Just In
- 50 min ago
ಮೊಟೊ G62 5G ಫಸ್ಟ್ ಲುಕ್: ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್ಫೋನ್!
- 11 hrs ago
ನಾಯ್ಸ್ ಸಂಸ್ಥೆಯಿಂದ ಹೊಸ ಸ್ಮಾರ್ಟ್ವಾಚ್ ಲಾಂಚ್! 7 ದಿನಗಳ ಬ್ಯಾಟರಿ ಬ್ಯಾಕಪ್!
- 16 hrs ago
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಡಿಲೀಟ್ ಮೆಸೇಜ್ ರಿಕವರಿ ಆಯ್ಕೆ!
- 17 hrs ago
ಭಾರತದಲ್ಲಿ 5G ಪ್ರಾರಂಭಕ್ಕೂ ಮುನ್ನವೇ ಅಚ್ಚರಿ ಮೂಡಿಸಿದ ಓಕ್ಲಾ ವರದಿ!
Don't Miss
- Lifestyle
ಆಗಸ್ಟ್ 21ರವರೆಗೆ ಬುಧ-ಆದಿತ್ಯ ಯೋಗ: ಈ 4 ರಾಶಿಯವರು ಈ ಅವಧಿಯಲ್ಲಿ ಮಾಡಿದ ಕಾರ್ಯಕ್ಕೆ ಯಶಸ್ಸು ಖಚಿತ
- Automobiles
ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ ಸ್ಕೋಡಾ ಕುಶಾಕ್ ಆಕ್ಟಿವ್
- Finance
ಆಗಸ್ಟ್ 18: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್ನಲ್ಲಿ ಲಭ್ಯ? ಮೊಬೈಲ್ನಲ್ಲಿ ವೀಕ್ಷಿಸುವುದು ಹೇಗೆ?
- News
World Photography Day- ವಿಶ್ವ ಛಾಯಾಗ್ರಹಣ ದಿನದ ಮೂಲ ಯಾವ ದೇಶದ್ದು?
- Movies
'ಶೇರ್' ಅವತಾರವೆತ್ತಿದ ಕಿರುತೆರೆ ನಟ ಕಿರಣ್ ರಾಜ್: 3ನೇ ಸಿನಿಮಾ ಶುರು!
- Education
How To Become IAS Officer : ಐಎಎಸ್ ಅಧಿಕಾರಿಯಾಗುವುದು ಹೇಗೆ ?
- Travel
ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
ಸ್ಮಾರ್ಟ್ಫೋನ್ ವಲಯದಲ್ಲಿ ಶಿಯೋಮಿ ಕಂಪೆನಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಬಿನ್ನ ಮಾದರಿಯ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗುರುತಿಸಿಕೊಂಡಿದೆ. ಈಗಾಗಲೇ ಶಿಯೋಮಿ ಕಂಪೆನಿಯ ಹಲವು ವಿಧದ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಹೊಸ ಶಿಯೋಮಿ 12S ಅಲ್ಟ್ರಾ, ಶಿಯೋಮಿ 12S ಪ್ರೊ ಮತ್ತು ಶಿಯೋಮಿ 12S ಸ್ಮಾರ್ಟ್ಫೋನ್ಗಳನ್ನು ಅನಾವರಣಗೊಳಿಸಿದೆ.

ಹೌದು, ಶಿಯೋಮಿ ಕಂಪೆನಿ ತನ್ನ ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದೆ. ಇದರೊಂದಿಗೆ ಶಿಯೋಮಿ 12 ಪ್ರೊ ಡೈಮೆನ್ಸಿಟಿಹೊ ಎಡಿಷನ್ ಅನ್ನು ಕೂಡ ಪರಿಚಯಿಸಿದೆ. ಇನ್ನು ಈ ಸರಣಿಯ ಮೂರು ಸ್ಮಾರ್ಟ್ಫೋನ್ಗಳು ಕೂಡ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿವೆ. ಜೊತೆಗೆ ಈ ಸ್ಮಾರ್ಟ್ಫೋನ್ಗಳು ಲೈಕಾ ಆಪ್ಟಿಕ್ಸ್ ಅನ್ನು ಒಳಗೊಂಡಿವೆ.

ಶಿಯೋಮಿ 12S ಸರಣಿಯ ಮೂರು ಸ್ಮಾರ್ಟ್ಫೋನ್ಗಳು ವಿಭಿನ್ನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್ ಅನ್ನು ಪಡೆದಿವೆ. ಇದರಲ್ಲಿ ಶಿಯೋಮಿ 12S ಅಲ್ಟ್ರಾ 4,860mAh ಬ್ಯಾಟರಿ, ಶಿಯೋಮಿ 12Sಪ್ರೊ 4,600mAh ಬ್ಯಾಟರಿ ಸಾಮರ್ಥ್ಯ ಹಾಗೂ ಶಿಯೋಮಿ 12S ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಆದರೆ ಮೂರು ಫೋನ್ಗಳು ಕೂಡ 10W ರಿವರ್ಸ್ ವಾಯರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿವೆ. ಇನ್ನುಳಿದಂತೆ ಈ ಮೂರು ಸ್ಮಾರ್ಟ್ಫೋನ್ಗಳು ಯಾವೆಲ್ಲಾ ಫೀಚರ್ಸ್ಗಳನ್ನು ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ 12S ಅಲ್ಟ್ರಾ
ಶಿಯೋಮಿ 12S ಅಲ್ಟ್ರಾ ಸ್ಮಾರ್ಟ್ಫೋನ್ 6.73-ಇಂಚಿನ 2K ಅಮೋಲೆಡ್ ಮೈಕ್ರೋ-ಕರ್ವ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ ಆಧಾರಿತ MIUI 13 ಬೆಂಬಲವನ್ನು ಹೊಂದಿದೆ. ಹಾಗೆಯೇ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಹೊಂದಿದೆ.

ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ 1-ಇಂಚಿನ ಸೋನಿಯ IMX989 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,860mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವಾಯರ್ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಶಿಯೋಮಿ 12S ಪ್ರೊ
ಶಿಯೋಮಿ 12S ಪ್ರೊ ಸ್ಮಾರ್ಟ್ಫೋನ್ 6.73 ಇಂಚಿನ 2K ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು DCI-P3 ಬಣ್ಣದ ಹರವು ಹೊಂದಿದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು HDR10+ ಬೆಂಬಲವನ್ನು ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಒಳಗೊಂಡಿದೆ. ಇದು ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ ಆಧಾರಿತ MIUI 13 ಬೆಂಬಲಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಹೊಂದಿದೆ.

ಶಿಯೋಮಿ 12S ಪ್ರೊ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 120W ವೈರ್ಡ್, 50W ವೈರ್ಲೆಸ್ ಮತ್ತು 10W ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಶಿಯೋಮಿ 12S
ಶಿಯೋಮಿ 12S ಸ್ಮಾರ್ಟ್ಫೋನ್ 6.28 ಇಂಚಿನ ಫುಲ್ HD+ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ DCI-P3 ಬಣ್ಣದ ಹರವು ಮತ್ತು 1,100ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದಿದೆ. ಇದು ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಇನ್ನು ಶಿಯೋಮಿ 12S ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಪ್ರೈಮೆರಿ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್, 50W ವೈರ್ಲೆಸ್ ಮತ್ತು 10W ರಿವರ್ಸ್ ವಾಯರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಶಿಯೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್
ಶಿಯೋಮಿ 12 ಪ್ರೊ ಡೈಮೆನ್ಸಿಟಿ ಎಡಿಷನ್ ಫೋನ್ ಶಿಯೋಮಿ 12 ಪ್ರೊ ಮಾದರಿಯನ್ನೇ ಹೋಲುತ್ತದೆ. ಆದರೆ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮೆರಿ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಈ ಫೋನ್ 5,160mAh ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ 12S ಅಲ್ಟ್ರಾ ಸ್ಮಾರ್ಟ್ಫೋನ್ ಬೆಲೆ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ CNY 5,999 (ಅಂದಾಜು 70,700ರೂ)ಆಗಿದೆ.
ಶಿಯೋಮಿ 12S ಪ್ರೊ ಬೇಸ್ ಮಾಡೆಲ್ 8GB RAM + 128GB ಬೆಲೆ CNY 4,699 (ಅಂದಾಜು 55,400ರೂ) ನಿಂದ ಪ್ರಾರಂಭವಾಗುತ್ತದೆ.
ಶಿಯೋಮಿ 12S ಬೇಸ್ ಮಾಡೆಲ್ 8GB RAM + 128GB ಆಯ್ಕೆಯ ಬೆಲೆ CNY 3,999 (ಅಂದಾಜು 47,100ರೂ)ಆಗಿದೆ.
ಇದರೊಂದಿಗೆ ಶಿಯೋಮಿ 12 ಪ್ರೊ ಡೈಮೆನ್ಸಿಟಿ ಆವೃತ್ತಿಯು 8GB + 128GB ಆಯ್ಕೆಗೆ CNY 3,999 (ಸುಮಾರು 47,100ರೂ)ಬೆಲೆಯನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086