ವಿಶ್ವದ ಶ್ರೀಮಂತ ಟೆಕ್‌ ಉದ್ಯಮಿಗಳ ಲಿಸ್ಟ್‌ ಇಲ್ಲಿದೆ: ಅಗ್ರಸ್ಥಾನ ಯಾರಿಗೆ?

|

ಫೋರ್ಬ್ಸ್ ಇತ್ತೀಚೆಗೆ ವಿಶ್ವದ ಶ್ರೀಮಂತರ ವಾರ್ಷಿಕ ಪಟ್ಟಿಯನ್ನು ಪ್ರಕಟಿಸಿತು. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಬಿಲಿಯನೇರ್‌ಗಳ ಪಟ್ಟಿಯಲ್ಲಿ 493 ಹೊಸಬರನ್ನು ಸೇರಿಸಲಾಗಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಇದು ವಿಶ್ವದ ಶ್ರೀಮಂತರಿಗೆ 5 ಟ್ರಿಲಿಯನ್ ಡಾಲರ್ ಸಂಪತ್ತು ಮತ್ತು ಅಭೂತಪೂರ್ವ ಸಂಖ್ಯೆಯ ಹೊಸ ಶತಕೋಟ್ಯಾಧಿಪತಿಗಳೊಂದಿಗೆ ದಾಖಲೆಯ ವರ್ಷವಾಗಿದೆ ಎಂದು ವರದಿ ಹೇಳುತ್ತದೆ. ಸತತ ನಾಲ್ಕನೇ ವರ್ಷವೂ ಫೋರ್ಬ್ಸ್ ಪಟ್ಟಿಯನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಯಾರೆಲ್ಲಾ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಫೋರ್ಬ್ಸ್

ಸತತ ನಾಲ್ಕನೇ ವರ್ಷವೂ ಫೋರ್ಬ್ಸ್ ಪಟ್ಟಿಯನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಯಾರೆಲ್ಲಾ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ $177 ಬಿಲಿಯನ್ ನಿವ್ವಳ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಯ ಪ್ರಕಾರ ಅವರ ನಿವ್ವಳ ಮೌಲ್ಯ $151 ಬಿಲಿಯನ್.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರ ಪ್ರಕಾರ ಅವರ ಒಟ್ಟು ನಿವ್ವಳ ಮೌಲ್ಯ $124 ಬಿಲಿಯನ್ ಆಗಿದೆ.

ಫೇಸ್‌ಬುಕ್ ಸ್ಥಾಪಕ- ಮಾರ್ಕ್ ಜುಕರ್ಬರ್ಗ್

ಫೇಸ್‌ಬುಕ್ ಸ್ಥಾಪಕ- ಮಾರ್ಕ್ ಜುಕರ್ಬರ್ಗ್

ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೆನಿಸಿಕೊಂಡಿರುವ ಫೇಸ್‌ಬುಕ್‌ನ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ $ 97 ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ.

ವಾರೆನ್ ಬಫೆಟ್

ವಾರೆನ್ ಬಫೆಟ್

ಫೋರ್ಬ್ಸ್‌ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ವಾರೆನ್ ಬಫೆಟ್ ಅವರು ಆರನೇ ಸ್ಥಾನದಲ್ಲಿದ್ದಾರೆ. 96 ಬಿಲಿಯನ್ ನಿವ್ವಳ ಹೊಂದಿದ್ದಾರೆ.

ಲ್ಯಾರಿ ಎಲಿಸನ್

ಲ್ಯಾರಿ ಎಲಿಸನ್

ಫೋರ್ಬ್ಸ್‌ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಲ್ಯಾರಿ ಎಲಿಸನ್ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಯ ಪ್ರಕಾರ ಒಟ್ಟು ನಿವ್ವಳ ಮೌಲ್ಯ $91.5 ಬಿಲಿಯನ್.

ಲ್ಯಾರಿ ಪೇಜ್

ಲ್ಯಾರಿ ಪೇಜ್

ಲ್ಯಾರಿ ಪೇಜ್ ಫೋರ್ಬ್ಸ್‌ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಕಾಣಿಸಿಕೊಂಡಿದ್ದಾರೆ. ವರದಿ ಪ್ರಕಾರ ಅವರ ಒಟ್ಟು ನಿವ್ವಳ ಮೌಲ್ಯವು $91.5 ಬಿಲಿಯನ್ ಆಗಿದೆ.

ಸೆರ್ಗೆ ಬ್ರಿನ್

ಸೆರ್ಗೆ ಬ್ರಿನ್

ಫೋರ್ಬ್ಸ್‌ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಸ್ಥಾನ ಪಡೆದಿದ್ದಾರೆ. ಇವರು ಒಟ್ಟು $89 ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಲಿಸ್ಟ್‌ನಲ್ಲಿ 10 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ನಿವ್ವಳ ಆಸ್ತಿ $84.5 ಬಿಲಿಯನ್.

ಸ್ಟೀವ್ ಬಾಲ್ಮರ್, ಮಾಜಿ ಸಿಇಒ, ಮೈಕ್ರೋಸಾಫ್ಟ್

ಸ್ಟೀವ್ ಬಾಲ್ಮರ್, ಮಾಜಿ ಸಿಇಒ, ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಒಟ್ಟು ನಿವ್ವಳ ಮೌಲ್ಯ $ 68.7 ಬಿಲಿಯನ್ನೊಂದಿಗೆ ಪಟ್ಟಿಯಲ್ಲಿ 14 ನೇ ಸ್ಥಾನವನ್ನು ಹೊಂದಿದ್ದಾರೆ.

ಮಾ ಹುವಾಟೆಂಗ್, ಟೆನ್ಸೆಂಟ್ ಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ

ಮಾ ಹುವಾಟೆಂಗ್, ಟೆನ್ಸೆಂಟ್ ಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ

ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿ ಟೆನ್ಸೆಂಟ್ ಸ್ಥಾಪಕ ಮಾ ಹುವಾಟೆಂಗ್ ಇದ್ದಾರೆ. ಅವರ ನಿವ್ವಳ ಆಸ್ತಿ $65.8 ಬಿಲಿಯನ್.

ಕಾಲಿನ್ ಹುವಾಂಗ್

ಕಾಲಿನ್ ಹುವಾಂಗ್

ವರದಿಯ ಪ್ರಕಾರ ಪಿಂದುಡುವೊದ ಸಿಇಒ ಕಾಲಿನ್ ಹುವಾಂಗ್ ಅವರ ನಿವ್ವಳ ಮೌಲ್ಯ $55.3 ಬಿಲಿಯನ್ ಮತ್ತು ಅವರು ಪಟ್ಟಿಯಲ್ಲಿ 21 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Most Read Articles
Best Mobiles in India

Read more about:
English summary
Forbes recently announced its annual list of the world’s wealthiest. Despite the Pandemic, the billionaires’ list added 493 new comers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X