಕೆಲ ಬಳಕೆದಾರರ ಲ್ಯಾಪ್ಟಾಪ್ಗಳಲ್ಲಿ ಪ್ರಿಂಟರ್ ಕೂಡ ಕಾರ್ಯನಿರ್ವಹಿಸಿದಂತೆ ಮಾಡಿದೆ ಎಂದು ಹೇಳಲಾಗಿದೆ.
ವಿಂಡೋಸ್ ಕೆಬಿ4517211 ಅಪ್ಡೇಟ್ನಿಂದಾಗಿ ಬೂಟ್ ಆಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಕಳೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿರುವ ಈ ಬೆಳವಣಿಗೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಬಾಧಿಸಿದೆ ಎಂಬುದು ಬ್ಲೀಪಿಂಗ್ ಕಂಪ್ಯೂಟರ್ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ಕಂಪ್ಯೂಟರ್ ಸೇವೆಗಳನ್ನು ನೀಡುತ್ತಿರುವ ಬ್ಲೀಪಿಂಗ್ ಕಂಪ್ಯೂಟರ್ ಕಳೆದ ಕೆಲವು ತಿಂಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಹಕರಿಂದ ಆತಂಕದ ಕರೆಗಳು ಬರುತ್ತಿರುವುದಾಗಿ ಹೇಳಿದೆ.
ವಿಂಡೋಸ್10ರ ಇತ್ತೀಚಿನ ಅಪ್ಡೇಟ್ನಿಂದಾಗಿ ಬಳಕೆದಾರರಿಗೆ ಬೂಟ್ ಆಗುವುದರಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿವೆ. ಸ್ವಯಂ ಆಗಿ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದ ಮೈಕ್ರೋಸಾಫ್ಟ್ ಯಾವ ತಂತ್ರಾಂಶವೂ ಕಾರ್ಯನಿರ್ವಹಿಸುತ್ತಿಲ್ಲ. ಪರದೆ ನಿಷ್ಕ್ರಿಯವಾಗಿದೆ. ಅಪ್ಡೇಟ್ ನಂತರ ನನ್ನ ಕಂಪ್ಯೂಟರ್ ಯಾವುದೇ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಮೇಲಿಂದ ಮೇಲಿಂದ ಬರುತ್ತಲೇ ಇವೆ ಎಂದು ಬ್ಲೀಪ್ ಕಂಪ್ಯೂಟರ್ನ ಗ್ರಾಹಕ ನೆರವು ವಿಭಾಗ ಫೋರ್ಬ್ಸ್ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ವಿಂಡೋಸ್ ಕೆಬಿ4517211 ಕಡ್ಡಾಯವಾಗಿ ಮಾಡಲೇಬೇಕಾದ ಅಪ್ಡೇಟ್ ಅಲ್ಲ. ಆದರೆ ಪದೇಪದೇ ಪರದೆ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ಅನೇಕರು ಅಪ್ಡೇಟ್ ಮಾಡಿದ್ದಾರೆ. ಬಳಿಕ ವಿಂಡೋಸ್ ಸರ್ಚ್, ಕಾರ್ಟನಾಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು ತಿಳಿದು ಬಂದಿದೆ. ಸರ್ಚ್ ಭಾಗದಲ್ಲಿ ಟೈಪಿಸುವುದಕ್ಕೂ ಸಾಧ್ಯವಾಗದಂತೆ ಆಗಿದೆ.ಅಪ್ಡೇಟ್ ಬಳಿಕ ವರ್ಚ್ಯುವಲ್ ಮಷಿನ್ ವರ್ಕ್ಸ್ಟೇಷನ್ಗಳು ವಿಂಡೋಸ್ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು, ಅಪ್ಡೇಟ್ ಮಾಡುವಂತೆ ಸೂಚಿಸುತ್ತಿವೆ ಎನ್ನಲಾಗಿದೆ.
ಇನ್ನು ಈ ಬೆಳವಣಿಗೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದ ಮೈಕ್ರೋಸಾಫ್ಟ್ ಈಇದೀಗ ಪರಿಸ್ಥಿತಿ ನಿಭಾಯಿಸುವುದಕ್ಕೆ ಹೊರಟಿದೆ. ಅಕ್ಟೋಬರ್ 8ಕ್ಕೆ ಈ ಅಪ್ಡೇಟ್ ಅನ್ನು ಬದಲಿಸಲಿದೆ ಎಂದು ಬ್ಲೀಪ್ ಕಂಪ್ಯೂಟರ್ ತನ್ನ ವರದಿಯಲ್ಲಿ ತಿಳಿಸಿದೆ. ಒಂದು ವೇಳೆ ನೀವು ಕೂಡ ಈಗಾಗಲೇ ವಿಂಡೋಸ್ 10 ಇತ್ತೀಚಿನ ಆವೃತ್ತಿ ಅಪ್ಡೇಟ್ ಮಾಡಿ, ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಕೂಡಲೇ ಹೊಸ ಅಪ್ಡೇಟ್ ಅನ್ನು ಅನ್ ಇನ್ಸ್ಟಾಲ್ ಮಾಡಿ. ನಂತರ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090