ಭಾರತದಲ್ಲಿ ವಿಂಗ್ಸ್‌ ಟೆಕ್ನೋ ಇಯರ್‌ಬಡ್ಸ್‌ ಬಿಡುಗಡೆ!..ಬೆಲೆ 3,999ರೂ!

|

ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್‌ ಕೇಳುವುದು ಒಂದು ರೀತಿಯ ಥ್ರೀಲಿಂಗ್‌ ಅನುಭವವನ್ನು ನೀಡುತ್ತದೆ. ಅದರಲ್ಲೂ ತಮ್ಮ ನೆಚ್ಚಿನ ಹಾಡುಗಳನ್ನ ಕೇಳುತ್ತಾ ಬೇಸರವನ್ನು ಕಳೆಯುವುದಕ್ಕೆ ಎಲ್ಲರೂ ಇಚ್ಚಿಸುತ್ತಾರೆ. ಇನ್ನು ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್‌ ಇದ್ದರೆ ಸಾಕು ಮ್ಯೂಸಿಕ್‌ ಅನುಭವ ಇನ್ನು ಉತ್ತಮವಾಗಿರುತ್ತೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮ ಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ವಿಂಗ್ಸ್‌ ಲೈಪ್‌ಸ್ಟೈಲ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ತನ್ನ ಹೊಸ ವಿಂಗ್ಸ್‌ ಟೆಕ್ನೋ ವಾಯರ್‌ಲೆಸ್‌ ಇಯರ್‌ ಬಡ್ಸ್‌ ಅನ್ನು ಪರಿಚಯಿಸಿದೆ.

ಇಯರ್‌ಬಡ್ಸ್‌

ಹೌದು, ವಿಂಗ್ಸ್‌ ಲೈಪ್‌ಸ್ಟೈಲ್‌ ತನ್ನ ಹೊಸ ವಿಂಗ್ಸ್‌ ಟೆಕ್ನೋ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನು ಭಾರತದಲ್ಲಿ ಪರಿಚಯಿಸಿದೆ. ಇನ್ನು ಈ ಇಯರ್‌ಬಡ್ಸ್‌ 3,999 ರೂ.ಬೆಲೆಯನ್ನು ಹೊಂದಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಇಂದಿನಿಂದ ಅಮೆಜಾನ್ ಮೂಲಕ ಲಭ್ಯವಿರುತ್ತವೆ. ಇದಲ್ಲದೆ ಈ ಇಯರ್‌ಬಡ್ಸ್‌ ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಒಳಗೊಂಡಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಯರ್‌ಲೆಸ್‌

ಇನ್ನು ವಿಂಗ್ಸ್ ಟೆಕ್ನೋ ವಾಯರ್‌ಲೆಸ್‌ ಇಯರ್‌ಬಡ್ಸ್‌ ಡ್ಯುಯಲ್ ಮೈಕ್ ಸೆಟಪ್ ಹೊಂದಿದೆ. ಇದು ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ. ಇದು ಸ್ಪಷ್ಟ ಕರೆ ನೀಡುವುದಕ್ಕೆ ಅವಕಾಶವನ್ನ ನೀಡಿದೆ.ಇದರಲ್ಲಿರುವ ಒಂದು ಮೈಕ್ ಧ್ವನಿ ಪ್ರಸಾರಕ್ಕಾಗಿ ಮತ್ತು ಇನ್ನೊಂದು ಬ್ಯಾಂಕ್‌ಗ್ರೌಂಡ್‌ ಸೌಂಡ್‌ ರದ್ದುಗೊಳಿಸಲು ಉಪಯುಕ್ತವಾಗಲಿದೆ. ಜೊತೆಗೆ ಇದು ಗ್ರ್ಯಾಫೀನ್ ಡ್ರೈವರ್‌ಗಳನ್ನು ಹೊಂದಿದ್ದು ಅದು ಒಟ್ಟಾರೆ ಪವರ್‌ಫುಲ್‌ ಬೇಸ್‌ ಅನ್ನು ನೀಡಲಿದೆ. ಇದರಿಂದ ಬಳಕೆದಾರರು ಪ್ರಯಾನದ ಸಂದರ್ಭದಲ್ಲಿಯೂ ಉತ್ತಮ ಗುಣಮಟ್ಟದ ಆಡಿಯೋವನ್ನು ಕೇಳಬಹುದಾಗಿದೆ.

ಇಯರ್‌ಬಡ್ಸ್‌

ಅಲ್ಲದೆ ವಿಂಗ್ಸ್ ಟೆಕ್ನೋ ಇಯರ್‌ಬಡ್ಸ್‌ ಸ್ಪಷ್ಟ ಮತ್ತು ಪಂಚ್ ಬಾಸ್‌ನೊಂದಿಗೆ ಆಡಿಯೊ ಪ್ರೊಫೈಲ್ ಅನ್ನು ನೀಡುತ್ತದೆ. ಇನ್ನು ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ ಅನ್ನು ಒಳಗೊಂಡಿದೆ. ಇದು ಒಟ್ಟು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಅಲ್ಲದೆ ಈ ಇಯರ್‌ಬಡ್ಸ್‌ 6 ಗಂಟೆಗಳವರೆಗೆ ಬಾಳಿಕೆ ಬರಲಿದೆ. ಜೊತೆಗೆ ಚಾರ್ಜಿಂಗ್‌ ಕೇಸ್‌ ಮೂಲಕ ಹೆಚ್ಚುವರಿ 18 ಗಂಟೆಗಳ ಶಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಇದರಲ್ಲಿರುವ ಪ್ರತಿ ಇಯರ್‌ಬಡ್ ಟಚ್ ಸೆನ್ಸರ್‌ಗಳನ್ನು ಹೊಂದಿದ್ದು ಅದು ಬಳಕೆದಾರರಿಗೆ ಪರಿಮಾಣವನ್ನು ಸರಿಹೊಂದಿಸಲು, ವಾಯ್ಸ್‌ ಅಸಿಸ್ಟೆಂಟ್‌ ಆಕ್ಟಿವ್‌ ಮಾಡಲು, ಮ್ಯೂಸಿಕ್‌ ಪ್ಲೇ ಮಾಡಲು, ಕರೆಗಳಿಗೆ ಉತ್ತರಿಸಲು ವಾಯ್ಸ್‌ ಅಸಿಸ್ಟೆಂಟ್‌ ಬಳಸಲು ಅನುಮತಿಸುತ್ತದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ನ ಪೆಟ್ಟಿಗೆಯನ್ನು ತೆರೆದ ನಂತರ ಇಯರ್‌ಬಡ್ಸ್‌ ಡಿವೈಸ್‌ಗೆ ಆಟೋ-ಪೇರಿಂಗ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವುದಲ್ಲದೆ, ಉತ್ತಮ ಆಡಿಯೋ ಅನುಭವವನ್ನು ನೀಡಲಿದೆ. ಸದ್ಯ ವಿಂಗ್ಸ್ ಟೆಕ್ನೋ 3,999 ರೂ. ಈ ಬೆಲೆಯನ್ನು ಹೊಂದಿದ್ದು, ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ಹಾಗೇ ಗಮನಿಸುವುದಾದರೆ ಶಿಯೋಮಿ ಸಂಸ್ಥೆ ಕೂಡ 3,499 ರೂ.ಗಳ ಬೆಲೆಯಲ್ಲಿ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಅನ್ನು ಪರಿಚಯಿಸಿದೆ.

Most Read Articles
Best Mobiles in India

Read more about:
English summary
Wings lifestyle has launched the Wings Techno earbuds in India at a price of Rs 3,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X