BSNL, ಜಿಯೋ, ಏರ್‌ಟೆಲ್‌, ವೊಡಾಫೋನ್‌ಗಳ ವರ್ಕ್ ಫ್ರಮ್ ಹೋಮ್ ಪ್ಲಾನ್ ಮಾಹಿತಿ!

|

ದೇಶದಲ್ಲಿನ ಬಿಎಸ್‌ಎನ್‌ಎಲ್, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ಹೆಚ್ಚು ಡೇಟಾ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿವೆ. ಇನ್ನು ಲಾಕ್‌ಡೌನ್ ಅವಧಿಯಲ್ಲಿ ಈ ಟೆಲಿಕಾಂಗಳು ಬಳಕೆದಾರರಿಗೆ ಅಧಿಕ ಡೇಟಾ ನೀಡುವ ನಿಟ್ಟಿನಲ್ಲಿ ಮತ್ತು ಮನೆಯಿಂದ ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ವರ್ಕ್ ಫ್ರಮ್ ಹೋಮ್ ಪ್ಲಾನ್ ಲಾಂಚ್ ಪರಿಚಯಿಸಿವೆ. ಇನ್ನು ಈ ವರ್ಕ ಫ್ರಮ್ ಹೋಮ್ ಯೋಜನೆಗಳು ಬಳಕೆದಾರರ ಡೇಟಾ ಬೇಡಿಕೆ ನೀಗಿಸುತ್ತವೆ.

ವರ್ಕ ಫ್ರಂ ಹೋಮ್

ಹೌದು, ಕೊರೊನಾ ರಣಕೇಕೆ ನಿಯಂತ್ರಣಕ್ಕಾಗಿ ಹಲವಾರು ಸಂಸ್ಥೆಗಳು ಅವರ ಉದ್ಯೋಗಿಗಳಿಗೆ ವರ್ಕ ಫ್ರಂ ಹೋಮ್ ಮುಂದುವರಿಸಿವೆ. ಹಾಗೆಯೇ ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಗಳಿಗೆ ಅನುಕೂಲಕವಾಗಲೆಂದು ಟೆಲಿಕಾಂಗಳು ವರ್ಕ ಫ್ರಮ್ ಹೋಮ್ ಯೋಜನೆ ಇನ್ನು ಚಾಲ್ತಿಯಲ್ಲಿವೆ. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇರಿದಂತೆ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ವರ್ಕ್ ಫ್ರಮ್ ಹೋಮ್ ಪ್ಲಾನ್‌ಗಳು ಹೆಚ್ಚುವರಿ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿವೆ. ಟೆಲಿಕಾಂಗಳ ವರ್ಕ್ ಫ್ರಮ್ ಹೋಮ್ ಪ್ಲಾನ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ಬಿಎಸ್‌ಎನ್‌ಎಲ್‌ ವರ್ಕ ಫ್ರಮ್ ಹೋಮ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ವರ್ಕ ಫ್ರಮ್ ಹೋಮ್ ಪ್ಲ್ಯಾನ್

ಬಿಎಸ್ಎನ್ಎಲ್ ಈ ಡೇಟಾ STV ಪ್ಲ್ಯಾನ್ ಹೆಚ್ಚುವರಿ ಡೇಟಾ ಸೌಲಭ್ಯ ಹೊಂದಿದ್ದು, ಮನೆಯಿಂದ ಕೆಲಸ ಮಾಡುವವರಿಗೆ ಸೂಕ್ತ ಅನಿಸಿದೆ. ಇನ್ನು ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 5GB ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ಈ ಡೇಟಾ ವೋಚರ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇದನ್ನು ಹೊರತುಪಡಿಸಿ ಈ ಪ್ಲ್ಯಾನಿನಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ಜಿಯೋ ವರ್ಕ ಫ್ರಮ್ ಹೋಮ್ ಪ್ಲ್ಯಾನ್

ಜಿಯೋ ವರ್ಕ ಫ್ರಮ್ ಹೋಮ್ ಪ್ಲ್ಯಾನ್

ವರ್ಕ್‌ ಫ್ರಂ ಹೋಮ್ ವ್ಯವಸ್ಥೆಯನ್ನು ಬೆಂಬಲಿಸಿ ಜಿಯೋ ಈ ಕೊಡುಗೆಯನ್ನು ನೀಡಿದೆ. ಈ ಪ್ರೀಪೇಯ್ಡ್‌ ಒಟ್ಟು 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಅಂದರೇ ಒಟ್ಟು ವ್ಯಾಲಿಡಿಟಿ ಅವಧಿಗೆ 102GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಇನ್ನು ಇಂಟರ್ನೆಟ್ ವೇಗವು 64 kbps ಸಾಮರ್ಥ್ಯದಲ್ಲಿರಲಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಯ ಪ್ರಯೋಜನೆಗಳು ಇರುವುದಿಲ್ಲ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ ಸಹ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ವರ್ಕ ಫ್ರಮ್ ಹೋಮ್ ಪ್ಲ್ಯಾನ್‌ಗಳನ್ನು ನೀಡಿದೆ. ಹಾಗೆಯೇ ಜಿಯೋ ಟೆಲಿಕಾಂನ ಇತರೆ ಡೇಟಾ ಪ್ಲ್ಯಾನ್‌ಗಳ ಪ್ರಯೋಜನಗಳು ಹೀಗಿವೆ. ಜಿಯೋ ರೂ.151 ಕ್ಕೆ- 30GB ಡೇಟಾ ಸೌಲಭ್ಯ, ಜಿಯೋ ರೂ.201 ಕ್ಕೆ - 40GB ಡೇಟಾ ಸೌಲಭ್ಯ ಮತ್ತು ಜಿಯೋ ರೂ.251ಕ್ಕೆ - 50GB ಡೇಟಾ ಬಳಕೆಗೆ ಲಭ್ಯವಿರಲಿದೆ. ಈ ಪ್ಯಾಕ್‌ಗಳು ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಹೆಚ್ಚು ಅನುಕೂಲಕರ ಅನಿಸಲಿವೆ.

ಏರ್‌ಟೆಲ್‌ ವರ್ಕ ಫ್ರಮ್ ಹೋಮ್ ಪ್ಲ್ಯಾನ್‌

ಏರ್‌ಟೆಲ್‌ ವರ್ಕ ಫ್ರಮ್ ಹೋಮ್ ಪ್ಲ್ಯಾನ್‌

ಏರ್‌ಟೆಲ್‌ ನಿರ್ದಿಷ್ಟ ವರ್ಕ ಫ್ರಮ್ ಹೋಮ್ ಪ್ಲ್ಯಾನ್‌ ಪ್ಲ್ಯಾನ್‌ಗಳನ್ನು ಹೊಂದಿಲ್ಲವಾದರೂ, 598ರೂ.ಪ್ಲ್ಯಾನ್ ಮನೆಯಿಂದ ಕೆಲಸ ಮಾಡುವವರಿಗೆ ಸೂಕ್ತ ಅನಿಸಿದೆ. ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್‌ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಏರ್‌ಟೆಲ್‌

ಹೆಚ್ಚುವರಿ ಡೇಟಾ ಸೌಲಭ್ಯದ ಅನುಕೂಲಕ್ಕಾಗಿ ಏರ್‌ಟೆಲ್‌ ಸಹ 251ರೂ ಯೋಜನೆ ನೀಡಿದ್ದು, ಈ ಯೋಜನೆಯು ಒಟ್ಟು 50GB ಡೇಟಾ ಪ್ರಯೋಜನ ಒಳಗೊಂಡಿದೆ. ಇದೊಂದು ಹೆಚ್ಚುವರಿ ಡೇಟಾ ವೋಚರ್ ಪ್ಲ್ಯಾನ್‌ ಆಗಿರುವ ಕಾರಣ ಈ ಯೋಜನೆಯಲ್ಲಿ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಅನುಕೂಲವಾಗಿದೆ.

ವೊಡಾಫೋನ್ ವರ್ಕ ಫ್ರಮ್ ಪ್ಲ್ಯಾನ್

ವೊಡಾಫೋನ್ ವರ್ಕ ಫ್ರಮ್ ಪ್ಲ್ಯಾನ್

ವೋಡಾಫೋನಿನ 251ರೂ. ಡೇಟಾ ವೋಚರ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಸೌಲಭ್ಯ ದೊರೆಯುತ್ತದೆ. ಇದೊಂದು ಡೇಟಾ ವೋಚರ್ ಆಗಿರುವುದರಿಂದ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಅನುಕೂಲವಾಗಿದೆ.

Most Read Articles
Best Mobiles in India

English summary
BSNL Work from Home plan offers additional data and validity as compared to its key rivals.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X