ಬಹುನಿರೀಕ್ಷಿತ ಶಿಯೋಮಿಯ ಮೂರು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳು ಲಾಂಚ್!

|

ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಕಂಪನಿಯು ನೂತನವಾಗಿ ಶಿಯೋಮಿ 11T ಮತ್ತು ಶಿಯೋಮಿ 11T ಪ್ರೊ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದರೊಂದಿಗೆ ಬಹುನಿರೀಕ್ಷಿತ ಶಿಯೋಮಿ 11 ಲೈಟ್ 5G NE ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆ ಪೈಕಿ ಶಿಯೋಮಿ 11T ಮತ್ತು ಶಿಯೋಮಿ 11T ಪ್ರೊ ಫೋನ್‌ಗಳು 108 ಮೆಗಾ ಪಿಕ್ಸಲ್‌ ಸೆನ್ಸಾರ್ ಪ್ರೈಮರಿ ಕ್ಯಾಮೆರಾ ಒಳಗೊಂಡಿರುವುದು ಪ್ರಮುಖ ಹೈಲೈಟ್‌ ಆಗಿದೆ.

ಬಹುನಿರೀಕ್ಷಿತ ಶಿಯೋಮಿಯ ಮೂರು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳು ಲಾಂಚ್!

ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ಶಿಯೋಮಿ 11T, ಶಿಯೋಮಿ 11T ಪ್ರೊ ಮತ್ತು ಶಿಯೋಮಿ 11 ಲೈಟ್ 5G NE ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿವೆ. ಹಾಗೆಯೇ ಶಿಯೋಮಿ 11T ಮತ್ತು ಶಿಯೋಮಿ 11T ಪ್ರೊ ಫೋನ್‌ಗಳು 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿವೆ. ಇನ್ನು ಶಿಯೋಮಿ 11 ಲೈಟ್ 5G NE ಸ್ಮಾರ್ಟ್‌ಫೋನ್ 4,250mAh ಬ್ಯಾಟರಿ ಪವರ್ ಪಡೆದಿದೆ. ಇನ್ನುಳಿದಂತೆ ಈ ಮೂರು ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಮತ್ತು ಇವುಗಳ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಹುನಿರೀಕ್ಷಿತ ಶಿಯೋಮಿಯ ಮೂರು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳು ಲಾಂಚ್!

ಶಿಯೋಮಿ 11T ಫೋನ್‌ ಫೀಚರ್ಸ್‌
ಶಿಯೋಮಿ 11T ಫೋನ್‌ 6.67 ಇಂಚಿನ ಫ್ಲಾಟ್ AMOLED ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ 90Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200-ಅಲ್ಟ್ರಾ SoC ಪ್ರೊಸೆಸರ್‌ ಪಡೆದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್‌ ಪಡೆದಿದೆ. ಹಾಗೆಯೇ 8GB RAM ವೇರಿಯಂಟ್ ಆಯ್ಕೆ ಇದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದಯ, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. 5,000mAh ಬ್ಯಾಟರಿ ಬ್ಯಾಕ್‌ ಅಪ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ.

ಶಿಯೋಮಿ 11T ಪ್ರೊ ಫೋನ್‌ ಫೀಚರ್ಸ್‌
ಶಿಯೋಮಿ 11T ಪ್ರೊ ಫೋನ್‌ 6.67 ಇಂಚಿನ ಫ್ಲಾಟ್ AMOLED ಟ್ರೀ ಕಲರ್ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ 120Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಇದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್‌ ಪಡೆದಿದೆ. ಹಾಗೆಯೇ 12GB RAM ವೇರಿಯಂಟ್ ಆಯ್ಕೆ ಇದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದಯ, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ ಅಪ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂರಕವಾಗಿ 120W ಹೈಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಬಹುನಿರೀಕ್ಷಿತ ಶಿಯೋಮಿಯ ಮೂರು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳು ಲಾಂಚ್!

ಶಿಯೋಮಿ 11 ಲೈಟ್ 5G NE ಫೋನ್‌ ಫೀಚರ್ಸ್‌
ಶಿಯೋಮಿ 11 ಲೈಟ್ 5G NE ಫೋನ್‌ 6.55 ಇಂಚಿನ ಫ್ಲಾಟ್ AMOLED ಟ್ರೀ ಕಲರ್ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ 90Hz ರೀಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಇದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಫೋನ್ 8GB RAM ವೇರಿಯಂಟ್ ಆಯ್ಕೆ ಇದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದಯ, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 20 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 4,250mAh ಬ್ಯಾಟರಿ ಬ್ಯಾಕ್‌ ಅಪ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಬೆಲೆ ಎಷ್ಟು?
ಶಿಯೋಮಿ 11T 8GB RAM + 128GB ವೇರಿಯಂಟ್ ಬೆಲೆಯು EUR 499 (ಭಾರತದಲ್ಲಿ ಅಂದಾಜು 43,300ರೂ). ಹಾಗೆಯೇ ಶಿಯೋಮಿ 11T ಪ್ರೊ 8GB RAM + 128GB ವೇರಿಯಂಟ್ ಬೆಲೆಯು EUR 649 (ಭಾರತದಲ್ಲಿ ಅಂದಾಜು 56,400ರೂ.) ಇನ್ನು ಶಿಯೋಮಿ 11 ಲೈಟ್ 5G NE ಸ್ಮಾರ್ಟ್‌ಫೋನ್ 6GB RAM + 128GB ವೇರಿಯಂಟ್ ದರದವು EUR 349 (ಭಾರತದಲ್ಲಿ ಅಂದಾಜು 30,300ರೂ)

Most Read Articles
Best Mobiles in India

English summary
Xiaomi 11T, Xiaomi 11T Pro And Xiaomi 11 Lite 5G NE Launched: Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X